RNI NO. KARKAN/2006/27779|Sunday, January 5, 2025
You are here: Home » breaking news » ಮೂಡಲಗಿ:ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡಲಗಿ:ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ 

ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಡಲಗಿ ಅ 8 : ಸ್ಥಳೀಯ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಸೋಮವಾರದಂದು ಪ್ರಧಾನ ಕಛೇರಿಯಲ್ಲಿ ಅಧ್ಯಕ್ಷ ಮುತ್ತಪ್ಪ ಈರಪ್ಪನವರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ ಮಾತನಾಡಿ, ಶ್ರೀ ಮಹಾಲಕ್ಷ್ಮಿ ಸೊಸಾಯಿಟಿಯು ಎಲ್ಲರ ಸಹಕಾರದಿಂದ 25ವರ್ಷಗಳನ್ನು ಪೂರೈಸಿದೆ. ಇದರ ಅಂಗವಾಗಿ ಅ.22ರಂದು ಅದ್ದೂರಿ ಬೆಳ್ಳಿ ಹಬ್ಬದ ಸಂಭ್ರಮವನ್ನು ಆಚರಿಸುತ್ತಿದೆ. ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಮಾಧ್ಯಮದ ಸಹಕಾರ ಬಹುಮುಖ್ಯವಾಗಿದ್ದು ತಾವೆಲ್ಲರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದರು.
ಬೆಳ್ಳಿಹಬ್ಬ ಸಂಭ್ರಮವು ಅ.22ರಂದು ಮಧ್ಯಾಹನ 12ಗಂಟೆಯಿಂದ ಸರಕಾರಿ ಬಾಲಕ ಮತ್ತು ಬಾಲಕಿಯರು ಪ್ರಾಥಮಿಕ ಶಾಲಾ ಆವರಣದಲ್ಲಿ ಮಧ್ಯಾಹನ ಜರುಗುವುದು. ಮೂಡಲಗಿ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋದ ಸ್ವಾಮಿಜಿ, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಮಹಾಸ್ವಾಮಿ, ಮಮದಪೂರದ ಮೌನಮಲ್ಲಿಕಾರ್ಜುನ ಮಹಾಸ್ವಾಮಿ, ಸುಣಧೋಳಿ ಜಡಿಸಿದ್ದೇಶ್ವರಮಠದ ಅಭಿನವ ಶಿವಾನಂದ ಮಹಾಸ್ವಾಮಿ, ಕುಂದರಗಿಯ ಅಡವಿಸಿದ್ದೇಶ್ವರಮಠದ ಅಮರಸಿದ್ದೇಶ್ವರ ಮಹಾಸ್ವಾಮಿ, ಸುಕ್ಷೇತ್ರ ಕಟಕೋಳ ತ್ರಿವಿಧದಾಸೋಹಮೂರ್ತಿ ಶ್ರೀ ಸಿದ್ರಾಯಜ್ಜನವರು ಸಾನಿಧ್ಯವಹಿಸುವರು. ಅಧ್ಯಕ್ಷತೆಯನ್ನು ಸೊಸಾಯಿಟಿಯ ಅಧ್ಯಕ್ಷ ಮುತ್ತಪ್ಪ ಈರಪ್ಪನವರ ವಹಿಸುವರು. ಕಾರ್ಯಕ್ರಮವನ್ನು ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು.ಸ್ಮರಣಸಂಚಿಕೆಯ ಬಿಡುಗಡೆಯನ್ನು ಲೋಕಸಭಾ ಸದಸ್ಯ ಸುರೇಶ ಅಂಗಡಿ ನೇರವೆರಿಸುವರು. ಮುಖ್ಯಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ, ರಮೇಶ ಕತ್ತಿ, ಸುಭಾಸ ಢವಳೇಶ್ವರ, ಭೀಮಪ್ಪ ಗಡಾದ, ಈರಣ್ಣ ಕಡಾಡಿ, ಕೆ.ಎಲ್. ಶ್ರೀನಿವಾಸ, ಎಮ್.ಜಿ.ದಾಸರ, ಡಾ.ಕೆ.ವಿ.ದಂತಿ, ಸಂಜಯ ಹೊಸಮಠ, ತಮ್ಮಣ್ಣ ಕೆಂಚರೆಡ್ಡಿ, ಎಚ್.ಬಿ.ಅಸೂಟಿ, ಎ.ಸಿ.ಗಂಗಾಧರ, ಅಜಿತ ಮನ್ನಿಕೇರಿ, ವೆಂಕಟೇಶ ಮುರನಾಳ, ಸಂತೋಷ ಸೋನವಾಲ್ಕರ, ಎನ್.ಎಮ್. ಸರಾಫ್, ಶರಣೇಶ ಜಾಲಿಹಾಳ, ರವೀಂದ್ರ ಸೋನವಾಲ್ಕರ, ಚನ್ನಬಸು ಬಡ್ಡಿ, ಸುಭಾಸ ಬೆಳಕೊಡ, ಮಲ್ಲಪ್ಪ ಮದುಗುಣಕಿ, ಶಿವಬಸು ಹಂದಿಗುಂದ, ಶ್ರೀಶೈಲ ಬಳೆಗಾರ ಮತ್ತಿತರರು ಆಗಮಿಸಲಿದ್ದಾರೆ.
ಸಾಂಸ್ಕøತಿಕ ಸಂಭ್ರಮ: ಮಧ್ಯಾಹನ 12ರಿಂದ ಕುಂದಗೋಳ ಹರ್ಲಾಪೂರ ಎಸ್.ಎಸ್.ಹಿರೇಮಠ ಸಿ.ವಾಯ್.ಸಿ.ಡಿ ಕಲಾತಂಡದಿಂದ ಜಾಗೃತಿಗಾಗಿ ಜಾನಪದ ಮತ್ತು ಸಂಜೆ 7ರಿಂದ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಹಾಗೂ ಸರಿಗಮಪ ವಿಜೇತರಿಂದ ಹಾಸ್ಯಹೊನಲು, ರಸಮಂಜರಿ ಕಾರ್ಯಕ್ರಮ ಜರುಗಲಿದೆ ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಪರಪ್ಪ ಮುನ್ಯಾಳ, ಶಂಕರ ಮುರಗೋಡ, ಶಿವಬಸು ಖಾನಟ್ಟಿ, ಸಂತೋಷ ಪಾರ್ಶಿ, ಪ್ರಕಾಶ ನಿಡಗುಂದಿ, ಚನ್ನಪ್ಪ ಗೋಕಾಕ, ಪ್ರಧಾನ ವ್ಯವಸ್ಥಾಪಕ ಚನ್ನಬಸು ಬಗನಾಳ, ಅರ್ಜುನ ಗಾಣಿಗೇರ ಉಪಸ್ಥಿತರಿದ್ದರು.

Related posts: