ಖಾನಾಪುರ:ಲಿಂಗನಮಠದ ಶಾಲೆಯಲ್ಲಿ ಟಿಪ್ಪು ಜಯಂತಿ ಆಚರಣೆ
ಲಿಂಗನಮಠದ ಶಾಲೆಯಲ್ಲಿ ಟಿಪ್ಪು ಜಯಂತಿ ಆಚರಣೆ
ಖಾನಾಪುರ ನ 10 : ಮೈಸೂರಿನ ಹುಲಿ ಎಂಬ ಹೆಸರಿನಿಂದ ಬಿರುದಾಂಕಿತನಾದ ಹಜರತ್ ಟಿಪ್ಪು ಸುಲ್ತಾನ ದೇಶಕಂಡ ಅಪ್ರತೀಮ ವೀರ, ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಸ್ವಂತ ಮಕ್ಕಳನ್ನೆ ಒತ್ತೆಇಟ್ಟಂತಹ ಮಹಾನ ನಾಯಕ ಎಂದು ಕರವೇ ಅಧ್ಯಕ್ಷ ಮಹಾಂತೇಶ ಸಂಗೋಳ್ಳಿ ಹೇಳಿದರು.
ತಾಲೂಕಿನ ಲಿಂಗನಮಠ ಗ್ರಾಮದ ಕನ್ನಡ ಶಾಲೆಯಲ್ಲಿ ಶನಿವಾರ ದಿನ ಹಮ್ಮಿಕೊಂಡಂತಹ ಹಜರತ್ ಟಿಪ್ಪು ಸುಲ್ತಾನರ 269ನೇ ಜಯಂತಿ, ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಜರತ್ ಟಿಪ್ಪು ಸುಲ್ತಾನರು ಭಾರತ ದೇಶದಲ್ಲಿ “ಕ್ಷೀಪಣಿ” ಉಡಾಯಿಸಿದ ಪ್ರಥಮ ನಾಯಕ. ಇವರು ತಮ್ಮ ಆಸ್ಥಾನದಲ್ಲಿ ಹಲವಾರು ಹಿಂದು ಸೈನಿಕರೊಂದಿಗೆ ಬಲಾಡ್ಯ ಸೈನ್ಯವನ್ನು ಹೊಂದಿದ್ದರು. ಜೋತೆಗೆ ಅವರ ಆಡಳಿತದಲ್ಲಿ ಎಷ್ಟು ಮಸೀದಿಗಳನ್ನು ಕಟ್ಟಿಸಿದ್ದಾರೋ, ಅಷ್ಟೇ ದೇವಾಸ್ಥನಗಳನ್ನು ಸಹ ಕಟ್ಟಿಸಿದ್ದಾರೆಂದು ಹೇಳಿದರು.
ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಕಾಶೀಮ ಹಟ್ಟಿಹೊಳಿ , ಹಜರತ್ ಟಿಪ್ಪು ಸುಲ್ತಾನರ ಬಗೆಯ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಪಾಂಡುರಂಗ ಮಿಟಗಾರ ವಹಿಸಿದ್ದರು. ಟಿಪ್ಪುಸುಲ್ತಾನ ಯಂಗ್ ಕಮೀಟಿ ಉಪಾಧ್ಯಕ್ಷ ಬಾಬುಲಾಲ ಪಟೇಲ, ದಲಿತ ಮುಖಂಡ ಗೋಪಾಲ ತಲ್ಲೂರ, ಕನ್ನಡ ಶಾಲೆಯ ಮುಖ್ಯೋಧ್ಯಾಪಕ ಬನಶೆಟ್ಟಿ ಸರ್, ಉರ್ದು ಶಾಲೆಯ ಮುಖ್ಯಶಿಕ್ಷಕ ಅಶ್ಪಾಕ ಪಟೇಲ, ಯುವಮುಖಂಡರಾದ ಶಾಮೀರ ಹಟ್ಟಿಹೊಳಿ, ಅಬ್ದುಲ ಹಟ್ಟಿಹೊಳಿ, ಎಸ್.ಡಿ.ಎಮ್.ಸಿ ಸದಸ್ಯರಾದ ಅಸಲಮ್ ಪೆಂಡಾರಿ, ಜಮೀಲ ಕಿತ್ತೂರ, ಗ್ರಾಮದ ಹಜರತ್ ಟಿಪ್ಪು ಸುಲ್ತಾನ ಯಂಗ ಕಮೀಟಿ ಸದಸ್ಯರು, ಉರ್ದು ಮತ್ತು ಕನ್ನಡ ಶಾಲೆಗಳ ಸಿಬ್ಬಂದಿ ವರ್ಗ ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜಾವೀದ ತಹಶಿಲ್ದಾರ ನಿರೂಪಿಸಿದರು, ಸಾವಂತ ಸ್ವಾಗತಿಸಿದರು, ಕೊನೆಯಲ್ಲಿ ಸಿರಾಜ ಬಾಗವಾನ ವಂದಿಸಿದರು.