RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಅವಮಾನವನ್ನೆ ಬಹುಮಾನವನ್ನಾಗಿ ಸ್ವೀಕರಿಸಿ : ಡಾ|| ರಂಗರಾಜ ವನದುರ್ಗ

ಗೋಕಾಕ:ಅವಮಾನವನ್ನೆ ಬಹುಮಾನವನ್ನಾಗಿ ಸ್ವೀಕರಿಸಿ : ಡಾ|| ರಂಗರಾಜ ವನದುರ್ಗ 

ಅವಮಾನವನ್ನೆ ಬಹುಮಾನವನ್ನಾಗಿ ಸ್ವೀಕರಿಸಿ : ಡಾ|| ರಂಗರಾಜ ವನದುರ್ಗ

ಮಮದಾಪೂರ ಸೆ 12 :ನನಗೆ ಓದಲು,ಬರೆಯಲು ಬರುವುದಿಲ್ಲ.ನಾನು ಅಂದವಾಗಿಲ್ಲ.ನನ್ನಲ್ಲಿ ದುಡ್ಡಿಲ್ಲ ನನಗೆ ತೊಡಲು ಬಟ್ಟೆಯಿಲ್ಲ ಎಂದು ಕೊರಗಬೇಕಾಗಿಲ್ಲ ಏನೆಲ್ಲಾ ಇದ್ದರೂ ಏನೂ ಸಾಧಿಸಾಲಾಗದ ಸ್ಥಿತಿ ಒಂದು ಕಡೆಗೆ ಆದರೆ ಏನೂ ಇಲ್ಲದಿದ್ದರು ಅಂಜದೇ ಅಳುಕದೇ ಇಲ್ಲದಿರುವದನ್ನು ಸವಾಲನ್ನಾಗಿ ಪರಿಗಣಿಸಿ ಅವಮಾನವನ್ನೆ ಬಹುಮಾನವನ್ನಾಗಿ ಸ್ವೀಕರಿಸುವದೇ ಜೀವನವಾಗಿದೆ.ಗುರುವಾದವನು ವಿದ್ಯಾರ್ಥಿಗಳಿಗೆ ಅಕ್ಷರ ಬರೆಯುವದನ್ನು, ಓದುವುದನ್ನು,ಕಲಿಸುತ್ತಾ, ಜ್ಞಾನ ನೀಡುವದರೊಂದಿಗೆ ವಿದ್ಯಾರ್ಥಿಗಳಿಗೆ ಗೆಲುವನ್ನು ಹಾಗೂ ಸೋಲನ್ನು ಸಮಾನವಾಗಿ ಸ್ವೀಕರಿಸುವದನ್ನು ಕಲಿಸುವುದು ಅಗತ್ಯವಾಗಿದೆ. ಎಂದು ಬೆಳಗಾವಿಯ ರಾಣಿ ಚೆನ್ನಮ್ಮಾ ವಿಶ್ವ ವಿದ್ಯಾಲಯದ ಕುಲಸಚಿವರಾದ ಡಾ|| ರಂಗರಾಜ ವನದುರ್ಗ ಹೇಳಿದರು.
ಅವರು ಗುರುಸ್ಮøತಿ ಪ್ರತಿಸ್ಠಾನವು ಮಮದಾಪೂರದ ಚಿಂತಾಮಣಿ ಫ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಾ|| ಸರ್ವಪಲ್ಲಿ ರಾಧಾಕೃಷ್ಣನರವರ 131 ನೇ ಜನ್ಮದಿನಾಚರಣೆ ಹಾಗೂ ಗುರುವಂದನಾ ಸಮಾರಂಭ ಉದ್ಘಾಟಿಸಿ ವಿದ್ಯಾರ್ಥಿಗಳ ಮುಖದಲ್ಲಿ ನಗುವಿನ ರಂಗೋಲಿ ಮೂಡಿಸಿ ಸಮಾಜದಲ್ಲಿ ಮುಂದೊಂದು ದಿನ ಹೇಗೆ ತಲೆಎತ್ತಿ ಬದುಕಬೇಕು ನಮ್ಮಲ್ಲಿ ನಾವು ಹೇಗೆ ಆತ್ಮಸ್ಥೈರ್ಯ ತುಂಬಿಕೊಂಡು ಬದುಕಬೇಕೆನ್ನುವದರ ಬಗ್ಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಶಿಕ್ಷಕರು ಕೇವಲ ಬಿಲ್ಲು ಮತ್ತು ಬೆಲ್ಲಗೆ ಮಾತ್ರ ಸಿಮಿತವಾಗದೆ ತಮ್ಮ ವೃತ್ತಿಯನ್ನು ಮಾಡಲು ಕರೆನಿಡಿದರು.
ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಶಿ ಪಾಟೀಲರಿಗೆ “ಗೋಕಾವಿರತ್ನ”ಪ್ರಶಸ್ತಿ ಸಂಕೇಶ್ವರದ ವಿದ್ವಾಂಸರಾದ ಡಾ|| ಗುರುಪಾದ ಮರಿಗುದ್ದಿ ಇವರಿಗೆ “ಗೋಕಾವಿ ಗುರುರತ್ನ”ಪ್ರಶಸ್ತಿ ಗೋಕಾಕದ ಶ್ರೀ ಯಲ್ಲನಗೌಡ ಪಾಟೀಲ ಇವರಿಗೆ “ಗೋಕಾವಿ ಸೇವಾರತ್ನ”ಪ್ರಶಸ್ತಿ ಹಾಗೂ ಗೋಕಾಕ ನಗರದ ಪ್ರಸಿದ್ಧ ಹೃದಯರೋಗ ತಜ್ಞ ಡಾ|| ಸಿದ್ದಣ್ಣ ಕಮತ ಇವರಿಗೆ “ಗೋಕಾವಿ ವೈದರತ್ನ”ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀ ವ್ಹಿ.ಎಂ.ಸೂಲಿಗಾವಿ,ಶ್ರೀ ಎಸ್.ಎ.ನಾಡಗೌಡರ, ಡಾ|| ರೇಣುಕಾ.ಬಾ.ದಾಸನ್ನವರ,ಶ್ರೀಮತಿ ಶಾಂತಾ.ಸುರೇಶ.ಭುಜನ್ನವರ,ಶ್ರೀ ಬಿ.ಕೆ.ಕುಲಕರ್ಣಿ,ಶ್ರೀಮತಿ ಶೋಭಾ.ಮುದ್ದಾರ,ಶ್ರೀಮತಿ ಎ.ಎಲ್.ಜಂಬಗಿ,ಶ್ರೀ ಸುರೇಂದ್ರ. ಹೊನಕುಪ್ಪಿ,ಶ್ರೀ ಸಂಜಯ.ಮ.ಕೇಸ್ತಿ, ಶ್ರೀಮತಿ ಶೀಲಾ.ಡೈನಿಯಲ,ಶ್ರೀ ಅಶೋಕ.ಹಾಲಭಾಂವಿ,ಕು:ಲಕ್ಷ್ಮೀ.ವಡೇರ ಇವರನ್ನು ಸನ್ಮಾನಿಸಲಾಯಿತು.
ಲಕ್ಷ್ಮೀ.ವಡೇರ ಇವರ ಭರತನಾಟ್ಯ ಶಾಲಾಮಕ್ಕಳಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮಗಳನ್ನು ಜರುಗಿಸಲಾಯಿತು.ನೂತನ ಗೌರವಾಧ್ಯಕ್ಷ ಶ್ರೀ ಅಶೋಕ.ಲಗಮಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು ಹಡಗಿನಾಳ ಗ್ರಾಮದ ಶ್ರೀ ಮುತ್ತೆಶ್ವರ ಸ್ವಾಮೀಜಿ.ಹಾಗೂ ಶ್ರೀ.ಶ್ರೀ ಮೌನಮಲ್ಲಿಕಾರ್ಜುನ ಮಹಾಸ್ವಾಮೀಗಳು ಮಮದಾಪೂರ ಇವರು ದಿವ್ಯ ಸಾನಿಧ್ಯವನು ್ನವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ|| ಪಾರ್ವತಿ.ಹೊಸಮನಿ ಶ್ರೀ ಜಯಾನಂದ.ಮಾದರ.ಪ್ರಾಚಾರ್ಯರು ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯ ಗೋಕಾಕ. ಸಿದ್ದ¥.À್ಪ ಕಮತ.ತಾ ಪಂ.ಸದಸ್ಯರು ಮಮದಾಪೂರ,ಶ್ರೀಮತಿ ನಾಗವ್ವ.ಶಿಂಗಾಡಿ.ಅಧ್ಯಕ್ಷರು ಗ್ರಾ.ಪಂ.ಮಮದಾಪೂರ,ಶ್ರೀ ಹಣಮಂತ.ಗೋಪಾಳಿ.ಉಪಾಧ್ಯಾಕ್ಷರು ಗ್ರಾ.ಪಂ.ಮಮದಾಪೂರ.ಶ್ರೀ ಮಲ್ಲಪ್ಪ ಕಮ ಗೌವರವ ಕಾರ್ಯದರ್ಶಿಗಳು ಚಿ.ಪಾವಟೆ ಫ್ರೌಢಶಾಲೆ ಮಮದಾಪೂರ.ಶ್ರೀ ಎಂ.ಎಸ್.ಮುರಗೋಡ ಮುಖೋಪಾಧ್ಯಯರು ಚಿ.ಪಾವಟೆ ಫ್ರೌಢಶಾಲೆ ಮಮದಾಪೂರ.ಇವರು ಗೌರವ ಉಪಸ್ಥಿತಿಯನ್ನು ಹೊಂದಿದ್ದರು. ಶಿಕ್ಷಕ ಸಂದೀಪ. ಥೋರಾತ ಸ್ವಾಗತಿಸಿದರು. ಸಂಸ್ಥಾಪಕ ಅಧ್ಯಕ್ಷರು ಶ್ರೀ ಚೇತನ ಜೋಗನ್ನವರ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.ಶಿಕ್ಷಕಿಯರಾದ ಶ್ರೀಮತಿ ಮಹಾನಂದಾ.ಪಾಟೀಲ. ಮತ್ತು ಶ್ರೀಮತಿ ರಾಜೇಶ್ವರಿ ಜಾಧವ ನಿರೂಪಿಸಿದರು.ಸುರೇಖಾ.ತೋಳಿ ವಂದಿಸಿದರು.

Related posts: