RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ : ಕಲಾವಿದ ವೀರನಾಯ್ಕ ನಾಯ್ಕರ

ಗೋಕಾಕ:ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ : ಕಲಾವಿದ ವೀರನಾಯ್ಕ ನಾಯ್ಕರ 

ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ : ಕಲಾವಿದ ವೀರನಾಯ್ಕ ನಾಯ್ಕರ

ಬೆಟಗೇರಿ ನ 24 : ಹಿರಿಯ ಚಿತ್ರ ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರಂಗಭೂಮಿ ಕಲಾವಿದ ವೀರನಾಯ್ಕ ನಾಯ್ಕರ ಕಂಬನಿ ಮಿಡಿದಿದ್ದಾರೆ.
ನೇರ ನುಡಿಯ ಮೂಲಕ ರಾಜಕೀಯ ರಂಗದಲ್ಲಿ ಗಮನ ಸೆಳೆದ ಅಂಬಿರೀಶ್ ಅವರು ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದರು. ಅವರ ನಿಧನದಿಂದ ಈ ನಾಡು ಒಬ್ಬ ಮಹಾನ್ ರಾಜಕೀಯ ನಾಯಕ, ಹಿರಿಯ ನಟನನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಅಂಬಿ ಅವರ ಅಗಲಿಕೆಗೆ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಈರಯ್ಯ ಹಿರೇಮಠ, ಬಸನಗೌಡ ದೇಯಣ್ಣವರ, ಎಮ್.ಐ.ನೀಲಣ್ಣವರ, ಮಲ್ಲಪ್ಪ ಪಣದಿ, ಶ್ರೀಶೈಲ ಗಾಣಗಿ, ವಿ.ಎಲ್.ಕೋಣಿ, ಸುರೇಶ ಬಡಿಗೇರ, ಈಶ್ವರ ಮುಧೋಳ ಸೇರಿದಂತೆ ಗ್ರಾಮದ ಅಂಬಿರೀಶ್ ಅಭಿಮಾನಿ ಬಳಗದವರು, ಸ್ಥಳೀಯರು ಕಂಬನಿ ಮಿಡಿದಿದ್ದಾರೆ.

Related posts: