RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಗೋಕಾಕ:ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ 

ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಗೋಕಾಕ ಸೆ 9 : ಲಯನ್ಸ್ ಮತ್ತು ಲಯನೆಸ್ಸ ಸಂಸ್ಥೆ ಗೋಕಾಕ, ಎಮ್.ಎಮ್.ಜೋಶಿ ನೇತ್ರ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಬೆಳಗಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ|| ಮುರಗೋಡ ಆಸ್ಪತ್ರೆಯಲ್ಲಿ 27ನೇ ಮಾಸಿಕ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ 45 ಜನರ ನೇತ್ರಗಳನ್ನು ತಪಾಸಣೆ ನಡಿಸಿ ಅದರಲ್ಲಿ 22 ಜನರ ನೇತ್ರಗಳಿಗೆ ಉಚಿತವಾಗಿ ಹುಬ್ಬಳ್ಳಿಯ ಎಮ್.ಎಮ್.ಜೋಶಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ಲಯನ್ಸ್ ಸಂಸ್ಥೆಯ ಗುರುದೇವ ಸಿದ್ದಾಪೂರಮಠ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ|| ಆಶೋಕ ಮುರಗೋಡ, ಡಾ|| ಸಂಜು ಕುಲಕರ್ಣಿ, ಡಾ|| ಸಚಿನ ಮಂತಾವರ, ವ್ಯವಸ್ಥಾಪಕ ಸಖಾರಾಮ ಬಡಿಗೇರ, ವಿಶ್ವನಾಥ ಬೆಲ್ಲದ, ಅಶೋಕ ದಯನ್ನವರ ಇದ್ದರು.

Related posts: