RNI NO. KARKAN/2006/27779|Monday, December 23, 2024
You are here: Home » breaking news » ಮೂಡಲಗಿ:ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆ

ಮೂಡಲಗಿ:ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆ 

ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆ

ಮೂಡಲಗಿ ನ 15: ನೂತನ ಮೂಡಲಗಿ ತಾಲೂಕಿನ ಪ್ರಥಮವಾಗಿ ದಾಸ ಶ್ರೇಷ್ಠ ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆಯನ್ನು ಶನಿವಾರ ನಂ. 17 ರಂದು ಸಾಯಂಕಾಲ 4: 30 ಗಂಟೆಗೆ ಮೂಡಲಗಿಯ ಶ್ರೀ ಭೀರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವದಾಗಿ ಸಮಾಜ ಮುಖಂಡ ಹಾಗೂ ಮಾಜಿ ಪುರಸಭೆ ಸದಸ್ಯ ಡಾ. ಎಸ್.ಎಸ್ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಡಲಗಿ ತಾಲೂಕಿನಲ್ಲಿರುವ ದಾಸ ಶ್ರೇಷ್ಠ ಕನಕದಾಸರ ಅಭಿಮಾನಿಗಳು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಆಸಕ್ತರು ಈ ಪೂರ್ವಭಾವಿ ಸಭೆಗೆ ಹಾಜರಾಗಲು ವಿನಂತಿಸಿದ್ದಾರೆ. ಅಂದು ಜಯಂತಿಯ ರೂಪುರೇಷೆ, ಮುಂದಿನ ದಿನಗಳಲ್ಲಿ ನೂತನ ಮೂಡಲಗಿ ತಾಲೂಕಿನಲ್ಲಿ ಕೈಗೋಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸುವದಾಗಿ ಹೇಳಿದ್ದಾರೆ.

Related posts: