ಬೆಳಗಾವಿ:ಪ್ರಾಬಲ್ಯ ಮೆರೆದ ಹೆಬ್ಬಾಳ್ಕರ .. ಜಾರಕಿಹೊಳಿ ಸಹೋದರರಿಗೆ ಭಾರಿ ಹಿನ್ನಡೆ
ಪ್ರಾಬಲ್ಯ ಮೆರೆದ ಹೆಬ್ಬಾಳ್ಕರ .. ಜಾರಕಿಹೊಳಿ ಸಹೋದರರಿಗೆ ಭಾರಿ ಹಿನ್ನಡೆ
ಬೆಳಗಾವಿ ಸೆ 7 : ತೀವ್ರ ಪೈಪೋಟಿ ಏರ್ಪಟ್ಟಿದ ಬೆಳಗಾವಿ ಪಿಎಲ್ ಡಿ ಬ್ಯಾಂಕನ ಚುನಾವಣೆಯಲ್ಲಿ ಕೊನೆಗೂ ಲಕ್ಷ್ಮೀ ಹೆಬ್ಬಾಳ್ಕರ ಬಣದವರು ಗೆಲುವಿನ ನಗೆ ಬೀರಿದ್ದರೆ , ಪ್ರತಿಷ್ಠಿತ ಜಾರಕಿಹೊಳಿ ಸಹೋದರರಿಗೆ ಭಾರಿ ಮುಖಭಂಗವಾಗಿದೆ ಎಂದು ಬಣ್ಣಿಸಲಾಗಿದೆ
ಶಾಸಕ ಸತೀಶ್ ಜಾರಕಿಹೊಳಿ ಬಣದ ಸದಸ್ಯರು ನಾಮಪತ್ರ ಸಲ್ಲಿಸದೇ ಹೆಬ್ಬಾಳ್ಕರ್ ಬಣಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ ಹಿನ್ನಲೆ ಅವಿರೋಧ ಆಯ್ಕೆಯಾಗಿದ್ದು, ಅಧಿಕೃತ ಪ್ರಕಟಣೆಯೊಂದೇ ಬಾಕಿಯಿದೆ.
ಪಿಎಲ್ಡಿ ಬ್ಯಾಂಕ್ಗೆ ಹೆಬ್ಬಾಳ್ಕರ್ ಬಣದ ಮಹಾದೇವ ಪಾಟೀಲ್ ಅಧ್ಯಕ್ಷ ಸ್ಥಾನಕ್ಕೆ, ಬಾಬಾಸಾಹೇಬ ಜಮಾದಾರ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಶಾಸಕ ಸತೀಶ್ ಜಾರಕಿಹೊಳಿ ಬಣದಿಂದ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ.