ಗೋಕಾಕ:ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ
ಗೋಕಾಕನಲ್ಲಿ ಭಾರಿ ಮಳೆ : ಸಂಭ್ರಮಿಸಿದ ಜನತೆ
ಗೋಕಾಕ ಜೂ 17 : ಮಳೆಗಾಲ ಪ್ರಾರಂಭವಾದರೂ ಮಳೆ ಇಲ್ಲದೆ ಕಂಗೇಟ್ಟಿ ಹೋಗಿದ ಗೋಕಾಕಿನ ಜನತೆ ಇಂದು ಮಧ್ಯಾಹ್ನ ಮಳೆರಾಯಣ ಆಗಮನದಿಂದ ಕೊಂಚ ಮಟ್ಟಿಗೆ ಖುಷಿ ಪಟು ಸಂಭ್ರಮಿಸಿದ್ದಾರೆ.
ತಾಲೂಕಿನ ಧರ್ಮಟ್ಟಿ, ಹುಣಶ್ಯಾಳ , ಸಂಗನಕೇರಿ , ಬಳೋಬಾಳ , ಸೇರಿದಂತೆ ಹಲವು ಕಡೆ ಮಳೆರಾಯಣ ಆರ್ಭಟದಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಸುಮಾರು ಅರ್ಧ ಘಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ನಗರದ ನಾಕಾ ನಂ 1 , .ಬ್ಯಾಳಿಕಾಟ , ಎಪಿಎಂಸಿ ,ಸೇರಿದಂತೆ ಅಲ್ಲಲಿ ವಾಹನ ಸವಾರರು ಪರದಾಡುವ ದೃಶ್ಯಗಳು ಕಂಡುಬಂದವು