ಗೋಕಾಕ:ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ : ಡಾ|| ಶಶಿಕಲಾ ಹೊಸಮಠ
ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ : ಡಾ|| ಶಶಿಕಲಾ ಹೊಸಮಠ
ಗೋಕಾಕ ನ 4 : ಅನಾದಿ ಕಾಲದಿಂದಲೂ ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ ಎಂದು ಘಟಪ್ರಭಾದ ಜೆ.ಜಿ. ಸಹಕಾರಿ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಉಪನ್ಯಾಸಕಿ ಡಾ|| ಶಶಿಕಲಾ ಹೊಸಮಠ ಹೇಳಿದರು.
ರವಿವಾರದಂದು ಸಮೀಪದ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಆಯುರ್ವೇದ ಮಾದರಿಯ ಗಿಡಮೂಲಿಕೆಗಳಿಂದ ತಯಾರಿಸಿದ ಮಾರ್ನಿಂಗ್ ಮಂತ್ರ ಎಂಬ ಕಷಾಯ ಚಹಾ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಮ್ಮ ಪೂರ್ವಜರಿಂದ ನಮಗೆ ಬಳುವಳಿಯಾಗಿ ದೊರಕಿದ ಆಯುರ್ವೇದ ಮಾನವನ ದೇಹಕ್ಕೆ ಹಾನಿಕಾರವಾಗದೇ ಉಪಯೋಗವಾಗಿದೆ ಎಂದು ತಿಳಿಸಿದ ಅವರು ಸದಾ ಲವಲವಿಕೆಯಿಂದ ತಮ್ಮ ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುವುದರೊಂದಿಗೆ ರೋಗಗಳಿಂದ ಮುಕ್ತರಾಗಿ ದೀರ್ಘಾಯುಷಿಗಳಾಗಲು ಮಾರ್ನಿಂಗ್ ಮಂತ್ರ ಸಹಕಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಆಶೋಕ ಮುರಗೋಡ, ಡಾ|| ಗೋಪಾಲ ರೆಡ್ಡಿ, ಡಾ|| ಸತ್ತೆಪ್ಪ ಗೋರೋಶಿ, ಡಾ|| ಗಂಗಾಧರ ಉಮರಾಣಿ, ನ್ಯಾಯವಾದಿ ಸುರೇಶ ಪತ್ತಾರ, ಸದಾನಂದ ಗೊಬ್ಬಣ್ಣವರ, ಎಮ್.ಬಿ.ಬಿಕ್ಕನ್ನವರ ಸೇರಿದಂತೆ ಅನೇಕರು ಇದ್ದರು.