RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಅನಾಥ, ನಿರ್ಗತಿಕ ಹಾಗೂ ಹೆಚ್.ಐ.ವಿ ಮಕ್ಕಳ ಶ್ರೇಯೊಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಿ

ಗೋಕಾಕ:ಅನಾಥ, ನಿರ್ಗತಿಕ ಹಾಗೂ ಹೆಚ್.ಐ.ವಿ ಮಕ್ಕಳ ಶ್ರೇಯೊಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಿ 

ಅನಾಥ, ನಿರ್ಗತಿಕ ಹಾಗೂ ಹೆಚ್.ಐ.ವಿ ಮಕ್ಕಳ ಶ್ರೇಯೊಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಿ

*ಬಾಲ ಉತ್ಸವ ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಈರಣ್ಣ ದೇಯಣ್ಣವರ ಅಭಿಮತ

ಬೆಟಗೇರಿ ಅ 27 : ಅನಾಥ, ನಿರ್ಗತಿಕ, ಶೋಷಿತ ಹಾಗೂ ಹೆಚ್.ಐ.ವಿ ಮಕ್ಕಳ ಶ್ರೇಯೊಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಲು ಪ್ರಯತ್ನಿಸಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ತಾಪಂ ಮಾಜಿ ಸದಸ್ಯ ಈರಣ್ಣ ದೇಯಣ್ಣವರ ಹೇಳಿದರು.
ಗ್ರಾಮದ ಚೈತನ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆ ಹಾಗೂ ಗೋಕಾಕ ಶಿವಾ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಅ.27ರಂದು ಸ್ಥಳೀಯ ಚೈತನ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಬಾಲ ಉತ್ಸವ-2018ರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ವಲಯದ ಅನಾಥ, ನಿರ್ಗತಿಕ, ಶೋಷಿತ ಹಾಗೂ ಹೆಚ್.ಐ.ವಿ ಮಕ್ಕಳ ಶ್ರೇಯೊಭಿವೃದ್ಧಿಗೆ ಸ್ಥಳೀಯ ಚೈತನ್ಯ ಗ್ರುಪ್ಸ್‍ನ ಅಂಗ ಸಂಸ್ಥೆಗಳು ಶ್ರಮಿಸುತ್ತಿರುವ ಕಾರ್ಯ ಅವಿಸ್ಮರಣೀಯವಾಗಿದೆ ಎಂದರು.
ಗೋಕಾಕ ಶಿವಾ ಫೌಂಡೇಶನ್‍ದ ಶಾನೂರ ಹಿರೇಹೊಳಿ ಪ್ರಾಸ್ತಾವಿಕವಾಗಿ, ನಿಂಗಾಪೂರ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕ ಎಸ್.ವೈ.ಪಾಟೀಲ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಚೈತನ್ಯ ಗ್ರುಪ್ಸ್‍ನ ಸಂಸ್ಥಾಪಕ ಸಿದ್ದಣ್ಣ ಹೊರಟ್ಟಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ನಗರ ಪಟ್ಟಣ, ಹಳ್ಳಿಗಳ ಅನಾಥ, ನಿರ್ಗತಿಕ, ಶೋಷಿತ ಹಾಗೂ ಹೆಚ್.ಐ.ವಿ ಮಕ್ಕಳ ಶ್ರೇಯೊಭಿವೃದ್ಧಿಗೆ ಶ್ರಮಿಸುತ್ತಿರುವ ವಿವಿಧ ಸಂಘ, ಸಂಸ್ಥೆಗಳ ಸುಮಾರು 70 ಕ್ಕೂ ಹೆಚ್ಚು ಮಕ್ಕಳು ಇಲ್ಲಿ ನಡೆದ ಬಾಲ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಮಕ್ಕಳಿಗಾಗಿ ವಿಶೇಷ ಕ್ರೀಡಾ ಮತ್ತು ಮನರಂನಜನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಸಪ್ಪ ಮೇಳೆಣ್ಣವರ, ವೆಂಕಟೇಶ ನಾಯ್ಕ, ಉಭಯ ಮಾಧ್ಯಮ ಶಾಲೆಗಳ ಮುಖ್ಯ ಶಿಕ್ಷಕರಾದ ದೇವಕಿ ಗೌಡ, ಸಂಜೀವ ಮೆಳವಂಕಿ, ರಮೇಶ ನಾಯ್ಕ, ರಾಜೇಶ್ವರಿ ಚೌಗಲಾ, ಹೇಮಾ ಕಲಾದಗಿ, ಎಲ್.ಎ.ಶಿರಹಟ್ಟಿ, ಶ್ರೀಶೈಲ ದಂಡಿನ, ಬಿ.ಟಿ.ಹುಚ್ಚಾಡಿ, ಗಜಾನನ ಮುರಗೋಡ, ಉಭಯ ಶಾಲೆಗಳ ಶಿಕ್ಷಕರು, ಸಿಬ್ಬಂದಿ ವರ್ಗ, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಸ್ಥಳೀಯ ಚೈತನ್ಯ ಶಾಲೆಯ ಆಡಳಿತಾಧಿಕಾರಿ ಚಂದ್ರು ಹಾಲೊಳ್ಳಿ ಸ್ವಾಗತಿಸಿದರು. ನಬೀಸಾಬ ನದಾಫ್ ಕಾರ್ಯಕ್ರಮ ನಿರೂಪಿಸಿದರು. ಸಿದ್ದಪ್ಪ ಹಕ್ಕಿ ಕೊನೆಗೆ ವಂದಿಸಿದರು.

Related posts: