RNI NO. KARKAN/2006/27779|Wednesday, November 6, 2024
You are here: Home » breaking news » ಖಾನಾಪುರ:ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ

ಖಾನಾಪುರ:ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ 

ಲಿಂಗನಮಠದಲ್ಲಿ ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನದ ಆಚರಣೆ
ಖಾನಾಪುರ ನ 21 : ಇಡೀ ಜಗತ್ತಿಗೆ ಇಸ್ಲಾಂ ಧರ್ಮದ ತತ್ವಗಳನ್ನು ಭೋಧಿಸಿದ ಪ್ರವಾದಿ ಮೊಹಮ್ಮದ ಪೈಗಂಬರರು, ಈ ಜಗತ್ತಿನಲ್ಲಿರುವ ಮುಸ್ಲಿಂರು ಇಸ್ಲಾಮಿ ಚಂದ್ರಮಾನದ ಕ್ಯಾಲೆಂಡರ್ ಪ್ರಕಾರ ರಬ್ಬಿವುಲ್ ಅವ್ವಲ್ ತಿಂಗಳಿನ ಹನ್ನೆರಡನೆಯ ತಾರೀಖಿನಂದು ಸಡಗರದಿಂದ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನವನ್ನು ಎಲ್ಲರೂ ಸೇರಿಕೊಂಡು “ಜಶ್ನೇ ಈದ್-ಮಿಲಾದ ಉನ್ ನಬಿ” ಹಬ್ಬವೆಂದು ತುಂಬಾ ಸಡಗರದಿಂದ ಆಚರಣೆ ಮಾಡುತ್ತಾ ಇದ್ದೆವೆಂದು ಮುಸ್ಲಿಂ ಸಮಾಜದ ಮುಖಂಡ ರಫೀಕ ಕಕ್ಕೇರಿ ಹೇಳಿದರು.

ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ ಯಂಗ್ ಕಮೀಟಿ ಹಾಗೂ ಮುಸ್ಲಿಂ ಜಮಾತ ಕಮೀಟಿ ವತಿಯಿಂದ ಬುಧುವಾರದಂದು ಹಮ್ಮಿಕೊಂಡಂತಹ ಪ್ರವಾದಿ ಮೊಹಮ್ಮದ ಪೈಗಂಬರ ಜನ್ಮದಿನಾಚರಣೆ(ಜಶ್ನೇ ಈದ್-ಮಿಲಾದ ಉನ್ ನಬಿ) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಲಿಂಗನಮಠ ಗ್ರಾಪಂ ಅಧ್ಯಕ್ಷ ಡಾ.ಕೆ.ಬಿ.ಹಿರೇಮಠ ಅವರು ಯಾವ ಧರ್ಮವು ಕೂಡ ಅನ್ಯ ಧರ್ಮಕ್ಕೆ ದ್ವೆಷಿಸಿ ನಮ್ಮ ಧರ್ಮವನ್ನು ಕಾಪಾಡಿ ಎನ್ನುವುದಿಲ್ಲ. ಧರ್ಮವನ್ನು ಗೌರವಿಸಿ ಪೂಜಿಸುತ್ತಾರೋ ಅವರೇ ನಿಜವಾದ ಮಾನವತಾವಾದಿ. ಪ್ರವಾದಿ ಮೊಹಮ್ಮದ ಪೈಗಂಬರರು ಧರ್ಮ ಪ್ರಚಾರಕ್ಕಾಗಿ ನಮ್ಮ ಭಾರತ ದೇಶಕ್ಕೆ ಮೊದಲಿಗೆ ಬಂದಾಗ ಅವರಿಗೆ ಸಹಾಯ -ಸಹಕಾರ ನೀಡಿದ್ದೇ ಹಿಂದೂ ಧರ್ಮದ ಮಹಾರಾಜ. ಇಂತಹ ಅನೋನ್ಯವಾದ ಸಂಭಂಧ ಆವತ್ತಿನ ದಿನಗಳಲ್ಲಿ ಹಿಂದೂ-ಮುಸ್ಲಿಂರ ನಡುವೆ ಇತ್ತು, ಆದ್ದರಿಂದ ಮಹಾತ್ಮರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ನಾವು ಒಳ್ಳೆಯ ಸಮಾಜವನ್ನು ನಿರ್ಮಿಸಬಹುದೆಂದು ನುಡಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಬಿಜೆಪಿ ಮುಖಂಡ ರಾಜು ರಪಾಟಿ ಅವರು ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ಇಂದಿನ ಜಗತ್ತಿನಲ್ಲಿ ಹಲವಾರು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ತಮ್ಮ ಸ್ವಾರ್ಥ ಲಾಭಕ್ಕಗೋಸ್ಕರ ಧರ್ಮ ಹಾಗೂ ಜಾತೀಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಾ ಜನರ ಮನಸ್ಸನ್ನು ಕೇಡಿಸುತ್ತಿದ್ದಾರೆ. ಆದ್ದರಿಂದ ನಮ್ಮೂರಲ್ಲಿ ನಾವು ಏನೇ ಸಭೆ-ಸಮಾರಂಭಗಳನ್ನು ಮಾಡಿದರೆ ಎಲ್ಲರೂ ಕೂಡಿಕೊಂಡು ಶಾಂತಿ, ಸಹಬಾಳ್ವೆಯಿಂದ ಮಾಡುತ್ತಾ ಬಂದಿದ್ದು ಮುಂಬರುವ ದಿನಗಳಲ್ಲಿಯೂ ಹೀಗೆ ಮುಂದುವರೆಯೋನೆಂದರು.

ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದ ಪೈಗಂಬರ ಕುರಿತು ಮಹಾಂತೇಶ ಸಂಗೋಳ್ಳಿ, ಪಾಂಡುರಂಗ ಮಿಟಗಾರ, ಬಸವರಾಜ ಮುಗಳಿಹಾಳ ಇತರರು ಮಾತನಾಡಿದರು.
ಕಾರ್ಯವನ್ನು ಶಿಕ್ಷಕ ಜಾವೀದ ತಹಶಿಲ್ದಾರ ನಿರೂಪಿಸಿದರು. ಪತ್ರಕರ್ತ ಕಾಶೀಮ ಹಟ್ಟಿಹೊಳಿ ಸ್ವಾಗತಿಸಿದರು, ಶಿಕ್ಷಕ ಸಿರಾಜ ಬಾಗವಾನ ವಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಜಮಾತ ಅಧ್ಯಕ್ಷ ಅಸಮತಲಿ ಹಟ್ಟಿಹೊಳಿ, ಕಾರ್ಯದರ್ಶಿ ಗಫಾರಸಾಬ ಕಟ್ಟಿಮನಿ, ಉರ್ದು ಶಾಲೆಯ ಮುಖ್ಯಾಧ್ಯಾಪಕ ಅಶಫಾಕ ಪಟೇಲ, ಮಹಾಂತೇಶ ಸಂಗೋಳ್ಳಿ, ಪಾಂಡುರಂಗ ಮಿಟಗಾರ, ಬಸವರಾಜ ಮುಗಳಿಹಾಳ, ಅಮಾನುಲ್ಲಾ ದಲಾಲ, ಸುಭಾನಿ ಗೌಂಡಿ, ಯಾಸೀನಸಾಬ ಕಿತ್ತೂರ, ಬಾಬುಲಾಲ ಪಟೇಲ, ಮುನ್ನಾ ಜಾಮೀನದಾರ, ಅಕ್ಬರಸಾಬ ಖಾನಾಪುರ, ಸಂಜು ಪಾರಿಶ್ವಾಡ, ಹಜರತ್ ಟಿಪ್ಪು ಸುಲ್ತಾನ ಯಂಗ್ ಕಮೀಟಿ ಅಧ್ಯಕ್ಷ ಟಿಪ್ಪು ತೇರಗಾಂವ, ಶಾಮೀರ ಹಟ್ಟಿಹೊಳಿ, ಅಬ್ದುಲ ಹಟ್ಟಿಹೊಳಿ, ಹಜರತ್ ಟಿಪ್ಪು ಸುಲ್ತಾನ ಯಂಗ್ ಕಮೀಟಿಯ ಸರ್ವ ಸದಸ್ಯರು, ಹಾಗೂ ಗ್ರಾಮದ ಸಮಸ್ತ ಜನರು ಹಾಜರಿದ್ದರು.

Related posts: