RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ

ಗೋಕಾಕ:ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ 

ಕೌಜಲಗಿ ಮರುಳಸಿದ್ದೇಶ್ವರ ಮಠದಲ್ಲಿ ಡಾ. ಕಂಬಾರಗೆ ಸತ್ಕಾರ

ಗೋಕಾಕ ಅ 30 : ಸಂಶೋಧನೆ ಎಂಬುದು ಅಸಾಧಾರಣವಾದುದು. ಕತ್ತಲೆಯಲ್ಲಿ ಬೆಳಕಿನ ಹುಡುಕಾಟ ನಡೆಸಿ ಸತ್ಯವನು ಕಂಡುಕೊಳ್ಳುವುದಾಗಿದೆ ಎಂದು ಕೌಜಲಗಿ ಶ್ರೀ ಮರುಳಸಿದ್ದೇಶ್ವರ ಸಿದ್ಧ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶಿವಪುತ್ರ ಮಹಾಸ್ವಾಮಿಗಳು ಅಭಿಪ್ರಾಯಿಸಿದರು.
ಸೋಮವಾರ ಕೌಜಲಗಿ ಗ್ರಾಮದ ಶ್ರೀ ಮರುಳಸಿದ್ಧೇಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಜರುಗಿದ ಸೋಮವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಡಾ. ರಾಜು ಕಂಬಾರ ಅವರನ್ನು ಸತ್ಕರಿಸಿ ಮಾತನಾಡುತ್ತ, ನಮ್ಮೂರಿನ ಹೆಮ್ಮೆಯ ಪ್ರತಿಭೆಗಳನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ. ಪಿಎಚ್.ಡಿ. ಪದವಿಗಳನ್ನು ಎಲ್ಲರಿಗೂ ಪಡೆಯಲು ಸಾಧ್ಯವಾಗುವುದಿಲ್ಲ. ಅದನ್ನು ಸಾಧಿಸಿಕೊಂಡವರು ಇನ್ನು ಹೆಚ್ಚಿನ ಸಾಧನೆಗಳನ್ನು ಮಾಡುವುದರ ಮೂಲಕ ಸಮಾಜದ ಋಣವನ್ನು ತೀರಿಸುವಂತಾಗಬೇಕೆಂದು ಶ್ರೀಗಳು ಆಶೀರ್ವಚನ ನೀಡಿದರು.
ಮಠದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಾಹಿತಿ-ಸಂಶೋಧಕ ಡಾ. ರಾಜು ಕಂಬಾರ ಅವರು, ಮಠ-ಮಾನ್ಯಗಳಿಲ್ಲದಿದ್ದರೆ ಇಂದು ಎಷ್ಟೋ ಪ್ರತಿಭೆಳು ಕಮರಿ ಹೋಗುತ್ತಿದ್ದವು. ಇಂದಿನ ಹಲವಾರು ನಾಡಿನ ಸಾಹಿತಿಗಳನ್ನು ಬೆಳೆಸಿ-ಉಳಿಸಿದ್ದೆ ಈ ಮಠಮಾನ್ಯಗಳಾಗಿವೆ. ಇಂದು ನನ್ನ ಪ್ರತಿಭೆಯನ್ನು ಗುರುತಿಸಿ ಮರುಳಸಿದ್ದೇಶ್ವರ ಸಿದ್ಧಸಂಸ್ಥಾನ ಮಠ ಆಶೀರ್ವದಿಸಿದೆ. ಶ್ರೀಗಳ ಪ್ರತಿಭಾ ಹುಡುಕಾಟಕ್ಕೆ ನಾನು ಮರುಳಾಗಿದ್ದೇನೆ. ಮುಂದಿನ ದಿನಮಾನಗಳಲ್ಲಿ ಈ ಊರಿನ, ನಾಡಿನ, ಸಮಾಜದ ಋಣವನ್ನು ತೀರಿಸುತ್ತೇನೆ ಎಂದು ಡಾ. ಕಂಬಾರ ಹೇಳಿದರು. ಇದೇ ಸಂದರ್ಭದಲ್ಲಿ ಮರುಳಸಿದ್ದೇಶ್ವರ ಕುರಿತು ಎರಡು ಕವಿತೆಗಳನ್ನು ವಾಚಿಸಿ ಭಕ್ತಿ ನಮನಗಳನ್ನು ಸಮರ್ಪಿಸಿದರು.
ಸತ್ಸಂಗ ವೇದಿಕೆಯ ಮೇಲೆ ಮನ್ನಿಕೇರಿಯ ಶ್ರೀ ಮಹಾಂತಲಿಂಗೇಶ್ವರ ಮಠದ ವಿಜಯ ಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಕೌಜಲಗಿ ಗ್ರಾಮದ ಹಿರಿಯ ಶರಣ ಜೀವಿ ವೇ.ಮೂ. ಶ್ರೀಕಾಂತ ವಿರಕ್ತಮಠ ಸ್ವಾಮಿಗಳು ಆಧ್ಯಾತ್ಮಿಕ ವಿಚಾರಗಳನ್ನು ಭಕ್ತರಿಗೆ ಅರುಹಿದರು.
ಸತ್ಸಂಗ ಕಾರ್ಯಕ್ರಮದಲ್ಲಿ ಶರಣರಾದ ಅಶೋಕ ಶಿವಾಪೂರ, ರವಿ ಪರುಶೆಟ್ಟಿ, ಮಹಾಂತಪ್ಪ ಶಿವನಮಾರಿ, ಈರಪ್ಪಣ್ಣ ಬಿಸಗುಪ್ಪಿ, ಈರಣ್ಣ ಹುದ್ದಾರ, ಗಂಗಾಧರ ಕತ್ತಿಶೆಟ್ಟಿ, ಯಲ್ಲಪ್ಪ ಬೆನಚನಮರಡಿ, ಈರಪ್ಪ ಸಂಗಟಿ ಮುಂತಾದ ನೂರಾರು ಭಕ್ತರು ಹಾಜರಿದ್ದರು. ರಾತ್ರಿ ಅನ್ನಪ್ರಸಾದ ಜರುಗಿತು.

Related posts: