RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಡಾ. ಸರ್ವಪಳ್ಳಿ ರಾಧಾಕೃಷ್ಣನರ 130ನೇ ದಿನಾಚರಣೆ

ಘಟಪ್ರಭಾ:ಡಾ. ಸರ್ವಪಳ್ಳಿ ರಾಧಾಕೃಷ್ಣನರ 130ನೇ ದಿನಾಚರಣೆ 

ಡಾ. ಸರ್ವಪಳ್ಳಿ ರಾಧಾಕೃಷ್ಣನರ 130ನೇ ದಿನಾಚರಣೆ

ಘಟಪ್ರಭಾ ಸೆ 5 : ಸ್ಥಳೀಯ ಶ್ರೀ ಸಿದ್ಧಿವಿನಾಯಕ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಸರ್ವಪಳ್ಳಿ ರಾಧಾಕೃಷ್ಣನರ 130ನೇ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಗುರುಭಕ್ತಿಯಿಂದ ಆಚರಿಸಿದರು.
ಭವ್ಯ ಭಾರತದ ಶಕ್ತಿಗಳನ್ನು ರೂಪಿಸುವಲ್ಲಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಧೀಮಂತ ನಾಯಕ, ಆದರ್ಶ ಶಿಕ್ಷಕ ಸರ್ವಪಲ್ಲಿ ಡಾ| ರಾಧಾಕೃಷ್ಣರ ತತ್ವಾದರ್ಶಗಳನ್ನು ನಾವು ನಿಜ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಪಕರಾಗೋಣ ಎಂದು ಡಾ. ಸರ್ವಪಳ್ಳಿ ರಾಧಾಕೃಷ್ಣನರ ಭಾವಚಿತ್ರಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಬಿ.ಜಿರಲಿ ಪೂಜೆ ಸಲ್ಲಿಸಿ ಮಾತನಾಡಿದರು.


ಈ ಸಮಯದಲ್ಲಿ ಶಾಲಾ ಮಕ್ಕಳಿಂದ ಗೌರವ ಪೂರ್ವಕವಾಗಿ ಶಿಕ್ಷಕ/ಕಿಯರಿಗೆ ಮಾಲಾಪರ್ಣೆಯನ್ನು ಮಾಡಿದರು. ಜೊತೆಗೆ ಈ ಸಂಧರ್ಭದಲ್ಲಿ ಶಾಲಾ ಮಕ್ಕಳು ರಾಧಾಕೃಷ್ಣನರ ಬಗ್ಗೆ ಭಾಷಣ ಮಾಡಿದರು.

Related posts: