RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸದಸ್ಯರ ಆರ್ಥಿಕ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ

ಗೋಕಾಕ:ಸದಸ್ಯರ ಆರ್ಥಿಕ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ 

ಸದಸ್ಯರ ಆರ್ಥಿಕ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ

ಗೋಕಾಕ ಸೆ 16 : ಬದಲಾಗುತ್ತಿರುವ ಆರ್ಥಿಕ ಪರಿಸರದಲ್ಲಿ ಸಹಕಾರ ತತ್ವ ಸಿದ್ದಾಂತದೊಡನೆ ಆಧುನಿಕ ಸ್ಪರ್ಶದೊಂದಿಗೆ ಶತಮಾನದ ಇತಿಹಾಸವನ್ನು ಕಂಡಿರುವ ಬ್ಯಾಂಕ್‍ನ್ನು ಮುನ್ನಡೆಸಲು ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ದಿ ಗೋಕಾಕ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ ಹೇಳಿದರು.
ರವಿವಾರದಂದು ನಗರದ ಸಮುದಾಯ ಭವನದಲ್ಲಿ ದಿ. ಗೋಕಾಕ ಅರ್ಬನ್ ಬ್ಯಾಂಕಿನ್ 112ನೇ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದ ಅವರು, ಎಲ್ಲರ ಸಹಕಾರದೊಂದಿಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.18 ಕೋಟಿ ನಿವ್ವಳ ಲಾಭ ಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ತಿಳಿಸಿದರು.
ಸದಸ್ಯರ ಆರ್ಥಿಕ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆಧುನಿಕ ಸ್ಪರ್ಶದೊಂದಿಗೆ ಹಲವಾರು ಶಾಖೆಗಳನ್ನು ತೆರೆಯುವುದರೊಂದಿಗೆ ಪ್ರಗತಿ ಪಥದತ್ತ ಮುನ್ನಡೆಯುತ್ತಿದೆ. ಸದಸ್ಯರು ಬ್ಯಾಂಕಿನೊಂದಿಗೆ ನಿರಂತರ ವ್ಯವಹಾರ ನಡೆಸಿ, ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ಬ್ಯಾಂಕಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ತಾವು ಆರ್ಥಿಕವಾಗಿ ಸದೃಢರಾಗಿ ಬ್ಯಾಂಕಿನ ಪ್ರಗತಿಗೆ ಸಹಕರಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಉಪಾಧ್ಯಕ್ಷ ಡಿ.ಸಿ.ಬಿದರಿ, ನಿರ್ದೇಶಕರುಗಳಾದ ಜೆ.ಎಮ್.ಮುನ್ನವಳಿ, ವಿ.ಎಸ್.ಬಿದರಿ, ಎಮ್.ಡಿ.ಚುನಮರಿ, ಎಸ್.ಬಿ.ಮಗದುಮ್ಮ, ಸಿ.ಬಿ.ತಾರಳಿ, ಎಸ್.ವಿ.ಘೋಡಗೇರಿ, ಎಸ್.ಎಮ್.ಕುರಬೇಟ, ಎ.ಕೆ.ಹೆಗ್ಗಣ್ಣವರ, ಎಸ್.ಬಿ.ಅಂಕಲಿ, ಚಂದ್ರಕಾಂತ ಕುರಬೇಟ, ಪ್ರಕಾಶ ಮಡ್ಡೆಪ್ಪಗೋಳ ಇದ್ದರು.
ವ್ಯವಸ್ಥಾಪಕ ಎಸ್.ಎಸ್.ಪಾಟೀಲ ಸ್ವಾಗತಿಸಿ ವಂದಿಸಿದರು.

Related posts: