RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಯುವ ಜನತೆ ಸೈಕಲ್ ಬಳಕೆಗೆ ಪ್ರಾಮುಖ್ಯತೆ ನೀಡಬೇಕು : ಸಂಗಮೇಶ ಪ್ರಭಾಕರ

ಗೋಕಾಕ:ಯುವ ಜನತೆ ಸೈಕಲ್ ಬಳಕೆಗೆ ಪ್ರಾಮುಖ್ಯತೆ ನೀಡಬೇಕು : ಸಂಗಮೇಶ ಪ್ರಭಾಕರ 

ಯುವ ಜನತೆ ಸೈಕಲ್ ಬಳಕೆಗೆ ಪ್ರಾಮುಖ್ಯತೆ ನೀಡಬೇಕು : ಸಂಗಮೇಶ ಪ್ರಭಾಕರ

ಗೋಕಾಕ ಅ 3 : ಇತ್ತಿಚೇಗಿನ ದಿನಗಳಲ್ಲಿ ಯುವ ಜನತೆ ಕೈಯಲ್ಲಿ ಬೈಕಗಳ ಬಳಕೆ ಹೆಚ್ಚಾಗಿದ್ದು, ಕಾರು, ಬೈಕ್ ಮೋಟಾರು ವಾಹನಗಳಿಂದ ವಾಯು ಮಾಲಿಣ್ಯ ಹೆಚ್ಚುತ್ತಿದ್ದು ಜತೆಗೆ ಆರೋಗ್ಯವು ಹಾಳಾಗುತ್ತಿದೆ. ಹೀಗಾಗಿ ಯುವ ಜನತೆ ಸೈಕಲ್ ಬಳಕೆಗೆ ಪ್ರಾಮುಖ್ಯತೆ ನೀಡಬೇಕು ಮತ್ತು ವನ್ಯಜೀವಿಗಳ ರಕ್ಷಣೆಗೆ ಯುವ ಜನತೆಗೆ ಕಂಕಣಬದ್ಧರಾಗಬೇಕೆಂದು ಗುಜನಾಳ ವಲಯ ಅರಣ್ಯಾಧಿಕಾರಿ ಸಂಗಮೇಶ ಪ್ರಭಾಕರ ಹೇಳಿದರು.
ಅವರು, ಮಂಗಳವಾರದಂದು ತಾಲೂಕಿನ ಗುಜನಾಳ ಅರಣ್ಯ ವಲಯ ವ್ಯಾಪ್ತಿಯಲ್ಲಿ 64ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಬಸ್ಸಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಕುರಿತು ಸೈಕಲ್ ಜಾಥಾ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಿನ ನಿತ್ಯ ಸೈಕಲ್ ಬಳಕೆಯಿಂದ ಪರಿಸರ ಸಂರಕ್ಷಣೆ ಜೋತೆಗೆ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಹೀಗಾಗಿ ಸಾರ್ವಜನಿಕರು ಹೆಚ್ಚಾಗಿ ಸೈಕಲ್ ಬಳಕೆ ಮಾಡುವ ಮೂಲಕ ಪರಿಸರ ಕ್ಷಮತೆ, ಆರೋಗ್ಯ ಸುಧಾರಣೆ ಮಾಡಿಕೊಳ್ಳಬೇಕು. ಅರಣ್ಯ ಬೆಳೆಸುವದರ ಜೊತೆ ಜೊತೆಗೆ ವನ್ಯ ಜೀವಿಗಳ ರಕ್ಷಣೆ ಮುಂದಾಗಿ ಮುಂದಿನ ಪಿಳಿಗೆಗೆ ಪರಿಸರವನ್ನು ಬಳುವಳಿಯಾಗಿ ನೀಡಲು ಕಾರ್ಯಪ್ರವರ್ತರಾಗುವಂತೆ ಕರೆ ನೀಡಿದರು.
ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರಾಣಿಹಿಂಸೆ ತಡೆ, ವಿದ್ಯಾರ್ಥಿಗಳು ಸಸ್ಯ ಸಂಪತ್ತು ಅಭಿವೃದ್ಧಿ ಮಾಡುವ ಹಾಗೂ ನೈರ್ಮಲ್ಯ ಕಾಪಾಡುವ ವಾಗ್ದಾನ ಮಾಡಿದರು.
ಕಾರ್ಯಕ್ರಮದಲ್ಲಿ ಡಿಆರ್‍ಎಫ್‍ಒ ನದಾಫ್, ಎಮ್ ಪಿ ಪೂಜಾರಿ, ಸಾಗರ ಪಣಗುತ್ತಿ, ರಾಜನ್ನವರ, ಕಲಾಲ, ಪುರುಷೊತ್ತಮ, ಗಾರ್ಡಗಳಾದ ಆರ್ ಎಚ್ ಪೂಜಾರ, ಪ್ರಕಾಶ ಕರಾವಳಿ, ಮಾರುತಿ ಭಜಂತ್ರಿ, ಮಹಾಂತೇಶ ಡೊಂಬರ, ಶಿಕ್ಷಕರಾದ ದೇಶಪಾಂಡೆ, ಆಲದಕಟ್ಟಿ, ಲೊಕಳೆ, ಖೇಮಲಾಪೂರೆ, ಟಿ ಜೆ ಮೇರಿ, ಗ್ರಾಮದ ಹಿರಿಯರಾದ ರಾಜು ಪಾಟೀಲ, ಸರ್ಪರಾಜ ಮುಜಾವರ, ಯಲ್ಲಪ್ಪ ಕುಡಜೋಗಿ, ಪಿಡಿಒ ಬಾಬು ಅಂಗಡಿ ಸೇರಿದಂತೆ ಬಸ್ಸಾಪೂರ, ಹಗೇದಾಳ, ಗುಟಗುದ್ದಿ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂಧಿಗಳು ಇತರರು ಇದ್ದರು.

Related posts: