ಗೋಕಾಕ:ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧ ಗೋಕಾಕದ ಉಮೇಶ ಹೆಳವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ
ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧ ಗೋಕಾಕದ ಉಮೇಶ ಹೆಳವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ
ಗೋಕಾಕ ಅ 22 : ಕಳೆದ ಶನಿವಾರ ಸಂಜೆ ಇಂಪಾಲಾದ ನಾಗಂಪಾಲದಲ್ಲಿ ಉಗ್ರರು ಸೇನಾ ಟ್ರಕ್‍ನಲ್ಲಿ ಎಸೆದ ಗ್ರೇನೆಡ್‍ನ್ನು ಕೈನಲ್ಲಿ ಹಿಡಿದು ವೀರ ಮರಣ ಹೊಂದಿದ ಸಿಆರ್‍ಪಿಎಫ್ ಯೋಧ ಗೋಕಾಕದ ಉಮೇಶ ಹೆಳವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.
ತನ್ನ ಜೀವವನ್ನು ಒತ್ತೆ ಇಟ್ಟು ತಮ್ಮ 20 ಸೈನಿಕರ ಜೀವ ಉಳಿಸಿ ಉಮೇಶ ಅವರು ಹುತಾತ್ಮನಾಗಿ ರಾಷ್ಟ್ರಾಭಿಮಾನ ತೋರಿಸಿಕೊಟ್ಟಿದ್ದಾರೆ. ವೀರ ಯೋಧನ ಕುಟುಂಬದಲ್ಲಾದ ದುಃಖದಲ್ಲಿ ನಾವು ಸಹಭಾಗಿಯಾಗಿದ್ದೇವೆ. ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಹೆಳವರ ಕುಟುಂಬಕ್ಕೆ ನೀಡಲೆಂದು ಅವರು ಪ್ರಾರ್ಥಿಸಿದ್ದಾರೆ.