ಮೂಡಲಗಿ:ರಾಷ್ಟ್ರೀಯ ಫೋಷಣೆ ಅಭಿಯಾನ ಮಾಸಾಚರಣೆ ಜಾಥಾ
ರಾಷ್ಟ್ರೀಯ ಫೋಷಣೆ ಅಭಿಯಾನ ಮಾಸಾಚರಣೆ ಜಾಥಾ
ಮೂಡಲಗಿ ಸೆ 12 : ಇಲ್ಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃಧ್ದಿ ಇಲಾಖೆಯ ವತಿಯಿಂದ “ರಾಷ್ಟ್ರೀಯ ಫೋಷಣೆ ಅಭಿಯಾನ ಮಾಸಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾಕ್ಕೆ ಬುಧವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ: ಭಾರತಿ ಕೋಣಿ ಚಾಲನೆ ನೀಡಿದರು.
ಸಿಡಿಪಿಒ ವಾಯ್.ಎಮ್.ಗುಜನಟ್ಟಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃಧ್ದಿ ಇಲಾಖೆಯ ಯೋಜನೆಗಳಾದ ಮಾತೃ ವಂದನಾ, ಮಾತೃ ಪೂರ್ಣ, ಅಪೌಷ್ಠಿಕ ಮಕ್ಕಳನ್ನು ಗುರುತಿಸುವದು, ಸ್ವಚ್ಚತೆ, ನೈರ್ಮಲ್ಯ ಇತ್ಯಾದಿ ಯೋಜನೆಗಳ ಕುರಿತು ಸೆ.30 ವರಿಗೆ ರಾಷ್ಟ್ರೀಯ ಫೋಷಣೆ ಅಭಿಯಾನ ಮಾಸಾಚರಣೆ” ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಈ ಯೋಜನೆಗಳ ಲಾಭ ಪಡೆದುಕೊಳ್ಳಬೇಕೆಂದರು.
ಜಾಥಾವು ಸರಕಾರಿ ಪ್ರಾಥಮಿಕ ಶಾಲೆಯ ಆವರಣದಿಂದ ಕಲ್ಮೇಶ್ವರ ವೃತದ ಮೂಲಕ, ಚೆನ್ನಮ್ಮ ವೃತ್ತ, ಕರೇಮ್ಮಾ ದೇವಿ ವೃತ್ತ, ಬಸವೇಶ್ವರ ವೃತ್ತ, ಸಂಗಪ್ಪಣ್ಣ ವೃತದ ಮೂಲಕ ಸರಕಾರದ ಯೋಜನೆಗಳ ಘೋಷಣೆಗಳನ್ನು ಕೂಗುತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಭಾಗವಹಿಸಿದರು.