RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಮಹಾತ್ಮಾಗಾಂಧೀಜಿ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ಭಾರತ ಮುನ್ನುಗುತ್ತಿದೆ : ಖಾನಪ್ಪನವರ

ಗೋಕಾಕ:ಮಹಾತ್ಮಾಗಾಂಧೀಜಿ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ಭಾರತ ಮುನ್ನುಗುತ್ತಿದೆ : ಖಾನಪ್ಪನವರ 

ಮಹಾತ್ಮಾಗಾಂಧೀಜಿ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ಭಾರತ ಮುನ್ನುಗುತ್ತಿದೆ : ಖಾನಪ್ಪನವರ

ಗೋಕಾಕ ಅ 2: ಅಹಿಂಸೆ, ಸತ್ಯ, ಸ್ವಾವಲಂಭನೆ ಮತ್ತು ಸರಳ ಬದುಕನ್ನು ಇಡೀ ಜಗತ್ತಿಗೆ ಹೇಳಿಕೊಟ್ಟ ಮಹಾನ್ ಚೇತನ ಮಹಾತ್ಮಾಗಾಂಧೀಜಿ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ಭಾರತ ಮುನ್ನುಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಮಂಗಳವಾರದಂದು ನಗರದ ಕರವೇ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮಾ ಗಾಂಧಿಜೀಯವರ 150ನೇ ಜಯಂತಿ ಮತ್ತು ಲಾಲಬಹದ್ದೂರ ಶಾಸ್ತ್ರಿಯವರ 114ನೇ ಜಯಂತಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಜನರಿಗೆ ಸ್ವಾವಲಂಭನೆಯ ಜೀವನವನ್ನು ಕಲಿಸುವುದಕ್ಕೆಂದೆ ಮಹಾತ್ಮಾಗಾಂಧಿಜೀ ಚರಕದಿಂದ ನೂಲು ತೆಗೆಯುತ್ತಿದ್ದರು. ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳಬೇಕೆಂದು ಸದಾ ಹೇಳುತ್ತಿದ್ದ ಗಾಂಧೀಜಿಯವರು ಸ್ವಾವಲಂಬಿ ಕುಟುಂಬ, ಸ್ವಾವಲಂಬಿ ಊರು, ಸ್ವಾವಲಂಬಿ ಸಮಾಜ, ಸ್ವಾವಲಂಬಿ ರಾಜ್ಯ, ಸ್ವಾವಲಂಬಿ ದೇಶದ ಕನಸು ಕಂಡಿದ್ದರು. ಅವರು ನಮ್ಮನ್ನು ಅಗಲಿ 70 ವರ್ಷ ಕಳೆದರೂ ಇಂದಿಗೂ ಸ್ವಾವಲಂಭನೆಯ ಮಂತ್ರ ಇಡೀ ದೇಶ ಪಠಿಸುತ್ತಿರುವುದು ಭಾರತದ ಹೆಮ್ಮೆ.
1921ರಲ್ಲಿ ಮಹಾತ್ಮಾಗಾಂಧೀಜಿಯವರು ಅಸಹಕಾರ ಚಳುವಳಿ ಕರೆ ಕೊಟ್ಟಾಗ 17ನೇ ವರ್ಷ ಪ್ರಾಯದ ಲಾಲಬಹುದ್ದೂರ ಶಾಸ್ತ್ರಿಯವರು ಚಳುವಳಿಯಲ್ಲಿ ಭಾಗವಹಿಸಿ ಬಾಲಗಂಗಾಧರ ತಿಲಕರ ಭಾಷಣ ಆಲಿಸಿ ಸುಮಾರು 50 ಕಿ.ಮೀ ದೂರದ ವಾರಣಾಸಿಗೆ ಸಾಲ ಮಾಡಿ ದುಡ್ಡು ಕೂಡಿಸಿಕೊಂಡು ಹೋಗಿ ಸ್ವಾತಂತ್ರ ಸಂಗ್ರಾಮದಲ್ಲಿ ಧುಮುಕಿದ ಲಾಲಬಹುದ್ದೂರ ಶಾಸ್ತ್ರಿಯವರು ಬಾಲ್ಯದಿಂದಲೇ ದೇಶಪ್ರೇಮ ಹೊತ್ತು ಸ್ವಾತಂತ್ರ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಾಸ್ತ್ರಿಜಿಯವರು ಮುಂದೆ ದೇಶದ ಪ್ರಧಾನಿಯಾಗಿ ಭಾರತ ಕಂಡ ಶ್ರೇಷ್ಠ ಪ್ರಧಾನಿಯಾಗಿ ಹೊರಹೊಮ್ಮಿದರು. ದೇಶ ಕಂಡ ಇಂತಹ ಮಹಾನ್ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ಇಂದು ನಾವು ಸಾಗಬೇಕಾಗಿದೆ ಅಂದಾಗ ಮಾತ್ರ ಭಾರತ ಪ್ರಕಾಶಿಸಲು ಸಾಧ್ಯ ಎಂದು ಖಾನಪ್ಪನವರ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಕೃಷ್ಣಾ ಖಾನಪ್ಪನವರ, ಬಸವರಾಜ ಹತ್ತರಕಿ, ರಾಜು ಕೆಂಚನಗುಡ್ಡ, ಮುರಗೇಶ ಹುಕ್ಕೇರಿ, ಅರುಣ ಪಂಡಿತ, ಭೀಮಶಿ ಪುಠಾಣಿ, ದತ್ತು ಕೋಲಕಾರ, ಬಸು ಬಟಕುರ್ಕಿ, ಮಹಾಂತೇಶ ದಾಬಿಮಠ, ಮುಗಟ ಪೈಲವಾನ, ಭರಮಪ್ಪ ಕೊಡ್ಲ್ಯಾಳ ಸೇರಿದಂತೆ ಇನ್ನೂ ಅನೇಕ ಉಪಸ್ಥಿತರಿದ್ದರು.

Related posts: