RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ದೇವಿ ಪುರಾಣವೆಂದರೆ ದೇಹದ ಪುರಾಣವಿದ್ದಂತೆ : ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ

ಗೋಕಾಕ:ದೇವಿ ಪುರಾಣವೆಂದರೆ ದೇಹದ ಪುರಾಣವಿದ್ದಂತೆ : ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ 

ದೇವಿ ಪುರಾಣವೆಂದರೆ ದೇಹದ ಪುರಾಣವಿದ್ದಂತೆ : ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ
ಬೆಟಗೇರಿ ಅ 26 : ದೇವಿಯು ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡಿದ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ. ದೇವಿ ಪುರಾಣವೆಂದರೆ ದೇಹದ ಪುರಾಣವಿದ್ದಂತೆ, ದೇಹದಲ್ಲಿರುವ ಅವಗೂಣಗಳನ್ನು ಕಳೆದುಕೊಳ್ಳುವುದೇ ರಾಕ್ಷಸರ ಸಂವಹಾರವಿದ್ದಂತೆ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು.
ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಶರನ್ನವರಾತ್ರಿಯ ಅಂಗವಾಗಿ ಇದೇ ಬುಧವಾರÀ ಅ.24 ರಂದು ಸಂಜೆ 8 ಗಂಟೆಗೆ ನಡೆದ ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ, 237 ನೇ ಬಸವ ಸ್ಮತಿ ಮಾಸಿಕ ಶಿವಾನುಭವೋತ್ಸವ ಮತ್ತು ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಕಡುಬಿನ ಕಾಳಗೋತ್ಸವ ಕಾರ್ಯಕ್ರಮಗಳ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮೋಹ, ಮಮಕಾರಗಳನ್ನು ಕಳೆದುಕೊಂಡ ವ್ಯಕ್ತಿ ನಿಜವಾದ ಜೀವನಮುಕ್ತ. ಮಮದಾಪೂರದ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಅವರು ನಿಜವಾಗಿಯೂ ನಿರಾಭಾರಿ ಶಿವಯೋಗಿಯಾಗಿದ್ದಾರೆ ಎಂದು ಮವನ ಮಲ್ಲಿಕಾರ್ಜುನ ಸ್ವಾಮಿಜಿ ಅವರ ಜೋತೆ ಭಕ್ತರ ಭಕ್ತಿ ಅವಿನಾಭಾವ ಸಂಬಂಧದ ಕುರಿತು ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಶ್ಲಾಘಿಸಿದರು.
ಸ್ಥಳೀಯ ಮೌನ ಮಲ್ಲಿಕಾರ್ಜುನ ಮಹಾ ಶಿವಯೋಗಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಜಿಲ್ಲೆಯ ಕನ್ನಾಳದ ಭಿಮಾಶಂಕರ ಮಹಾಸ್ವಾಮಿಜಿ, ಚುಳಕಿಯ ವೀರಸಂಗಯ್ಯ ಮಹಾಸ್ವಾಮಿಜಿ, ಬೆಂಗಳೂರಿನ ಅಶ್ವತಪ್ಪ ಅಜ್ಜನವರು ದಿವ್ಯ ಸಮ್ಮುಖ, ಹಿಪ್ಪರಗಿಯ ಶಿವರುದ್ರ ಶರಣರು ಅನುಭಾವ ನೇತೃತ್ವ ವಹಿಸಿ ಮಾತನಾಡಿದರು.
ಪುರಾಣ ಪ್ರವಚನ ಮಂಗಲೋತ್ಸವ: ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ ಪ್ರಯುಕ್ತ ಅಂದು ಸಾಯಂಕಾಲ 4 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಆನೆ, ಒಂಟೆ, ಸುಮಂಗಲೆಯರಿಂದ ಆರತಿ ಮತ್ತು ಕುಂಭ, ಜಾನಪದ ವಿವಿಧ ಕಲಾತಂಡ ಹಾಗೂ ಸಕಲ ವಾಧ್ಯಮೇಳಗಳೊಂದಿಗೆ ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವದಿಂದ ಜರುಗಿದ ಬಳಿಕ ಸಂಜೆ 7 ಗಂಟೆಗೆ 237 ನೇ ಬಸವ ಸ್ಮತಿ ಮಾಸಿಕ ಶಿವಾನುಭವೋತ್ಸವ ಸಮಾರಂಭ ಸಂಭ್ರಮದಿಂದ ನಡೆಯಿತು. ಗ್ರಾಮದ ಭರತ ನಾಟ್ಯ ಶಾಲಾ ಮಕ್ಕಳಿಂದ ಭರತ ನಾಟ್ಯ ಕಾರ್ಯಕ್ರಮ ಜರುಗಿದವು. ಕರಡಿಗುದ್ದಿಯ ವಿರುಪಾಕ್ಷ ರಾಚಣ್ಣವರ ಅನ್ನ ದಾಸೋಹ ಸೇವೆ ನೆರವೇರಿಸಿದರು. ಸಮಾರಂಭಕ್ಕೆ ಆಗಮಿತ ಹರ, ಗುರು, ಚರಮೂರ್ತಿಗಳನ್ನು, ದಾನಿಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ನಾಡಿನ ಸಕಲ ಹರ, ಗುರು, ಚರಮೂರ್ತಿಗಳು, ಸಂತ-ಶರಣರು, ಆಧ್ಯಾತ್ಮ ಪ್ರವೀಣರು, ಗಣ್ಯರು ಸೇರಿದಂತೆ ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು ಈ ವಿಶೇಷ ಪುರಾಣ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಕ ಸಮಿತಿ ಸಂಚಾಲಕ ಮಂಜುನಾಥ ಶರಣರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರವಣಕುಮಾರ ಕೊನೆಗೆ ವಂದಿಸಿದರು.

Related posts: