RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಗೋಕಾಕನಲ್ಲಿ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮ

ಗೋಕಾಕ:ಗೋಕಾಕನಲ್ಲಿ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮ 

ಗೋಕಾಕನಲ್ಲಿ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮ

ಗೋಕಾಕ ನ 15 : ಜೀ ಕನ್ನಡ ವಾಹಿನಿಯು ಕೆಲವು ಕಾರ್ಯಕ್ರಮಗಳ ಮೂಲಕ ಕರ್ನಾಟಕಕ್ಕೆ ಮತ್ತು ಕಲೆಗೆ ಸಾಕಷ್ಟು ಪ್ರತಿಭೆಗಳನ್ನು ಕೊಡುಗೆಯಾಗಿ ಕೊಡುವುದರಲ್ಲಿ ಮತ್ತು ಪ್ರತಿಭಾವಂತ ಕಲಾವಿದರನ್ನ ಕರ್ನಾಟಕದ ಮೂಲೆ ಮೂಲೆಗಳಿಂದ ಹೊರ ತಂದಿದ್ದು ವಾಹಿನಿಯ ದೊಡ್ಡ ಸಾಧನೆ ಮತ್ತು ಹೆಮ್ಮೆಯ ವಿಷಯ. ಅದರಲ್ಲಿ ಎರಡು ಪ್ರಮುಖವಾದ ಕಾರ್ಯಕ್ರಮಗಳು ಸರಿಗಮಪ ಮತ್ತು ಡ್ರಾಮಾ ಜೂನಿಯರ್ಸ್, ಕಳೆದ ಐದು ಸೀಸನ್ಗಳಿಂದ ಸರಿಗಮಪ ತನ್ನದೆ ಒಂದು ಸ್ಥಾನವನ್ನು ಉಳಿಸಿಕೊಂಡಿದೆ ಮತ್ತು ಅದೇ ರೀತಿ ಕಳೆದ ವರ್ಷವಷ್ಟೆ ಎರಡನೇ ಸೀಸನ್ ಮುಗಿಸಿ ಹೊಸ ಪ್ರಯೋಗ ಮತ್ತು ಹೊಸ ಪ್ರಯತ್ನದ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್ ಅದು ಕೂಡಾ ಅಷ್ಟೇ ದೊಡ್ಡ ಯಶಸನ್ನು ಕಂಡಿದೆ.

ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ಪಟ್ಟಿಯಲ್ಲಿ ಈ ಎರಡು ಕಾರ್ಯಕ್ರಮಗಳು ಟಾಪ್ ಮತ್ತು ಟಾಕ್ ಆಗಿದೆ. ಈ ಎರಡೂ ಕಾರ್ಯಕ್ರಮಗಳು ಒಂದಾದ ನಂತರ ಒಂದು ಪ್ರತಿ ವಾರ ಪ್ರಸಾರವಾಗಿದ್ದು, ಎರಡರಲ್ಲೂ ಅಷ್ಟೇ ಮನರಂಜನೆ ತುಂಬಿರುತ್ತದೆ. ಕಲೆಗೆ ಯಾವತ್ತೂ ಪ್ರೀತಿಯಿಂದ ಸ್ವಾಗತ ಕೋರುವ ಉತ್ತರ ಕರ್ನಾಟಕದಲ್ಲಿ ಈ ವರ್ಷದ ವಿಶೇಷ ಮಹಾಸಂಗಮ ಕಾರ್ಯಕ್ರಮ ನಡೆಯಲಾಗುತ್ತಿದೆ. ಕರದಂಟು ನಗರಿ ಎಂದು ಪ್ರಖ್ಯಾತಿಯಾಗಿರುವ ಗೋಕಾಕದಲ್ಲಿ ಮಹಾಸಂಗಮ ಕಾರ್ಯಕ್ರಮ ನಡೆಯಲಿದೆ.

ಸಂಗೀತ ದಿಗ್ಗಜರ ಸಮಾಗಮನ : ಕಾರ್ಯಕ್ರಮದಲ್ಲಿ ಡ್ರಾಮಾ ಜೂನಿಯರ್ಸ್ ಪುಟಾಣಿಗಳು ಸ ರೀ ಗ ಮ ಪ ಗಾನಕೋಗಿಲೆಗಳ ಜೊತೆ ತೀರ್ಪುಗಾರರಾದಂತ ಜೂಲಿ ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು, ವಿಜಯ್ ರಾಘವೇಂದ್ರ, ನಾದಬ್ರಹ್ಮ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಪಾಲ್ಗೊಳ್ಳಲಿದ್ದಾರೆ. ಅನುಶ್ರೀ ಮತ್ತು ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿಕೊಂಡಿದ್ದಾರೆ.

ಪಾಸಗಳ ವಿತರಣೆ : ಜೀ ವಾಹಿನಿಯಲ್ಲಿ ಅತ್ಯಂತ ಪ್ರಖ್ಯಾತಿ ಪಡೆದಿರುವ ಮಹಾಸಂಗಮ ಕಾರ್ಯಕ್ರಮ ಇದೇ ನವೆಂಬರ್ 17, ಶನಿವಾರ ಸಂಜೆ 5ಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವೀಕ್ಷಿಸಲು ಉಚಿತ ಪಾಸುಗಳ ವ್ಯವಸ್ಥೆ ಮಾಡಲಾಗಿದೆ. ಪಾಸುಗಳು 16ನೇ ನವೆಂಬರ್ ಶುಕ್ರವಾರ ಸಂಜೆ 4.30 ಕ್ಕೆ ಕ್ರೀಡಾಂಗಣದಲ್ಲಿ ಲಭ್ಯವಿರುತ್ತದೆ. ಒಬ್ಬರಿಗೆ 3 ಪಾಸುಗಳು ನೀಡಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವದು ಎಂದು ಜೀ ವಾಹಿನಿಯ ಪಿ.ಆರ್.ಮ್ಯಾನೇಜರ್ ಶ್ರೀರಾಮ ಬಿ.ಆರ್ ಮತ್ತು ಕುಮಾರ್ ತಿಳಿಸಿದ್ದಾರೆ 

Related posts: