ಗೋಕಾಕ:ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ
ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ
ಗೋಕಾಕ ಸೆ 10 : ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸೋಮವಾರ ಮುಂಜಾನೆ ನಗರ ಸಭೆ ಕಚೇರಿ ಎದುರು ಸೇರಿದ ಕ.ರ.ವೇ. ಕಾರ್ಯಕರ್ತರು ಕರ್ತವ್ಯಲೋಪ ಎಸಗುತ್ತಿರುವ ನಗರ ಸಭೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿ ಲೆಕ್ಕಾಧಿಕಾರಿ ಸಾಗರೇಕರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ನಗರದ ವಾರ್ಡ ನಂ. 21ರ ಪಾಯಸಾಗರ ಶಾಲೆಯ ಹಿಂದೆ ಇರುವ ಬೃಹತ್ತ ಪ್ರಮಾಣದ ನೀರು ಸಂಗ್ರಹಣಾ ಟ್ಯಾಂಕು ತುಂಬಿ ಪದೇ ಪದೇ 2-3ಗಂಟೆಗಳವರೆಗೆ ನೀರು ರಸ್ತೆಗೆ ಹರಿದು ಗಟಾರು ಪಾಲಾಗಿ ಅಂಬೇಡ್ಕರ ನಗರದ ಮುಖ್ಯರಸ್ತೆಯಲ್ಲಾ ನೀರು ತುಂಬಿ ಹರದಾಡುತ್ತಿದೆ. ಈ ರೀತಿ ನೀರು ಪೋಲಾಗುತ್ತಿರುವುದು ಮೊದಲನೆ ಸಲ ಅಲ್ಲಾ. ಹಿಂದೆ ಕಳೆದ 3-4 ಬಾರಿ ನೀರು ಹರಿದು ಗಟಾರು ಪಾಲಾಗಿದ್ದು,ಇದರ ಬಗ್ಗೆ 24 x 7 ಕುಡಿಯುವ ನೀರಿನ ಯೋಜನೆಯ ಗುತ್ತಿಗೆ ಪಡೆದ ಜೈನ ಕಂಪನಿಯ ಬಸವರಾಜ ಮಠಪತಿಗೆ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿ.ಎಸ್. ತಡಸಲೂರ ಅವರಿಗೆ ಹಲವಾರು ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದಲ್ಲದೆ ಕಳೆದು ಹಲವು ವರ್ಷಗಳಿಂದ ಇಲ್ಲಿ ಕಂದಾಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರು ನೀರಿನ ಕರ, ಆಸ್ತಿ ಕರ, ಮನೆ ಕರ, ಆಸ್ತಿ ದಾಖಲಾತಿ, ಫಾರ್ಮ ನಂ. 3 ಸೇರಿದಂತೆ ಇನ್ನಿತರ ದಾಖಲಾತಿಗಳನ್ನು ನೀಡಲು ಮತ್ತು ದಾಖಲಾತಿ ಮಾಡಿಕೊಳ್ಳಲು ನಗರದ ಸಾರ್ವಜನಿಕರಿಂದ ಸರಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ಪಡೆದು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಜೈನ ಕಂಪನಿಯ, ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಕಂದಾಯ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕ.ರ.ವೇ ಸಾರ್ವಜನಿಕರ ಪರವಾಗಿ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ಅಶೋಕ ಬಂಡಿವಡ್ಡರ, ಮುಗುಟ ಫೈಲವಾನ, ಹನೀಫ ಸನದಿ, ಶೆಟ್ಟೆಪ್ಪ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ನಿಯಾಜ ಪಟೇಲ, ಮಲ್ಲಪ್ಪ ತಲೆಪ್ಪಗೋಳ, ಲಕ್ಷ್ಮಣ ಗೊರಗುದ್ಧಿ, ರಾಮಣ್ಣ ಸಣ್ಣಲಗಮನ್ನವರ, ಶ್ರೀಕಾಂತ ಬಾದರವಾಡೆ, ಯಲ್ಲಪ್ಪ ವಣ್ಣೂರ, ಈರಪ್ಪ ಬಬ್ಬರಗಿ, ಬಸು ಗಾಡಿವಡ್ಡರ, ಕಾಮೇಶ ಹಂಚಿನಮನಿ, ರಾಜು ಬಂಡಿವಡ್ಡರ, ರಮೇಶ ಬಂಡಿವಡ್ಡರ, ಸಿದ್ರಾಮ ಬಂಡಿವಡ್ಡರ, ಪರಶುರಾಮ ಬಂಡಿವಡ್ಡರ, ವಿಠ್ಠಲ ಬಂಡಿವಡ್ಡರ, ರಾಮ ಕೊಂಗನೋಳಿ, ದಸ್ತಗೀರ ಮುಲ್ಲಾ, ಫಕೀರಪ್ಪ ಗಣಾಚಾರಿ, ಸಂಜು ಗಾಡಿವಡ್ಡರ, ಅಪ್ಪಯ್ಯ ತಿಗಡಿ, ಹನಮಂತ ಬಡಿಗವಾಡ, ಮಲ್ಲು ಸಂಪಗಾರ, ಕಿರಣ ತೊಗರಿ, ಆನಂದ ಬಿರಡಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.