RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ

ಗೋಕಾಕ:ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ 

ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ

ಗೋಕಾಕ ನ 12: ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ , ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರು ನಿಧನದ ಹಿನ್ನಲೆಯಲ್ಲಿ ಸೋಮವಾರ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ ನಡೆಯಿತು.
ಅನಂತಕುಮಾರ ಅಮರ್ ರಹೇ, ಅನಂತಕುಮಾರ ಅಮರ್ ರಹೇ ಎಂಬ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಪ್ರಮುಖರು ಒಂದು ನಿಮಿಷ ಮೌನ ಆಚರಿಸಿದರು
ಬಿಜೆಪಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ ಶೃದ್ದಾಂಜಲಿ ಸಲ್ಲಿಸಿ ಮಾತನಾಡಿದ ಅವರ ಎಚ್.ಎನ್.ಅನಂತಕುಮಾರ ಅವರು ರಸಗೊಬ್ಬರ ಖಾತೆ ಸಚಿವರಾಗಿ ದೇಶದ ರೈತರಿಗೆ ಯೂರಿಯಾ ಕೊರತೆಯಾಗದಂತೆ ನೊಡಿಕೊಂಡು ಹೆಗ್ಗಳಿಕೆ ಇವರದು, ಬೇವು ಲೇಪೀತ್ ಯೂರಿಯಾ, ಜನರಿಕ್ ಔಷದ ಮಳಿಗೆ ಪ್ರಾರಂಭ, ಜನಸಾಮಾನ್ಯರಿಗೆ ಅರ್ಧಬೆಲೆ ಔಷಧಿ ಸಿಗುವಂತೆ ನೋಡಿಕೊಂಡು ಹೃದಯ ಶಸ್ತ್ರಚಿಕಿತ್ಸೆ, ಮೊಣಕಾಲಿನ ಚೀಫಗಳು ಕಡಿಮೆ ದರದಲ್ಲಿ ಸಿಗುವುದು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ರಾಜ್ಯದ ಯಾವುದೇ ಸರ್ಕಾರ ಇದ್ದರು ಕೇಂದ್ರದ ಯೋಜನೆಗಳನ್ನು ರಾಜ್ಯಕ್ಕೆ ತರುವಲ್ಲಿ ಅನಂತಕುಮಾರ ಅವರ ಪಾತ್ರ ವಿಶೇಷವಾಗಿತು ಎಂದರಲ್ಲದೇ ಬಾಲ್ಯದಿಂದಲೂ ಆರ್.ಎಸ್.ಎಸ್ ಕಾರ್ಯ, ಅಖಿಲ ಭಾರತ ವಿಧ್ಯಾರ್ಥಿ ಪರಿಷತ್ ಸಂಘಟಣೆ ನಂತರದ ದಿನಗಳಲ್ಲಿಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದರು.
ಬಿಜೆಪಿ ಹಿರಿಯರಾದ ಅಶೋಕ ಪೂಜೇರಿ, ನಗರ ಘಟಕದ ಅಧ್ಯಕ್ಷ ಶಶಿಧರ ದೇಮಶೇಟ್ಟಿ, ಜಿ.ಪಂ ಮಾಜಿ ಸದಸ್ಯೆ ವಾಸುದೇವ ಸವತಿಕಾಯಿ ಪ್ರಮುಖರಾದ ಪ್ರಮೋದ ಜೋಷಿ, ಪರಪ್ಪ ಗಿರೆಣ್ಣವರ, ಲಕ್ಕಪ್ಪ ತಹಸಿಲ್ದಾರ, ಬಸವರಾಜ ಹಿರೇಮಠ, ಬಸವರಾಜ ಹುಳ್ಳೇರ, ಲಕ್ಷ್ಮಣ ತಪಸಿ, ಚಂದ್ರಶೇಖರ ಕೊಣ್ಣುರ, ಎಮ್.ಎನ್. ಚೋಟೆಪ್ಪಗೋಳ, ರಾಜು ಹೀರೆ ಅಂಬಿಗೇರ, ವಿವೇಕ ವಾಡಕರ, ಸಂತೋಷ ಹುಂಡೇಕರ, ಸಮೀರ ಸುಣದೋಳಿ, ಸುಭಾಸ ಸನತಿಪ್ಪಗೋಳ, ಜ್ಯೋತಿ ಕೊಲಾರ, ಕರುಣಾ ಗರುಡಕರ, ಶ್ರೀಕಾಂತರ ಕರೆಪ್ಪಗೋಳ, ಲಕ್ಕಪ್ಪ ಬಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: