RNI NO. KARKAN/2006/27779|Thursday, November 7, 2024
You are here: Home » breaking news » ಮೂಡಲಗಿ:ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ

ಮೂಡಲಗಿ:ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ 

ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ

ಮೂಡಲಗಿ ಸೆ 9 : ಹಣಕಾಸಿನ ಸಂಸ್ಥೆಗಳನ್ನು ಕಟ್ಟುವದು ಸುಲಭ. ಆದರೆ ಅದನ್ನು ಉಳಿಸಿ ಬೆಳೆಸುವಸುವದು ಅಷ್ಟು ಸುಲಭವಾದ ಕೆಲಸವಲ್ಲ. ಸಂಸ್ಥೆ ಬೆಳೆಯಲು ಸಿಬ್ಬಂದಿ ಮತ್ತು ಶೇರುದಾರರು ಸಂಸ್ಥೆಗೆ ಎರಡು ಕಣ್ಣುಗಳಿದಂತೆ. ಆಡಳಿತ ಮಂಡಳಿ ಅವುಗಳ ನಡುವಿನ ಕೊಂಡಿಗಳಂತೆ ಕಾರ್ಯ ನಿರ್ವಹಿಸಿದರೆ ಮಾತ್ರ ಒಂದು ಹಣಕಾಸಿನ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಸುರೇಶ ಲಂಕೆಪ್ಪನವರ ಹೇಳಿದರು.
ಅವರು ಶನಿವಾರ ಸಂಜೆ ಜರುಗಿದ ಇಲ್ಲಿಯ ಜ್ಯೋತಿ ಅರ್ಬನ ಕೋಆಫ್ ಕ್ರೆಡಿಟ್ ಸೊಸಾಯಟಿ ಇದರ 13 ನೇ ವಾರ್ಷಿಕ ಸರ್ವಸಾಧಾರಣಾ ಸಭೆಯ ಮುಖ್ಯ ಅತಿಥಿಗಳ ಸ್ಥಾನದಿಂದ ಮಾತನಾಡಿ, ಮೂಡಲಗಿಯಲ್ಲಿ ಸಹಕಾರಿ ಸಂಘಗಳ ಹೊಳೆಯೇ ಹರಿಸಿದೆ. ಎಲ್ಲವೂ ಪ್ರಗತಿಪಥದತ್ತ ನಡೆಯುತ್ತಿರುವದು ಹೆಮ್ಮೆಯ ಸಂಗತಿ. ವಾಣಿಜ್ಯ ಉದ್ದೇಶಗಳಿಗಾಗಿ ಮಾತ್ರ ಸಾಲ ನೀಡದೇ ಶೈಕ್ಷಣೀಕವಾಗಿ, ಚಿಕ್ಕ ಚಿಕ್ಕ ಉದ್ದಿಮೆಗಳಿಗೂ ಸಾಲ ನೀಡಬೇಕೆಂದರು. ಸಾಲಗಾರರು ಪಡೆದ ಸಾಲವನ್ನು ಸರಿಯಾಗಿ ತುಂಬಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಮದಗುಣಕಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಶೇರುದಾರರಿಗೆ ಹೆಚ್ಚಿನ ಸೌಲಭ್ಯ ನೀಡಲಾಗುವದೆಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಶ್ರೀಪಾದಬೋಧ ಸ್ವಾಮಿಜಿಗಳು, ಜ್ಯೋತಿ ಅರ್ಬನ ಸೊಸಾಯಟಿಯು ಹೆಚ್ಚು ಹೆಚ್ಚು ಶಾಖೆಗಳನ್ನು ಪ್ರಾರಂಭಿಸಿ ನಿರಂತರ ಜ್ಯೋತಿಯಾಗಿ ಬೆಳಗಲಿ ಎಂದು ಆಶೀರ್ವಚನ ನೀಡಿದರು.
ಬ್ಯಾಂಕಿನ ನಿರ್ದೇಶಕ ಅಪ್ಪಯ್ಯಪ್ಪ ನೇಮಗೌಡರ ವರದಿ ವಾಚನ, ಪ್ರಧಾನ ವ್ಯವಸ್ಥಾಪಕ ಗಿರೀಶ ಆಸಂಗಿ ಅಡ್ವಾಪತ್ರಿಕೆ, ಮುತ್ತೆಪ್ಪ ಗೌರಿಗುಡಿ ಲಾಭ ಹಾನಿ, ನಾಗಪ್ಪ ಗಾಣಿಗೇರ ಅಂದಾಜು ಲಾಭ ಹಾನಿ, ಮಂಜುನಾಥ ಹಡಪದ ಅಂದಾಜು ಲಾಭ ಹಾನಿ ಪತ್ರಿಕೆ ಮಂಡಿಸಿದರು.
ಉತ್ತಮ ಸಹಕಾರಿ ಪ್ರಶಸ್ತಿ ಪಡೆದ ಸೊಸಾಯಟಿಯ ಅಧ್ಯಕ್ಷ ಮಲ್ಲಪ್ಪ ಮದಗುಣಕಿ ಅವರನ್ನು ಸತ್ಕರಿಸಲಾಯಿತು.
ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಶ್ರೀಶೈಲ ಜೈನಾಪೂರ, ನಿರ್ದೇಶಕರಾದ ಶ್ರೀಶೈಲ ಗಾಣಿಗೇರ, ಮಲ್ಲಪ್ಪ ನೇಮಗೌಡರ, ಮಲ್ಲಪ್ಪ ಎಚ್. ಗಾಣಿಗೇರ, ಚಂದ್ರು ಗಾಣೀಗ, ಬಸವರಾಜ ನೇಮಗೌಡರ, ಸುನೀಲ ಕಡಪಟ್ಟಿ, ಅಶೋಕ ರೂಡಗಿ, ಗಿರಿಮಲ್ಲಪ್ಪ ಹಂದಿಗುಂದ, ಇಲಾಹಿ ತಹಸಿಲ್ದಾರ, ಮುತ್ತು ವರ್ಗಿ ಹಾಗೂ ವಿವಿಧಶಾಖೆಗಳ ಸಲಹಾ ಸಮೀತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಕಾಶ ರಡೆರಟ್ಟಿ ನಿರೂಪಿಸಿದರು. ಶಿವಾನಂದ ಹುದ್ದಾರ ಸ್ವಾಗತಿಸಿದರು. ಗಜಾನನ ಡಾಂಬೋಳಿ ವಂದಿಸಿದರು.

Related posts: