ಗೋಕಾಕ:ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ
ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ
ಬೆಟಗೇರಿ ಅ 23 : ಬಸವತತ್ವದ ಪರಿಪಾಲಕರಾಗಿ ಸಮಾನತೆ ಪ್ರತಿಪಾದಿಸಿದ ಗದಗ ತೋಂಟದಾರ್ಯ ಮಠದ ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಗುರು ಬಸವಣ್ಣ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಪುಂಡಲೀಕಪ್ಪ ಪಾರ್ವತೇರ ಶೋಕ ವ್ಯಕ್ತಪಡಿಸಿದ್ದಾರೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸೋಮವಾರ ಅ.22 ರಂದು ನಡೆದ ಶ್ರದ್ಧಾಂಜಲಿ ಶೋಕ ಸಭೆಯಲ್ಲಿ ಅವರು, ಶಾಂತಿ ಸದ್ಭಾವನೆಯ ಮೂಲಕ ನೀತಿ ನಿರೂಪಣೆ ಮಾಡುತ್ತಿದ್ದ ಲಿಂ. ಡಾ.ಸಿದ್ದಲಿಂಗ ಮಹಾಸ್ವಾಮಿಜಿ ಅವರು ಭಕ್ತರಿಗೆ ಪ್ರೇರಣಾ ಶಕ್ತಿಯಾಗಿದ್ದರು. ಅವರ ನಿಧನದಿಂದ ನಾಡು ಒಬ್ಬ ಮಹಾನ್ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದ್ದಾರೆ.
ತೋಂಟದಾರ್ಯ ಮಠದ ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಗೆ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಬಸನಗೌಡ ದೇಯಣ್ಣವರ, ಪತ್ರೇಪ್ಪ ನೀಲಣ್ಣವರ, ಈಶ್ವರ ಬಳಿಗಾರ, ಬಸವರಾಜ ಪಣದಿ, ಶ್ರೀಶೈಲ ಗಾಣಗಿ, ಎಂ.ಐ.ನೀಲಣ್ಣವರ, ಬಸಪ್ಪ ದೇಯಣ್ಣವರ, ಈಶ್ವರ ಮುಧೋಳ ಸೇರಿದಂತೆ ಗ್ರಾಮದವಿಶ್ವಗುರು ಬಸವಣ್ಣ ಅಭಿಮಾನಿ ಬಳಗ, ಶರಣರು, ಸಂತರು, ಸ್ಥಳೀಯರು ಕಂಬನಿ ಮಿಡಿದಿದ್ದಾರೆ.