ಗೋಕಾಕ:ಕಲ್ಲೋಳಿಯಲ್ಲಿ ಇದೇ ಸೋಮವಾರ ವಿಶ್ವ ಕರ್ಮ ಸಮುದಾಯದ ಸಭೆ
ಕಲ್ಲೋಳಿಯಲ್ಲಿ ಇದೇ ಸೋಮವಾರ ವಿಶ್ವ ಕರ್ಮ ಸಮುದಾಯದ ಸಭೆ
ಬೆಟಗೇರಿ ಅ 6 : ರಾಜ್ಯ ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಹಲವಾರು ಸಹಾಯ, ಸವಲತ್ತುಗಳ ಕುರಿತು, ಬೆಳಗಾವಿ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ಜಸಂಖ್ಯೆ ನಿಖರ ಜನಗಣತಿ ಹಾಗೂ ಮತ್ತೀತರ ಹಲವಾರು ವಿಷಯಗಳ ಕುರಿತು ಚರ್ಚಿಸಲು ಸಮೀಪದ ಕಲ್ಲೋಳಿ ಪಟ್ಟಣದ ಮೌನೇಶ್ವರ ದೇವಾಲಯದ ಸಭಾಂಗಣದಲ್ಲಿ ಇದೇ ಸೋಮವಾರ ಅ.8 ರಂದು ಸಂಜೆ 4 ಗಂಟೆಗೆ ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿಶ್ವಕರ್ಮ ಸಮುದಾಯದ ನಾಗರಿಕರ ಸಭೆಯನ್ನು ಕರೆಯಲಾಗಿದೆ.
ಬೆಳಗಾವಿ ಜಿಲ್ಲಾ ವಿಶ್ವಕರ್ಮ ಯುವ ಮಿಲನ(ರಿ) ಘಟಕದ ಅಧ್ಯಕ್ಷ ಸಿದ್ಧಾರೂಢ ಬಡಿಗೇರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಗೋಕಾಕ ತಾಲೂಕಾ ವಿಶ್ವಕರ್ಮ ಯುವ ಮಿಲನ(ರಿ)ಘಟಕದ ಅಧ್ಯಕ್ಷ ಶಿವರಾಜ ಪತ್ತಾರ ಇವರ ನೇತೃತ್ವದಲ್ಲಿ ಸಭೆ ಜರುಗಲಿದ್ದು, ಗೋಕಾಕ ಮತ್ತು ಮೂಡಲಗಿ ತಾಲೂಕಿನ ವಿಶ್ವಕರ್ಮ ಸಮುದಾಯದ ಹಿರಿಯ ನಾಗರಿಕರು, ಗಣ್ಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡು, ಸಲಹೆ, ಸೂಚನೆ ನೀಡಬೇಕೆಂದು ಗೋಕಾಕ ತಾಲೂಕಾ ವಿಶ್ವಕರ್ಮ ಯುವ ಮಿಲನ(ರಿ) ಘಟಕದ ಸಂಚಾಲಕ ಸಂತೋಷ ಬಡಿಗೇರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ. 8150565795, 9008849623 ಸಂಪರ್ಕಿಸಬೇಕೆಂದು ಕೂರಲಾಗಿದೆ