ಗೋಕಾಕ:ವೃತ್ತಿಯೊಂದಿಗೆ ರೋಗಿಯ ಸೇವೆ ಮಾಡುವುದರಿಂದ ಸಮಾಜ ಸೇವೆ ಮಾಡಿದಂತಾಗುತ್ತದೆ : ಎಸ್.ಎಸ್.ತೇರದಾಳ
ವೃತ್ತಿಯೊಂದಿಗೆ ರೋಗಿಯ ಸೇವೆ ಮಾಡುವುದರಿಂದ ಸಮಾಜ ಸೇವೆ ಮಾಡಿದಂತಾಗುತ್ತದೆ : ಎಸ್.ಎಸ್.ತೇರದಾಳ
ಗೋಕಾಕ ನ 3 : ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದರಿಂದ ವೃತ್ತಿಯೊಂದಿಗೆ ರೋಗಿಯ ಸೇವೆ ಮಾಡುವುದರಿಂದ ಸಮಾಜ ಸೇವೆ ಮಾಡಿದಂತಾಗುತ್ತದೆ ಎಂದು ಜೆಎಸ್‍ಎಸ್ ಪದವಿ ಮಹಾವಿದ್ಯಾಲದ ಪ್ರಾಚಾರ್ಯ ಎಸ್.ಎಸ್.ತೇರದಾಳ ಹೇಳಿದರು.
ಶುಕ್ರವಾರದಂದು ಸಂಜೆ ನಗರದ ಸಮುದಾಯ ಭವನದಲ್ಲಿ ಜರುಗಿದ ಇಲ್ಲಿಯ ತುಕ್ಕಾರ ನರ್ಸಿಂಗ್ ಸ್ಕೂಲ್ ಮತ್ತು ಸಮೃದ್ದಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗದ ಅವಕಾಶಗಳಿದ್ದು, ನರ್ಸಿಂಗ್ ತರಬೇತಿ ಪಡೆದ ಯುವಕ-ಯುವತಿಯರು ವೈದ್ಯರ ಹಾಗೂ ರೋಗಿಗಳ ನಡುವಿನ ನಿಮ್ಮ ಪಾತ್ರ ಬಹಳ ಮಹತ್ವದಾಗಿದೆ. ರೋಗಿಯ ರೋಗ ವಾಸಿಯಾಗುವಲ್ಲಿ ನಿಮ್ಮ ಸೇವೆ ಸ್ಮರಣಿಯವಾಗಿದೆ. ಸೇವಾ ಮನೋಭಾವದಿಂದ ವೃತ್ತಿ ಜೀವನದಲ್ಲಿ ಕಾರ್ಯನಿರ್ವಹಿಸಿವುದರೊಂದಿಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಸಂಸ್ಥೆಯ ಚೇರಮನ್ ಡಾ|| ಮಹಾಂತೇಶ ಕಡಾಡಿ, ಪ್ರಾಚಾರ್ಯ ವಿಜಯಕುಮಾರ, ಡಾ|| ಪ್ರಶಾಂತ ಬಾಬನ್ನವರ, ಡಾ|| ಆರೀಪ ಮಿರ್ಜಾನಾಯಿಕ ಇದ್ದರು.
ಸಂಪದ ಹಂಚಿನಮನಿ ಸ್ವಾಗತಿಸಿದರು, ಪೂರ್ಣಿಮಾ ಖೆಮಲಾಪೂರೆ ನಿರೂಪಿಸಿದರು, ಸೀಮಾ ವಂದಿಸಿದರು.