ಖಾನಾಪುರ:ಹೊಸಲಿಂಗನಮಠದಲ್ಲಿ ಮರಾಠಾ ಸಮಾಜಕ್ಕೂ ಜಾಗೆ ನೀಡಿ :
ಹೊಸಲಿಂಗನಮಠದಲ್ಲಿ ಮರಾಠಾ ಸಮಾಜಕ್ಕೂ ಜಾಗೆ ನೀಡಿ :
ಖಾನಾಪುರ ಅ 1 : ನಮ್ಮ ಮರಾಠಾ ಸಮಾಜದವರು ಗ್ರಾಮದಲ್ಲಿ ನಡೆಯುವ ಎಲ್ಲ ಕಾರ್ಯಗಳಲ್ಲಿ ಸಕ್ರಿಯವಾಗಿ ಬಾಗವಹಿಸುತ್ತಿದ್ದು, ನಾವು ಮನುಷ್ಯರೇ ಆದ್ದರಿಂದ ನಮಗೂ ಸಮಾನ ರೀತಿಯಿಂದ ಕಾಣಿರಿ. ಜೋತಗೆ ಮರಾಠಾ ಸಮಾಜಕ್ಕೂ ಸರಕಾರದಿಂದ ಒಂದು ಜಾಗೆಯನ್ನು ನೀಡಿ ಎಂದು ಮರಾಠಾ ಸಮಾಜದ ಮುಖಂಡ ಸಂಜು ಪಾಲಕಾರ ಹಾಗೂ ಮಾರುತಿ ಬೂದಪ್ಪನ್ನವರ ಹೇಳಿದರು.
ತಾಲೂಕಿನ ಲಿಂಗನಮಠ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹೊಸಲಿಂಗನಮಠ ಗ್ರಾಮದ ಮರಾಠಾ ಸಮಾಜದವರು ಗ್ರಾಪಂ ಪಿಡಿಓ ಬಿ.ಪಿ.ಚಂದ್ರ ಮತ್ತು ಅಧ್ಯಕ್ಷ ಡಾ.ಕೆ.ಬಿ.ಹಿರೇಮಠ ಅವರಿಗೆ ಮನವಿ ನೀಡಿ ಮಾತನಾಡಿದರು.
ನಮ್ಮ ಮರಾಠಾ ಸಮಾಜವು ಹೊಸಲಿಂಗನಮಠ ಗ್ರಾಮದಲ್ಲಿ ಮೂರನೇ ಅತಿದೊಡ್ಡ ಸಮಾಜವಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಾ ಸಮಾಜದ ಜನಸಂಖ್ಯೆ ಆಗುವುದರ ಜೋತೆಗೆ ಗ್ರಾಮದಲ್ಲಿ ದೊಡ್ಡ ಸಮಾಜವಾಗಿ ಹೊರಹೊಮ್ಮುದರಲ್ಲಿ ಸಂಶಯವಿಲ್ಲ. ಆದ್ದರಿಂದ ನಮ್ಮ ಸಮಾಜದ ವತಿಯಿಂದ ಯಾವೂದೇ ತರಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದರೆ ಬಹಳ ವರ್ಷಗಳಿಂದ ನಮಗೆ ಜಾಗದ ಕೊರತೆ ಕಾಡುತ್ತಿದೆ. ಆದ್ದರಿಂದ ಲಿಂಗನಮಠ ಗ್ರಾಪಂ ವತಿಯಿಂದ ಹೊಸಲಿಂಗನಮಠ ಗ್ರಾಮದ ಮರಾಠಾ ಸಮಾಜಕ್ಕಾಗಿ 60*80 ವಿಸ್ತಿರ್ಣದ ಸರ್ಕಾರದ ಒಂದು ಜಾಗೆಯನ್ನು ನೀಡಬೇಕಡಂದು ಮನವಿ ನೀಡಿದರು.
ಮನವಿ ನೀಡುವ ಸಂಧರ್ಭದಲ್ಲಿ ಮರಾಠಾ ಸಮಾಜದ ಮುಖಂಡರಾದ ಮಾರುತಿ ಬೂದಪ್ಪನವರ, ಸಂಜು ಪಾಲಕಾರ, ನಾಗರಾಜ ಅಂಬಡಗಟ್ಟಿ, ಆನಂದ ಹುಗನ್ನವರ, ಬಿಷ್ಟಪ್ಪಾ ನಿಲಜಕರ ಹಾಗೂ ಗ್ರಾಮದ ಮರಾಠಾ ಸಮಾಜದವರು ಹಾಜರಿದ್ದರು.