RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಶಿಷ್ಯ ವೇತನ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ : ಮೋಹನ ಜೀರಗ್ಯಾಳ

ಮೂಡಲಗಿ:ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಶಿಷ್ಯ ವೇತನ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ : ಮೋಹನ ಜೀರಗ್ಯಾಳ 

ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಶಿಷ್ಯ ವೇತನ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ : ಮೋಹನ ಜೀರಗ್ಯಾಳ

ಮೂಡಲಗಿ ನ 4 : ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಕೊಡಲ್ಪಡುವ ಶಿಷ್ಯ ವೇತನದ ಸ್ಪಧಾತ್ಮಕ ಪರೀಕ್ಷೆಗಳಾದ ಎನ್.ಟಿ.ಎಸ್.ಇ, ಎನ್.ಎಮ್.ಎಮ್.ಎಸ್ ಪರೀಕ್ಷೆಗಳು ಮೂಡಲಗಿ ವಲಯದಲ್ಲಿ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಜರುಗಿವೆ. ಎನ್.ಟಿ.ಎಸ್.ಇ ಪರೀಕ್ಷೆಗೆ 2303 ವಿದ್ಯಾರ್ಥಿಗಳಲ್ಲಿ 55 ಗೈರಾಗಿ 2248, ಎನ್.ಎಎಮ್.ಎಮ್.ಎಸ್ ಪರೀಕ್ಷೆಗೆ 1286 ವಿದ್ಯಾರ್ಥಿಗಳಲ್ಲಿ 15 ಗೈರಾಗಿ 1271 ಮಕ್ಕಳು ಹಾಜರಾಗುವ ಮೂಲಕ ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಶಿಷ್ಯ ವೇತನ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆಂದು ಚಿಕ್ಕೋಡಿ ಜಿಲ್ಲಾ ಶಿಕ್ಷಕರ ತರಭೇತಿ ಸಂಸ್ಥೆಯ ಪ್ರಾಚಾರ್ಯ ಮೋಹನ ಜೀರಗ್ಯಾಳ ತಿಳಿಸಿದರು.
ಅವರು ಪಟ್ಟಣದಲ್ಲಿ ರವಿವಾರ ಜರುಗಿದ ಎನ್.ಟಿ.ಎಸ್.ಇ, ಎನ್.ಎಮ್.ಎಮ್.ಎಸ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು. ಮೂಡಲಗಿ ವಲಯ ಎಸ್.ಎಸ್.ಎಲ್.ಸಿ ಪರೀಕ್ಷೆಗಷ್ಟೇ ಸೀಮಿತವಾಗಿರದೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ನವೋದಯ, ಮೊರಾರ್ಜಿ, ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗಳು ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿಯೂ ತಮ್ಮ ಸಾಧನೆಯ ಛಾಪನ್ನು ಮೂಡಿಸಿದ್ದಾರೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಬಾಲ್ಯಾವಸ್ಥೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೂಲಕ ಮುಂದಿನ ಜೀವನದಲ್ಲಿ ಕಠೀಣ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಹಕಾರಿಯಾಗುವದು ಎಂದು ನುಡಿದರು.
ಚಿಕ್ಕೋಡಿ ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ಎ.ಸಿ ಮನ್ನಿಕೇರಿ ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎನ್.ಟಿ.ಎಸ್.ಇ, ಎನ್.ಎಮ್.ಎಮ್.ಎಸ್ ಪರೀಕ್ಷೆಯ ಸಲುವಾಗಿ ಡಿ.ಡಿ.ಪಿ.ಐ ಎಮ್.ಜಿ ದಾಸರ ಅವರ ಮಾರ್ಗದರ್ಶನದಲ್ಲಿ ಮುಖ್ಯ ಶಿಕ್ಷಕರಿಗೆ, ಸಹ ಶಿಕ್ಷಕರಿಗೆ ಶಾಲಾ ಹಂತದಲ್ಲಿ ಮಕ್ಕಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ವಿಶೇಷ ತರಗತಿಗಳ ಆಯೋಜನೆ, ನೂರಿತ ಶಿಕ್ಷಕರ ರಿಂದ ಮಾರ್ಗದರ್ಶನ ನೀಡಲಾಗಿತ್ತು. ಸಾಮಾಜಿಕ ಜಾಲತಾನಗಳನ್ನು ಉಪಯೊಗಿಸಿಕೊಂಡು ಸ್ಪರ್ಧಾ ಕಲಿ-3, ಜಿ-ಮ್ಯಾಟ್, ಸ್ಯಾಟ್ ಗಳ ಕುರಿತು ವಿಶೇಷ ಒತ್ತು ನೀಡಲಾಗಿತ್ತು. ಮೂಡಲಗಿ ವಲಯ ವ್ಯಾಪ್ತಿಯ ವಿಶೇಷ ಕಾಳಜಿ ಹಾಗೂ ಪರೀಕ್ಷಾ ಕಾರ್ಯಗಳನ್ನು ಡಿ.ಎಸ್.ಇ.ಆರ್.ಟಿಯ ನಿರ್ಧೇಶಕರಾದ ಗೋಪಾಲಕೃಷ್ಣ ಅವರು ಎನ್.ಟಿ.ಎಸ್.ಇ, ಎನ್.ಎಮ್.ಎಮ್.ಎಸ್ ಪರೀಕ್ಷೆಯ ಕರಿತು ವರದಿ ಕೇಳಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯಾಂದ್ಯಂತ ವಿಸ್ತರಿಸುವದಾಗಿ ಹೇಳಿ ಜಿಲ್ಲೆಯ ಕಾರ್ಯವನ್ನು ಶ್ಲಾಘಿಸಿ ಪ್ರಶಂಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ.ಇ.ಒ ಎ.ಸಿ ಗಂಗಾಧರ, ನೋಡಲ್ ಅಧಿಕಾರಿ ಟಿ ಕರಿಬಸವರಾಜು, ಬಿ.ಆರ್.ಪಿ ಕೆ.ಎಲ್ ಮೀಶಿ, ಕೇಂದ್ರಗಳ ಮುಖ್ಯಸ್ಥರಾದ ಆರ್.ಎಸ್ ಅಳಗುಂಡಿ, ಎಸ್.ಎನ್ ಸೊನ್ನದ, ಬಿ.ಜೆ ನಡಗೇರಿ, ಎಸ್.ಬಿ ನ್ಯಾಮಗೌಡ, ಜಿ.ಎಲ್ ಕೋಳಿ, ಗೀತಾ ಕರಗಣ್ಣಿ, ಎಸ್.ಎಮ್ ಗುಗ್ಗರಿ, ಜಿ.ಆರ್ ಪತ್ತಾರ, ಎ.ಆರ್ ಶೇಗುಣಸಿ, ಎಸ್.ಜಿ ವಲ್ಯಾಪೂರ, ಎಸ್. ಬಿ ಪತ್ತಾರ, ಎಸ್.ಆರ್ ಬಿದರಿ ಹಾಗೂ ಕೊಠಡಿ ಮೇಲ್ವಿಚಾರಕರು ಸಿಬ್ಬಂದಿ ವರ್ಗ ಹಾಜರಿದ್ದರು. ಮೂಡಲಗಿ ಪೋಲಿಸ್ ಠಾಣೆಯಿಂದ ಅಗತ್ಯ ಮುಂಜಾಗೃತ ಕ್ರಮವಾಗಿ ಅಗತ್ಯ ಬಂದೋ ಬಸ್ತ ಏರ್ಪಡಿಸಿದ್ದರು.

Related posts: