ಮೂಡಲಗಿ:ಸರಕಾರದ ಸವಲತ್ತುಗಳು ವಿದ್ಯಾರ್ಜನೆಗೆ ಸಹಕಾರಿಯಾಗಿವೆ : ಅನಿಲಕುಮಾರ ಗಂಗಾಧರ
ಸರಕಾರದ ಸವಲತ್ತುಗಳು ವಿದ್ಯಾರ್ಜನೆಗೆ ಸಹಕಾರಿಯಾಗಿವೆ : ಅನಿಲಕುಮಾರ ಗಂಗಾಧರ
ಮೂಡಲಗಿ ನ 3 : ಸರಕಾರ ಒದಗಿಸುವ ಶೈಕ್ಷಣಿಕ ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾರ್ಜನೆಗೆ ಸಹಾಯ ಮಾಡಿಕೊಂಡು, ಪಾಲಕರ ಜವಾಬ್ದಾರಿಗಳನ್ನು ಕಡಿಮೆ ಮಾಡುವದರ ಜೊತೆಯಲ್ಲಿ ಶೈಕ್ಷಣಿಕವಾಗಿ ಉನ್ನತಿ ಸಾಧಿಸುವ ಮೂಲಕ ತಮ್ಮ ಭವ್ಯ ಭವಿಷತ್ತನ್ನು ರೂಪಿಸಿಕೊಳ್ಳ ಬೇಕೆಂದು ಮೂಡಲಗಿ ಬಿ.ಇ.ಒ ಅನಿಲಕುಮಾರ ಗಂಗಾಧರ ಹೇಳಿದರು.
ಅವರು ಸಮೀಪದ ನಾಗನೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ಸೈಕಲ್ ವಿತರಣೆಯು ಒಂದಾಗಿದೆ. ಮಕ್ಕಳು ದೂರದ ಪ್ರದೇಶಗಳಿಂದ ಹಾಗೂ ಬಸ್ ಇನ್ನೀತರೆ ವಾಹನ ಸೌಕರ್ಯವಿಲ್ಲದೆ ಇದ್ದಾಗ ಶಾಲೆಗೆ ಬರಲು ಆಗುವದಿಲ್ಲ. ಸೈಕಲ್ ಸಹಾಯದಿಂದಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಹಾಯಕವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳುವದರ ಜೊತೆಗೆ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಗೆ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಾಗನೂರ ಪ.ಪಂ ಉಪಾಧ್ಯಕ್ಷೆ ನಾಗವ್ವ ಪೂಜೇರಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಪರಪ್ಪ ಹಳಿಗೌಡರ, ದಾಸಪ್ಪ ನಾಯಿಕ, ಪರಸಪ್ಪ ಬಬಲಿ,ಗಂಗಪ್ಪ ಸುಲಧಾಳ, ಮುಖ್ಯೋಪಾಧ್ಯಾಯ ಎಸ್.ಕೆ ಚಿಪ್ಪಲಕಟ್ಟಿ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.