RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಡಾ. ಚಂದ್ರಶೇಖರ ಕಂಬಾರ ಆಯ್ಕೆ : ಕಲಾವಿದ ವೀರನಾಯ್ಕ ನಾಯ್ಕರ ಹರ್ಷ

ಗೋಕಾಕ:ಡಾ. ಚಂದ್ರಶೇಖರ ಕಂಬಾರ ಆಯ್ಕೆ : ಕಲಾವಿದ ವೀರನಾಯ್ಕ ನಾಯ್ಕರ ಹರ್ಷ 

ಡಾ. ಚಂದ್ರಶೇಖರ ಕಂಬಾರ ಆಯ್ಕೆ : ಕಲಾವಿದ ವೀರನಾಯ್ಕ ನಾಯ್ಕರ ಹರ್ಷ
ಬೆಟಗೇರಿ ಸೆ 30 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು 84 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವದಕ್ಕೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರಂಗಭೂಮಿ ಕಲಾವಿದ ವೀರನಾಯ್ಕ ನಾಯ್ಕರ ಹಾಗೂ ಡಾ. ಬೆಟಗೇರಿ ಕೃಷ್ಣಶರ್ಮ ಅಭಿಮಾನಿ ಬಳಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬೀರಸಿದ್ಧೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸೆ.29 ರಂದು ನಡೆದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ಸಾಹಿತ್ಯ ಮತ್ತು ಬದುಕು ಬರಹದ ಕುರಿತು ಮಾತನಾಡಿ, ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಗಂಡುಮೆಟ್ಟಿನ ನಾಡು ಉತ್ತರ ಕರ್ನಾಟಕದ ಜನಪದ, ಬದುಕು, ಜನರ ನಿತ್ಯ ಆಡು ಭಾಷೆಯ ಪದಪುಂಜಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿದ ಮಹಾನ್ ಹಿರಿಯ ಸಾಹಿತಿಯಾಗಿದ್ದಾರೆ. ಅಲ್ಲದೇ ಕುಂದಾನಗರಿ ಬೆಳಗಾವಿ ಜಿಲ್ಲೆಯ ತೂಕವನ್ನು ನಾಡಿನಾಧ್ಯಾಂತ ಹೆಚ್ಚಿಸಿದ್ದಾರೆ ಎಂದರು.
ನ್ಯಾಯವಾದಿ ಎಮ್.ಐ.ನೀಲಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಹುಕ್ಕೇರಿ ತಾಲೂಕಿನ ಘೋಡಗೇರಿಯಲ್ಲಿ ಸುಮಾರು 20 ಲಕ್ಷ ರೂ.ವೆಚ್ಚದಲ್ಲಿ ಡಾ. ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯ ಭವನ ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ ಮಂಜೂರಾತಿ ನೀಡಿರುವುದಕ್ಕೆ ಸಂತಸ ತಂದಿದೆ. ಧಾರವಾಡದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವದು ಬೆಳಗಾವಿ ಜಿಲ್ಲೆಗೆ ದೊರೆತ ವಿಶೇಷ ಗೌರವವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಠಲ ಕೋಣಿ, ಸುರೇಶ ಬಡಿಗೇರ, ಈರಣ್ಣ ಬಳಿಗಾರ, ಶಂಭು ಹಿರೇಮಠ, ವೀರಭದ್ರ ದೇಯಣ್ಣವರ, ಸುರೇಶ ದಂಡಿನ, ನಾಗರಾಜ ಬೆಳಗಲಿ, ಮಾಯಪ್ಪ ಬಾಣಸಿ, ಮಲ್ಲಪ್ಪ ಪಣದಿ, ಗಿರೀಶ ಗಾಣಗಿ, ಸೇರಿದಂತೆ ಗ್ರಾಮದ ರಂಗಭೂಮಿ ಕಲಾವಿದರು ಹಾಗೂ ಡಾ. ಬೆಟಗೇರಿ ಕೃಷ್ಣಶರ್ಮ ಅಭಿಮಾನಿ ಬಳಗದ ಪದಾಧಿಕಾರಿಗಳು, ಸದಸ್ಯರು, ಸಾಹಿತ್ಯಾಸಕ್ತರು, ಮತ್ತಿತರರು ಇದ್ದರು.

Related posts: