RNI NO. KARKAN/2006/27779|Thursday, March 13, 2025
You are here: Home » breaking news » ಗೋಕಾಕ:ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ ಆಚರಣೆ

ಗೋಕಾಕ:ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ ಆಚರಣೆ 

ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ ಆಚರಣೆ

ಬೆಟಗೇರಿ ನ 15 : ಗ್ರಾಮದ ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿ ಶಾಖೆಯಲ್ಲಿ ಸಹಕಾರಿ ಸಪ್ತಾಹ ಪ್ರಯುಕ್ತ 65 ನೇ ಸಹಕಾರಿ ಸಪ್ತಾಹ ಧ್ವಜಾರೋಹಣ ಕಾರ್ಯಕ್ರಮ ಗುರುವಾರ ನ.15 ರಂದು ಮುಂಜಾನೆ 8 ಗಂಟೆಗೆ ಸಂಭ್ರಮದಿಂದ ನಡೆಯಿತು.
ಸಹಕಾರಿ ಪಿತಾಮಹ ಶಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಕಾರ್ಯಕ್ರಮ ನಡೆದ ಬಳಿಕ ಸ್ಥಳೀಯ ಸೊಸಾಯಿಟಿ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸಣ್ಣಪ್ಪ ಐದುಡ್ಡಿ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಶಾಖೆಯ ಮುಖ್ಯ ಕಾರ್ಯನಿವಾಹಕ ವಿಠಲ ನೇಮಗೌಡರ ಸಹಕಾರಿ ಸಪ್ತಾಹ ಆಚರಣೆ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. , ಬನಪ್ಪ ಚಂದರಗಿ, ಕಾಳಪ್ಪ ಕಂಬಾರ, ಪ್ರಕಾಶ ಹಾಲಣ್ಣವರ, ಚೇತನ ಕುದರಿ, ಲಕ್ಕಪ್ಪ ಕೂತಂಬರಿ ಸೇರಿದಂತೆ ಇಲ್ಲಿಯ ಸೊಸಾಯಿಟಿ ಸಲಹಾ ಸಮಿತಿ ಸದಸ್ಯರು, ಸಹಕಾರಿ ಧುರಿಣರು, ಗಣ್ಯರು, ಇತರರು ಇದ್ದರು.

Related posts: