RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಸಾಧನೆ ಮಾಡಲು ಸಾಧ್ಯ : ಡಾ. ಮಂಜುನಾಥ

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಸಾಧನೆ ಮಾಡಲು ಸಾಧ್ಯ : ಡಾ. ಮಂಜುನಾಥ 

ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಸಾಧನೆ ಮಾಡಲು ಸಾಧ್ಯ : ಡಾ. ಮಂಜುನಾಥ

ಗೋಕಾಕ ನ 24 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಆರೋಗ್ಯವಂತರಾಗಿ ಸಾಧನೆ ಮಾಡಲು ಸಾಧ್ಯವೆಂದು ಇಲ್ಲಿಯ ವಚನಾಮೃತ ಆಸ್ಪತ್ರೆಯ ಡಾ. ಮಂಜುನಾಥ ಶಿಂಧೋಳಿಮಠ ಹೇಳಿದರು.
ಶನಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಯುವ ಅಥ್ಲೇಟಿಕ್ಸ್ ಕ್ಲಬ್ ನವರು ಕ್ರೀಡಾ ಉತ್ಸವದ ನಿಮಿತ್ಯ ಹಮ್ಮಿಕೊಂಡ ತಾಲೂಕ ಮಟ್ಟದ ಮ್ಯಾರಾಥಾನ್ ಓಟಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಾಧಕರಾಗಲು ಶ್ರಮಿಸುತ್ತಿರುವ ಕ್ಲಬನ ಕಾರ್ಯ ಮಾದರಿಯಾಗಿದೆ. ಕ್ರೀಡಾಕೂಟಗಳು ಹಾಗೂ ಉಚಿತ ತರಬೇತಿಗಳನ್ನು ನೀಡುತ್ತಿದ್ದು ಇದರ ಸದುಪಯೋಗದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿ ಬಿ ಗೌಡರ, ಡಾ. ವಿಶ್ವನಾಥ ಶಿಂಧೋಳಿಮಠ, ಡಾ. ಗಂಗಾಧರ ಉಮರಾಣಿ, ವಲ್ಲಭ ಜರತಾರಕರ, ಸಿದ್ಧಾರ್ಥ ಪಾತ್ರೂಟ, ವಿನಾಯಕ ಶಿರಾಳಕರ, ಚನ್ನಯ್ಯ ಶಿಂಧೋಳಿಮಠ, ಸಚೀನ ಕಾಂಬಳೇಕರ, ನಾಗರಾಜ ಹಿರೇಮಠ, ಎಮ್ ಎಲ್ ಪಾಗದ, ಪಿ ಬಿ ಮದಗುಣಕಿ, ಆರ್ ಎಸ್ ಹೆಬ್ಬಾಳೆ, ಎಮ್ ಎಸ್ ಧರೆಗೌಡರ, ದೀಪಕ ಸಿಂದೂರ ಸೇರಿದಂತೆ ಅನೇಕರು ಇದ್ದರು.
ಕಾಲೇಜು ಪುರುಷರ ವಿಭಾಗದಿಂದ ಧರೆಪ್ಪ ಮಗದುಮ್ ಪ್ರಥಮ, ಮೋಹಿನ್ ಖಾಜಿ ದ್ವೀತಿಯ, ಉದ್ದಪ್ಪ ಖಿಲಾರಿ ತೃತೀಯ, ಮಹಿಳೆಯರ ವಿಭಾಗದಿಂದ ದೀಪಾ ಪಾಟೀಲ ಪ್ರಥಮ, ಪ್ರೇಮಾ ಸಾಯನ್ನವರ ದ್ವೀತಿಯ, ಪ್ರೀಯಾಂಕ ದೊಡ್ಡಲಿಂಗಪ್ಪಗೋಳ ತೃತೀಯ, ಪ್ರೌಢಶಾಲಾ ಬಾಲಕರ ವಿಭಾಗದಿಂದ ರಾಜು ಸಿಂತ್ರೆ ಪ್ರಥಮ, ಮಾಳಪ್ಪ ಮಳ್ಳಿ ದ್ವೀತಿಯ, ಭರಮಪ್ಪ ಜಿಂಗಿ ತೃತೀಯ, ಬಾಲಕಿಯರ ವಿಭಾಗದಿಂದ ಲಕ್ಷ್ಮೀ ಗೋಡಿ ಪ್ರಥಮ, ಮಾಲಾ ಐದುಡ್ಡಿ ದ್ವೀತಿಯ, ಮಾಳ್ವಿಕಾ ಹುಣಶಾಳ ತೃತೀಯ, ಪ್ರಾಥಮಿಕ ಬಾಲಕರ ವಿಭಾಗದಿಂದ ಮಲ್ಲೇಶ ಗುಜನಟ್ಟಿ ಪ್ರಥಮ, ಬಸವರಾಜ ಖೋತ ದ್ವೀತಿಯ, ಧರೆಪ್ಪ ದುರದುಂಡಿ ತೃತೀಯ, ಬಾಲಕಿಯರ ವಿಭಾಗದಿಂದ ಶ್ವೇತ ಮುರ್ಕಿಭಾವಿ ಪ್ರಥಮ, ಉದ್ದವ್ವ ಮಾಳ್ಯಾಗೋಳ ದ್ವೀತಿಯ, ಭಾರತಿ ಮಂಗಿ ತೃತೀಯ ಸ್ಥಾನ ಪಡೆದಿದ್ದಾರೆ.

Related posts: