ಭೂತಾನ:ಭೂತಾನ ದೇಶ ಭಾರತ ದೇಶದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ : ಮಾಜಿ ಸಚಿವ ನಗೀಮಾ ಸಗಾಯಿ ತೇಶೆಂಪೊ
ಭೂತಾನ ದೇಶ ಭಾರತ ದೇಶದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ : ಮಾಜಿ ಸಚಿವ ನಗೀಮಾ ಸಗಾಯಿ ತೇಶೆಂಪೊ
ಭೂತಾನ ಅ 27 : ಭೂತಾನ ದೇಶ ಭಾರತ ದೇಶದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಭೂತಾನ ದೇಶದ ಮಾಜಿ ಕಾರ್ಮಿಕ ಕಲ್ಯಾಣ ಸಚಿವ ನಗೀಮಾ ಸಗಾಯಿ ತೇಶೆಂಪೊ ಹೇಳಿದರು.
ಶುಕ್ರವಾರದಂದು ಸಾಯಂಕಾಲ ಭೂತಾನ ರಾಷ್ಟ್ರದ ರಾಜಧಾನಿ ಥಿಂಪೂ ನಗರದ ಥೆರೆಮಾನಿಲಿಕಾ ರಿಸಾರ್ಟ ಸಭಾಂಗಣದಲ್ಲಿ ಗೋಲ್ಡನ್ ಮ್ಯಾನ ಪೀಸ್ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ 19ನೇ ಭೂತಾನ ಅಂತರಾಷ್ಟ್ರೀಯ ಸಂಸ್ಕøತಿಕ ಸಮ್ಮೇಳನ ಹಾಗೂ ವರ್ಷದ ಅಂತರಾಷ್ಟ್ರೀಯ ವ್ಯಕ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಭೂತಾನ ರಾಷ್ಟ್ರ ವಿಶ್ವದ ಚಿಕ್ಕ ರಾಷ್ಟ್ರಗಳಲ್ಲಿ ಒಂದಾಗಿದ್ದು ಭಾರತದೊಂದಿಗೆ ಹಲವಾರು ಒಪ್ಪಂದಗಳನ್ನು ಮಾಡಿಕೊಂಡು ಅತೀ ವೇಗವಾಗಿ ಬೆಳೆಯುತ್ತಿದೆ. ಭೂತಾನ ರಾಷ್ಟ್ರಕ್ಕೆ ಪ್ರವಾಸಕ್ಕಾಗಿ ಹಲವಾರು ರಾಷ್ಟ್ರದಿಂದ ಜನ ಬರುತ್ತಾರೆ. ಆದರೆ ಭಾರತದಂತಹ ವಿಶಾಲ ಹೃದಯದವರು ಸಿಗಲು ಸಾಧ್ಯವಿಲ್ಲ. ಭಾರತದ ಸಂಸ್ಕøತಿ ಇಡೀ ವಿಶ್ವಕ್ಕೆ ಮಾದರಿ. ಭಾರತದ ಈ ನೀತಿಗೆ ಮೊರೆ ಹೋಗಿ ಭೂತಾನ ರಾಷ್ಟ್ರದಲ್ಲಿಯೂ ಸಹ ಭೂತಾನ ಪ್ರಜೆಗೆ, ಭೂತಾನ ರಾಷ್ಟ್ರದ ಸಂಸ್ಕಂತಿ ಉಳಿಸು ಬೆಳೆಸಲು ಉಡುಪುಗಳನ್ನು ಕಡ್ಡಾಯಗೊಳಿಸಲಾಗಿದೆ. ಅದರ ಪರಿಣಾಮ ಭೂತಾನ ರಾಷ್ಟ್ರದ ಪುರುಷರು ‘ಗೋ’ ಮತ್ತು ಮಹಿಳೆಯರು ‘ಕೀರಾ’ ಎಂಬ ರಾಷ್ಟ್ರೀಯ ಉಡುಪನ್ನು ಧರಿಸುತ್ತಾರೆ.
ಭೂತಾನ ರಾಷ್ಟ್ರ ಅತ್ಯಂತ ಚಿಕ್ಕ ರಾಷ್ಟ್ರವಾಗಿದ್ದರೂ ಸಹ ವಿಶ್ವಕ್ಕೆ ಏನಾದರೂ ಕೊಡುಗೆ ಕೊಡುವ ನಿಟ್ಟಿನಲ್ಲಿ ಆರ್ಯುವೇದ ಔಷಧಿಗಾಗಿ ಗಿಡಮೂಲಿಕೆಗಳನ್ನು ಬೆಳೆದು ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯಗಳಲ್ಲಿ ಭೂತಾನ ನಿರತವಾಗಿದೆ. ಭಾವೈಕ್ಯತೆಗೆ ವಿಶ್ವ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಭಾರತ ರಾಷ್ಟ್ರದ ಸಂಸ್ಕøತಿ ಜಗತ್ ಪ್ರಸಿದ್ಧವಾಗಿದೆ. ಭಾರತೀಯ ಪ್ರಜೆಗಳ ಸಂಸ್ಕøತಿಕ ಕಾಳಜಿ ಹೀಗೆಯೆ ಮುಂದುವರಿಯಲಿ ಎಂದು ಭೂತಾನ ರಾಷ್ಟ್ರದ ಮಾಜಿ ಸಚಿವ ನಗೀಮಾ ಸಂಗಾಯಿ ತೇಶೆಂಪೊ ಶುಭ ಕೋರಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಸಮಾವೇಶದ ಸಂಘಟಕ, ವಿಶ್ವಕನ್ನಡ ಸಮ್ಮೇಳನ ಸಮೀತಿ ಸಂಸ್ಥಾಪಕ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ ಕನ್ನಡದ ಕಂಪನ್ನು ವಿಶ್ವದಾಧ್ಯಂತ ಹರಡಿಸಲು ಗೋಲ್ಡನ್ ಮ್ಯಾನ್ ಪೀಸ್ ಪೌಂಡೇಶನ್ ಮತ್ತು ವಿಶ್ವ ಕನ್ನಡ ಸಂಸ್ಕøತಿಕ ಸಮ್ಮೇಳನ ವತಿಯಿಂದ ಅಬುದಾಬಿ, ಸಿಂಗಾಪೂರ, ಬಹರೈನ, ಕುವೈತ, ಕತಾರ, ದುಬೈ, ಆಸ್ಟ್ರೇಲಿಯಾ, ಕೆನಡಾ, ಶ್ರೀಲಂಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದಾದ್ಯಂತ ಹರಡಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಕನ್ನಡ ಭಾಷೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದೇವೆ. ಎಲ್ಲ ರಾಷ್ಟ್ರಗಳಲ್ಲಿಯೂ ಕನ್ನಡದ ಕಾರ್ಯಕ್ರಮಗಳನ್ನು ಆಯಾ ರಾಷ್ಟ್ರದ ಪ್ರಜೆಗಳು ಮತ್ತು ಆಡಳಿತ ವ್ಯವಸ್ಥೆಯು ಗೌರವಿಸಿ ಪ್ರೋತ್ಸಾಹಿಸುತ್ತಿರುವುದು. ನಮ್ಮ ಕರ್ನಾಟಕ ಮತ್ತು ಕನ್ನಡದ ಹೆಮ್ಮೆ ಎಂದು ಹೇಳಿದರು.
ಸಮಾವೇಶದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ವರ್ಷದ ಅಂತರಾಷ್ಟ್ರೀಯ ಮಾನವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಕನ್ನಡ ಭಾಷೆ ಬರೀ ಕರ್ನಾಟಕದಲ್ಲಷ್ಟೇ ಅಲ್ಲ ವಿಶ್ವದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿರುವುದು ಇದು ಕರ್ನಾಟಕದ ಹೆಮ್ಮೆ. 2000 ವರ್ಷಗಳ ಇತಿಹಾಸವಿರುವ ಮೃದು ಭಾಷೆ ಕನ್ನಡಕ್ಕೆ ಮಾತ್ರ ವಿಶ್ವವನ್ನು ಸೆಳೆಯುವ ಶಕ್ತಿ ಇದೆ. ಹಾಗಾಗಿಯೇ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಘಟಿತವಾಗುತ್ತಿವೆ. ಇದಕ್ಕೆ ಜೀವಂತ ಸಾಕ್ಷಿ ಭೂತಾನ ಅಂತರಾಷ್ಟ್ರೀಯ ಸಂಸ್ಕøತಿಕ ಸಮ್ಮೇಳನ. ಕನ್ನಡ ಭಾಷೆ ಮತ್ತು ಸಂಸ್ಕøತಿಯ ಮೇಲೆ ಅಭಿಮಾನವಿಟ್ಟು ಸಮಾವೇಶವನ್ನು ಯಶಸ್ವಿಗೊಳಿಸಿದ ಭೂತಾನ ದೇಶದ ಪ್ರಜೆಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಡಾ|| ವೀಣಾ ನಾಗರಾಜ, ರಾಯಚೂರಿನ ಡಾ|| ಇ. ಆಂಜನೇಯ, ಬೆಳಗಾವಿ ಜಿಲ್ಲೆಯ ಗೋಕಾಕಿನ ಬಸವರಾಜ ಖಾನಪ್ಪನವರ ಹೈದರಾಬಾದಿನ ಡಾ|| ಜಡಪಳ್ಳಿ ನಾರಾಯಣ, ರಾಜೇಶ್ ಹಿರಣೇಕರ ಅವರುಗಳಿಗೆ ಅವರ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರಗಳಲ್ಲಿ ಸಲ್ಲಿಸದ ಸೇವೆಗಳನ್ನು ಗುರುತಿಸಿ ಅವರಿಗೆ ವರ್ಷದ ಅಂತರಾಷ್ಟ್ರೀಯ ಮಾನವ ಪ್ರಶಸ್ತಿಯನ್ನು ಸಮಾವೇಶವನ್ನು ಉದ್ಘಾಟಿಸಿದ ಭೂತಾನ ರಾಷ್ಟ್ರದ ಮಾಜಿ ಸಚಿವ ನಗೀಮಾ ಸಾಗಾಯಿ ತೇಶೆಂಪೊ ಪ್ರಶಸ್ತಿ ನೀಡಿ ಗೌರವಿಸಿದರು.
ವಿಶ್ವದ ವಿವಿಧ ದೇಶಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ನೀಡಿರುವ ಕರ್ನಾಟಕದ ಕಲಾವಿದರಾದ ಕೆಕ್ಕೇರಿ ಮಂಜುನಾಥ, ಕೆ.ಡಿ.ದೇವರಾಜ, ಪುಷ್ಪಾ ಕೃಷ್ಣಮೂರ್ತಿ, ಮಹಾದೇವ ಸತ್ತಿಗೇರಿ, ಶ್ರೀಮತಿ ಚೂಡಾಮಣಿ, ಕುಮಾರಿ ಅನು ಆನಂದ, ಪ್ರಖ್ಯಾತರಾಜ ಅವರಿಂದ ಹಾಸ್ಯ, ಡೊಳ್ಳುಕುಣಿತ, ಪೂಜಾ ಕುಣಿತ, ಗಾಯನ, ಭರತನಾಟ್ಯ, ಯಕ್ಷಗಾನ ಸೇರಿದಂತೆ ವಿವಿಧ ಸಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಗೋಲ್ಡನ್ ಮ್ಯಾನ್ ಪೌಂಡೇಶನ್ ಕಾರ್ಯದರ್ಶಿ ಶಿವಾ ಹೈದರಾಬಾದ ಸ್ವಾಗತಿಸಿದರು.
ವೇದಿಕೆ ಮೇಲೆ ಮಾಜಿ ಸಚಿವ ಪುತ್ರಿ ಕುಮಾರಿ ಲಿಂಚನ್ ಮಾಫಿಮಾ, ತೆರಸಿಂಗ ನಮ್ಗೆ ಡಾ|| ಇ. ಆಂಜನೇಯ, ಡಾ|| ಜಡಪಳ್ಳಿ ನಾರಾಯಣ, ಡಾ|| ವೀಣಾ ನಾಗರಾಜ, ಡಾ|| ಅಶೋಕ ನರೋಡೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬೆಳಗಾವಿಯ ಕುಮಾರಿ ಚರಿತ್ರಾ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಭೂತಾನ ಮಾಜಿ ಸಚಿವ ನಗೀಮಾ ಸಾಗಾಯಿ ತೇಶೆಂಪೊ ಅವರಿಗೆ ಕರವೇ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.