ಘಟಪ್ರಭಾ:ದೊಷ ರಹಿತ ಮತದಾರರ ಪಟ್ಟಿತಯಾರಿಸಿ : ಆರ್.ಐ ನೇಸರಗಿ
ದೊಷ ರಹಿತ ಮತದಾರರ ಪಟ್ಟಿತಯಾರಿಸಿ : ಆರ್.ಐ ನೇಸರಗಿ
ಘಟಪ್ರಭಾ : 18 ವರ್ಷ ತುಂಬಿದ ಯುವಕ ಯುವತಿಯರ ದೊಷ ರಹಿತ ಮತದಾರರ ಪಟ್ಟಿತಯಾರಿಸುವಂತೆ ಅರಭಾವಿಯ ಕಂದಾಯ ನಿರೀಕ್ಷಕ ಆರ್.ಐ ನೇಸರಗಿ ತಿಳಿಸಿದರು.
ಅವರು ಶನಿವಾರದಂದು ಸ್ಥಳೀಯ ಮಲ್ಲಾಪೂರ ಪಿ.ಜಿ ಪಟ್ಟಣದ ವಿಠ್ಠಲ ಮಂದಿರ ಆವರಣದಲ್ಲಿ ಮಲ್ಲಾಪೂರ ಪಿ.ಜಿ ವ್ಯಾಪ್ತಿಯ ಮತಗಟ್ಟೆಗಳ ಬಿಎಲ್‍ಒಗಳ ಸಭೆಯಲ್ಲಿ ಮಾತನಾಡಿದರು. ಶಾಶ್ವತವಾಗಿ ಬೇರೆಡೆ ಹೋದವರು, ಮರಣ ಹೊಂದಿದವರು ಹಾಗೂ ಮದುವೆಯಾಗಿ ಹೊರ ಹೋದವರನ್ನು ಮತದಾರರ ಯಾದಿಯಿಂದ ತೆಗೆದು ಹಾಗಬೇಕು. ಅಂಗವಿಕರ ಮತದಾರರ ಯಾದಿಯನ್ನು ತಯಾರಿಸಬೇಕೆಂದು ಬಿಎಲ್‍ಒಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯರುಗಳಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಗ್ರಾಮದ ಲೇಕ್ಕಾಧಿಕಾರಿ ಜಗದೀಶ ಚೂರಿ, ಮುಖ್ಯಾಧಿಕಾರಿ ಕೆ.ಬಿ.ಪಾಟಿಲ, ಪಟ್ಟಣದ ಹಿರಿಯರಾದ ಗೋವಿಂದ ತುಕ್ಕಾನಟ್ಟಿ, ಕೆಂಪಣ್ಣಾ ಚೌಕಾಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶಿವಪುತ್ರ ಕೊಗನೂರ, ಸಿಬ್ಬಂದಿಗಳಾದ ರಾಜು ಸದಲಗಿ, ಯಾಶಿನ ಪಾಶ್ಚಾಪೂರ, ಬಿಎಲ್‍ಒಗಳು, ಶಿಕ್ಷಣಾಧಿಕಾರಿ ಪ್ರತಿನಿಧಿ ಸೇರಿದಂತೆ ಅನೇಕ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಇದ್ದರು.