RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಶಿಕ್ಷಕರ ಕರ್ತವ್ಯ ದೈವಿ ಸ್ವರೂಪವಾಗಿದೆ : ಮಹಾದೇವ ತೇರದಾಳ

ಗೋಕಾಕ:ಶಿಕ್ಷಕರ ಕರ್ತವ್ಯ ದೈವಿ ಸ್ವರೂಪವಾಗಿದೆ : ಮಹಾದೇವ ತೇರದಾಳ 

ಶಿಕ್ಷಕರ ಕರ್ತವ್ಯ ದೈವಿ ಸ್ವರೂಪವಾಗಿದೆ : ಮಹಾದೇವ ತೇರದಾಳ

ಗೋಕಾಕ ಸೆ 5 : ಶಿಕ್ಷಕ ವೃತ್ತಿ ಶ್ರೇಷ್ಠವಾಗಿದ್ದು ತಂದೆ ತಾಯಿ ನಂತರದ ಸ್ಥಾನ ಶಿಕ್ಷಕರಿಗೆ ಇದೆ ಎಂದು ಇಲ್ಲಿಯ ಜೆಎಸ್‍ಎಸ್ ಮಹಾವಿದ್ಯಾಲಯದ ಉಪನ್ಯಾಸಕ ಮಹಾದೇವ ತೇರದಾಳ ಹೇಳಿದರು.
ಅವರು ಬುಧವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶಿಕ್ಷಕರ ಕರ್ತವ್ಯ ದೈವಿ ಸ್ವರೂಪವಾಗಿದ್ದು, ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡು ರಾಷ್ಟ್ರ ಹಾಗೂ ಸಮಾಜದ ರಕ್ಷಕರಾಗಿದ್ದಾರೆ. ಎಲ್ಲರನ್ನು ತಮ್ಮವರೆಂದು ಭಾವಿಸಿಕೊಂಡು ಹೃದಯ ಶ್ರೀಮಂತಿಕೆಯೊಂದಿಗೆ ಶಿಸ್ತು, ಕ್ಷಮಾ, ಪ್ರೀತಿ, ಕರುಣೆಗಳೊಂದಿಗೆ ಕಾರ್ಯ ನಿರ್ವಹಿಸಿ ಗುರು ದೇವೋಭವರಾಗಿದ್ದಾರೆಂದು ಹೇಳಿದ ಅವರು ಶಿಕ್ಷಕರ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡುವಂತೆ ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಎಸ್.ಆರ್.ಮಹೇಂದ್ರಕರ ವಹಿಸಿದ್ದರು. ವೇದಿಕೆ ಮೇಲೆ ಜೆಎಸ್‍ಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಆರ್.ಎಂ.ಮಹೇಂದ್ರಕರ ಉಪನ್ಯಾಸಕರಾದ ಕೆ.ಕೆ.ನಾಯಿಕ, ಎ.ಎ.ಮೋಕಾಶಿ, ಶಿಕ್ಷಕರಾದ ಎಂ.ಸಿ.ವಣ್ಣೂರ, ಎಸ್.ಎಸ್.ವಾಳವೇಕರ ಇದ್ದರು.
ಶಿಕ್ಷಕಿಯರಾದ ಸ್ಮೀತಾ ಸುಣಧೋಳಿ ಸ್ವಾಗತಿಸಿದರು. ಸ್ಮೀತಾ ಭಂಡಾರಿ ನಿರೂಪಿಸಿದರು. ಎನ್.ಕೆ.ಮಕಾನದಾರ ವಂದಿಸಿದರು.

Related posts: