ಗೋಕಾಕ:ಭೂತಾನ ರಾಷ್ಟ್ರದಲ್ಲಿ ಖಾನಪ್ಪನವರ ಅವರಿಗೆ ‘ಅಂತರ್ರಾಷ್ಟ್ರೀಯ ಮಾನವ ಪ್ರಶಸ್ತಿ’
ಭೂತಾನ ರಾಷ್ಟ್ರದಲ್ಲಿ ಖಾನಪ್ಪನವರ ಅವರಿಗೆ ‘ಅಂತರ್ರಾಷ್ಟ್ರೀಯ ಮಾನವ ಪ್ರಶಸ್ತಿ’
ಗೋಕಾಕ ಅ.27-ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಅವರಿಗೆ ‘ಅಂತರ್ರಾಷ್ಟ್ರೀಯ ಮಾನವ ಪ್ರಶಸ್ತಿ’ ದೊರಕಿದೆ.
ಶುಕ್ರವಾರದಂದು ಭೂತಾನದ ಥಿಂಪೂ ನಗರದ ಥೆರೆಮಾನಿಲಿಕಾ ರಿಸಾರ್ಟದಲ್ಲಿ ಗೋಲ್ಡನ್ ಮ್ಯಾನ್ ಪೀಸ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 19ನೇ ಭೂತಾನ ಅಂತರ್ರಾಷ್ಟ್ರೀಯ ಸಾಂಸ್ಕøತಿಕ ಸಮ್ಮೇಳನ ಹಾಗೂ ವರ್ಷದ ಅಂತರ್ರಾಷ್ಟ್ರೀಯ ವ್ಯಕ್ತಿ ಪ್ರಶಸ್ತಿ ಸಮಾರಂಭದಲ್ಲಿ ಭೂತಾನದ ಕಾರ್ಮಿಕ ಕಲ್ಯಾಣ ಇಲಾಖೆಯ ಮಾಜಿ ಸಚಿವ ನಗೀಮಾ ಸಗಾಯಿ ತೇಶೆಂಪೊ ಅವರು ಬಸವರಾಜ ಖಾನಪ್ಪನವರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಕನ್ನಡ ಸಮ್ಮೇಳನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ಪಿ.ಮಂಜುನಾಥ ಅವರು ಕನ್ನಡದ ಕಂಪನ್ನು ವಿಶ್ವದಾದ್ಯಂತ ಹರಡಿಸಲು ಗೋಲ್ಡನ್ ಮ್ಯಾನ್ ಪೀಸ್ ಫೌಂಡೇಶನ್ ಮತ್ತು ವಿಶ್ವ ಕನ್ನಡ ಸಾಂಸ್ಕøತಿಕ ಸಮ್ಮೇಳನ ವತಿಯಿಂದ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದಾದ್ಯಂತ ಹರಡಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ಸೇರಿಸಿ ಕನ್ನಡ ಭಾಷೆ ಗಟ್ಟಿಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸವರಾಜ ಖಾನಪ್ಪನವರ ಕನ್ನಡ ಭಾಷೆ ಬರೀ ಕರ್ನಾಟಕದಲ್ಲಿಷ್ಟೇ ಅಲ್ಲ, ಇಡೀ ಜಗತ್ತಿನಾದ್ಯಂತದ ಮೂಲೆ ಮೂಲೆಗಳಲ್ಲಿ ಹರಡಿರುವದು ಹೆಮ್ಮೆಯ ವಿಷಯ. ಈ ಸಮ್ಮೇಳನ ಯಶಸ್ವಿಗೊಳಿಸಿದ ಭೂತಾನದ ಪ್ರಜೆಗಳನ್ನು ಅಭಿನಂದನೆ ಸಲ್ಲಿಸಿದರು.
ವೇದಿಕೆ ಮೇಲೆ ಭೂತಾನ ಮಾಜಿ ಸಚಿವರ ಪುತ್ರಿ ಕುಮಾರಿ ಲಿಂಚನ್ ಮಾಫಿಯಾ, ತೆರಸಿಂಗ ನಮ್ಗೆ, ಡಾ. ಇ. ಆಂಜನೇಯ, ಡಾ. ಜಡಪಳ್ಳಿ ನಾರಾಯಣ, ಡಾ. ವೀಣಾ ನಾಗರಾಜ, ಡಾ. ಅಶೋಕ ನರೋಡೆ ಇದ್ದರು.
ಗೋಲ್ಡನ್ ಮ್ಯಾನ್ ಪೀಸ್ ಫೌಂಡೇಶನ್ ಕಾರ್ಯದರ್ಶಿ ಶಿವಾ ಹೈದರಾಬಾದ ಸ್ವಾಗತಿಸಿದರು. ಬೆಳಗಾವಿಯ ಕುಮಾರಿ ಚರಿತ್ರಾ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಕಲಾವಿದರಾದ ಕೆಕ್ಕೇರಿ ಮಂಜುನಾಥ, ಕೆ.ಡಿ.ದೇವರಾಜ, ಪುಷ್ಪಾ ಕೃಷ್ಣಮೂರ್ತಿ, ಮಹಾದೇವ ಸತ್ತಿಗೇರಿ, ಶ್ರೀಮತಿ ಚೂಡಾಮಣಿ, ಕುಮಾರಿ ಅನು ಆನಂದ, ಪ್ರಖ್ಯಾತರಾಜ ಅವರಿಂದ ಹಾಸ್ಯ, ಡೊಳ್ಳು ಕುಣಿತ, ಪೂಜಾ ಕುಣಿತ, ಗಾಯನ, ಭರತನಾಟ್ಯ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕಂತಿಕ ಕಾರ್ಯಕ್ರಮಗಳು ಜರುಗಿದವು.