ಗೋಕಾಕ:ಜಾನುವಾರು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ
ಜಾನುವಾರು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ
ಬೆಟಗೇರಿ ಸೆ 22 : ಗ್ರಾಮದ ಶ್ರೀ ನಾಗಲಿಂಗೇಶ್ವರ ಹಾಲಿನ ಡೈರಿ ಮತ್ತು ನೇಗಿನಾಳ ವಿಜಯಕಾಂತ ಪುಡ್ ಪ್ರೂಡೇಕ್ಟ್ ಲಿ ಹಾಗೂ ಮಿರಜದ ಗೂದ್ರೇಜ್ ಆಗ್ರ ವೇಟ್ ಲಿ. ಇವರ ಸಹಯೋಗದಲ್ಲಿ ಇದೇ ಸೋಮವಾರ ಸೆ.17 ರಂದು ಸ್ಥಳೀಯ ಶ್ರೀ ನಾಗಲಿಂಗೇಶ್ವರ ಹಾಲಿನ ಡೈರಿ ಆವರಣದಲ್ಲಿ ಜಾನುವಾರು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಜಿರೂದಿಂದ ಆರು ತಿಂಗಳು, ಆರು ತಿಂಗಳಿಂದ 12 ತಿಂಗಳ ಆಕಳು ಕರುಗಳು, 12 ತಿಂಗಳ ವಯೋಮಾನದಿಂದ ಗರ್ಭಧರಿಸುವ ತನಕ ಬೆಳೆದಿರುವ ಎಚ್‍ಎಫ್ ಮತ್ತು ಮತ್ತಿತರ ತಳಿಯ ಆಕಳ ಕರು, ಆಕಳು ಹಾಗೂ ವಿವಿಧ ಜಾತಿಯ ಎಮ್ಮಿ ಮತ್ತು ಕರುಗಳ ಪ್ರದರ್ಶನ ಜರುಗಿತು.
ಮಿರಜದ ಗೂದ್ರೇಜ್ ಆಗ್ರೂ ಪ್ರಾವೇಟ್ ಲಿ.ನ ಮ್ಯಾನೇಜರ್ ಮನೋಜ ಹರಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನುವಾರು ಮತ್ತು ಕರುಗಳ ಬೆಳವಣಿಗೆ, ಆಹಾರ ಪೂರೈಕೆ ಹಾಗೂ ರೈತರಿಗೆ ಹೈನುಗಾರಿಕೆಯಿಂದ ದೊರಕುವ ವಿವಿಧ ಲಾಭ, ಪ್ರಯೋಜನಗಳ ಕುರಿತು ತಿಳಿಸಿದರು.
ಪಶು ವೈದ್ಯ ರಾಮದಾಸ ನನಾವರೆ, ಶಿವಪ್ಪ ಬಿರಾದಾರ, ದಿಘ್ಗವಿಜಯ ಶಟಗೇರಿ, ಅಮೂಲ ನವನಾಳೆ ಅವರು ಪ್ರದರ್ಶನದಲ್ಲಿ ಭಾಗವಹಿಸಿದ ಜಾನುವಾರುಗಳನ್ನು ಹಲವಾರು ಮಾನದಂಡಗಳ ಮೂಲಕ ಪರೀಕ್ಷೆಗೆ ಒಳಪಡಿಸಿ, ಕೆಲವು ಜಾನವಾರು ಮತ್ತು ಆಕಳು ಕರುಗಳಿಗೆ ಹಾಗೂ ಎಮ್ಮೆ ಮತ್ತು ಕರುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳ ಆಯ್ಕೆ ಮಾಡಿ, ಟ್ರೋಪಿ, ಗೃಹೊಪಯೋಗಿ ಉಪಕರಣಗಳನ್ನು ಜಾನುವಾರುಗಳ ರೈತರಿಗೆ ವಿತರಿಸಿದರು.
ಅರ್ಜುನ ಅಂದಾನಿ, ಮಹಾಂತೇಶ ಸಿದ್ನಾಳ, ಶಿವಬಸು ಬಾಣಸಿ, ಅಪ್ಪಯ್ಯಪ್ಪ ಸಿದ್ನಾಳ, ವಿಜಯ ಸೋಮನಗೌಡ್ರ, ರಾಮಯ್ಯ ಮಠದ, ಬಸಪ್ಪ ಕೋಣಿ, ರಾಯಪ್ಪ ಬಾಣಸಿ, ಸಿದ್ದಪ್ಪ ಹಾಲಣ್ಣವರ, ಭೀಮಪ್ಪ ಬಾಣಸಿ, ಸ್ಥಳೀಯ ನಾಗಲಿಂಗೇಶ್ವರ ಹಾಲಿನ ಡೈರಿ ಮುಖ್ಯ ಕಾರ್ಯನಿರ್ವಾಹಕ ಬಿ.ಬಿ.ಬಡಿಗೇರ, ನಿಂಗಪ್ಪ ಬಡಿಗೇರ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರು, ಹಾಲಿನ ಡೈರಿ ಸದಸ್ಯರು, ಗ್ರಾಹಕರು ಜಾನುವಾರು, ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.