RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಣೆ

ಗೋಕಾಕ:ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಣೆ 

ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಣೆ

ಗೋಕಾಕ ಸೆ 15 : ಬಡತನ ರೇಖೆಗಿಂತ ಕೆಳಗಿರುವ ಎಲ್ಲ ವರ್ಗಗಳ ಕುಟುಂಬಕ್ಕೆ ಕೇಂದ್ರ ಸರ್ಕಾರವು ಉಜ್ವಲ ಎಲ್‍ಪಿಜಿ ಗ್ಯಾಸ್ ಸಂಪರ್ಕಗಳನ್ನು ಕಲ್ಪಿಸಿಕೊಡುತ್ತಿದ್ದು, ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ) ಹೇಳಿದರು.
ತಾಲೂಕಿನ ಮೆಳವಂಕಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಶನಿವಾರದಂದು ಫಲಾನುಭವಿಗಳಿಗೆ ಉಜ್ವಲ ಎಲ್‍ಪಿಜಿ ಗ್ಯಾಸ್‍ಗಳನ್ನು ವಿತರಿಸಿ ಮಾತನಾಡಿದ ಅವರು, 2011 ರ ಜನಗಣತಿ ಪ್ರಕಾರ ಬಿಪಿಎಲ್ ಕುಟುಂಬದವರಿಗೆ ಈ ಯೋಜನೆ ಅನ್ವಯವಾಗುತ್ತದೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತ ಪರವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿಂದಲೇ ಸನ್ನದ್ಧರಾಗಬೇಕೆಂದು ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದ ಅವರು, ಇವರಿಂದಲೇ ಅರಭಾವಿ ಕ್ಷೇತ್ರ ಎಲ್ಲದರಲ್ಲೂ ವಿಕಾಸಗೊಳ್ಳುತ್ತಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಶಾಸಕರ ಅವಧಿಯಲ್ಲಿ ಅನುಷ್ಠಾನಗೊಂಡಿವೆ ಎಂದು ಹೇಳಿದರು.
ಮಂಪಂ ಮಾಜಿ ಪ್ರಧಾನ ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ರಾಮಪ್ಪ ಕಾಪಸಿ, ಎನ್‍ಎಸ್‍ಎಫ್ ಅತಿಥಿ ಗೃಹದ ಸಿ.ಪಿ ಯಕ್ಷಂಬಿ, ಈರಪ್ಪ ಬೀರನಗಡ್ಡಿ, ಸತ್ತೆಪ್ಪ ಬಬಲಿ, ಅಲ್ಲಪ್ಪ ಕಂಕಣವಾಡಿ, ರಮೇಶ ಬೀರನಗಡ್ಡಿ, ಈರಬಸು ವನಕಿ, ಭೀಮಶೆಪ್ಪ ಕಾಪಸಿ, ಬಸವರಾಜ ಅಡಿಬಟ್ಟಿ, ಬಸವರಾಜ ಬೀರನಗಡ್ಡಿ, ಯಮನಪ್ಪ ಚುಂಚನೂರ, ಸೋಮಪ್ಪ ಕಿತ್ತೂರ, ರಾಯಪ್ಪ ಅಡಿಬಟ್ಟಿ, ಅಡಿವೆಪ್ಪ ಹಡಗಿನಾಳ, ಬಸವಂತ ಕಾಪಸಿ, ದುಂಡಪ್ಪ ಕಂಕಣವಾಡಿ, ದೀಪಕ ಕಡಕೋಳ, ಪಿಡಿಓ ಮೂಡಲಗಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಜ್ವಲ ಸಿಲಿಂಡರ್‍ಗಳನ್ನು ಗಣ್ಯರು ವಿತರಿಸಿದರು.

Related posts: