ಗೋಕಾಕ:ಗೋಕಾವಿಯ ಕಲಾವಿದರಿಂದ ಜಗತ್ಪ್ರಸಿದ್ದ ಹಂಪಿಯಲ್ಲಿ ದೃಶ್ಯಚಿತ್ರ ಶಿಬಿರ
ಗೋಕಾವಿಯ ಕಲಾವಿದರಿಂದ ಜಗತ್ಪ್ರಸಿದ್ದ ಹಂಪಿಯಲ್ಲಿ ದೃಶ್ಯಚಿತ್ರ ಶಿಬಿರ
ಗೋಕಾಕ ನ.27 ಬೆಳಗಾವಿ ಜಿಲ್ಲೆ, ಗೋಕಾಕದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ 2018-19 ಸಾಲಿನ ಶೈಕ್ಷಣಿಕ ಅದ್ಯಯನ ದೃಷ್ಟಿಯಿಂದ ಜಗತ್ಪ್ರಸಿದ್ದ ಐತಿಹಾಸಿಕ ವಾಸ್ತುಶಿಲ್ಪ ಕಲಾ ತೊಟ್ಟಿಲು ಎಣಿಸಿರುವ ಹಂಪಿಯಲ್ಲಿ ನವೆಂಬರ ದಿನಾಂಕ 18 ರಿಂದ 15 ರವರೆಗೆ ದೃಶ್ಯಕಲಾ ಚಿತ್ರ ಶಿಬಿರ (ಲ್ಯಾಂಡಸ್ಕೇಪ್ ಕ್ಯಾಂಪ್ ) ವನ್ನು ಹಮ್ಮಿಕೊಳ್ಳಲಾಗಿತ್ತು,
ಅಲ್ಲಿಯ ಪ್ರಮುಖ ಶಿಲ್ಪ ಹಾಗೂ ವಾಸ್ತುಶಿಲ್ಪ ನೆಲೆಗಳಾದ ಹೇಮಕೂಟ ವಾಸ್ತ ಸಮುಚ್ಛಯ, ಸಾಲು ಮಂಟಪ, ಕಮಲ ಮಹಲ್, ಕಾವಲು ಗೋಪುರ, ಮಹಾನವಮಿ ದಿಬ್ಬ, ಗಜಶಾಲೆ, ಕಲ್ಲಿನ ರಥ, ಅಂಜನಾದ್ರಿ ಪರ್ವತ, ಕಿಷ್ಕ್ರಿಂದೆ ಪ್ರದೇಶ, ಹಜಾರರಾಮ, ಅಚ್ಛುತ್‍ರಾಯ, ಶ್ರೀರಾಮ, ಕೃಷ್ಣ ದೇವಸ್ಥಾನ, ಉಗ್ರನರಸಿಂಹ, ಬಡವಿಲಿಂಗ ಹಾಗೂ ತುಂಗಭದ್ರ ನದಿತೀರ ಮುಂತಾದ ದೃಶ್ಯಗಳನ್ನು ಕಲಾವಿದ್ಯಾರ್ಥಿಗಳು ತಮ್ಮ ರೇಖೆಹಾಗೂ ವರ್ಣಗಳ ಕೈಚಳಕದಲ್ಲಿ ಸೆರೆಹಿಡಿದರು. ಸ್ಥಳದಲ್ಲಿಯೇ ರಚಿಸುವಾಗಿನ ಸಂದರ್ಭದಲ್ಲಿ ದೇಶ-ವಿದೇಶದ ಪ್ರವಾಸಿಗರು ಹಾಗೂ ಕಲಾ ರಸಿಕರು ಚಿತ್ರಗಳನ್ನು ವೀಕ್ಷಿಸಿ ಕಲಾ ರಸವನ್ನು ಆಸ್ವಾದಿಸಿ ಪ್ರೋತ್ಸಾಹಿಸಿದರು.ಇದೆ ಸಂದರ್ಭದಲ್ಲಿ ಬಳ್ಳಾರಿ ಕ್ಷೇತ್ರದ ನೂತನ ಸಂಸದರಾದ ವ್ಹಿ,ಎಸ್, ಉಗ್ರಪ್ಪಾ ಗೋಕಾವಿಯ ಚಿತ್ರಕಲಾ ಬಳಗದ ಕಾರ್ಯವನ್ನು ಶ್ಲ್ಯಾಘಿಸಿ ಅಭಿನಂದಿಸಿದರು. ಪ್ರಾಚಾರ್ಯ ಜಯಾನಂದ ಮಾದರ ಶಿಬಿರದ ಮಾರ್ಗದರ್ಶನ ಹಾಗೂ ಮುಖ್ಯಸ್ಥಿಕೆಯಲ್ಲಿ ಡಿಪ್ಲೋಮ ಅಂತಿಮ ವರ್ಷದ ಲಕ್ಕಪ್ಪ ಯಡ್ರಾಂವಿ, ಬಾಳಗೌಡ ಪಾಟೀಲ, ಸುರೇಶ ತಿಳಗಂಜಿ, ಶುಭಂ ಜೋಶಿ, ಅವಧೂತ ಕಮತೆ, ಶೀಲಾ ಡೊಂಬಳೆ, ಗಿರಿಜಾ ಪರಪಕರ ,ಸದಾಶಿವ ಬಾರಿಗಿಡದ ,ವಿಠಲ ಮಾಂಗ, ಭೀಮವ್ವಾ ಪೂಜೇರಿ, ನಾಲ್ಕನೇ ವರ್ಷದ ಮಂಜುನಾಥ ಮಡಿವಾಳ,ನೇತ್ರಾವತಿ ಬೆಳಗಲಿ, ಪ್ರವೀಣ ಯಡ್ರಾಂವಿ, ದ್ವಿತೀಯ ವರ್ಷದ ರೋಹಿತ ಗಸ್ತಿ, ಪ್ರಥಮ ವರ್ಷದ ಸಿದ್ರಾಮ ರಾಜಾಪೂರ , ಲಕ್ಕೋಜಿ ಪೂಜೇರಿ, ಪ್ರವೀಣ ಶಿರಗಾಂವಿ ಶಿಬಿರದಲ್ಲಿ ಪಾಲ್ಗೊಂಡು ನೂರಾರು ಕಲಾಕೃತಿಗಳನ್ನು ರಚಿಸಿದರು. ಗೋಕಾವಿ ನಾಡಿನ ಕಲೆಯ ಪ್ರತಿಭೆಯ ಬೆಳಕನ್ನು ಬೀರಿದ ಶಿಬಿರಾರ್ಥಿಗಳನ್ನು ಸಂಸ್ಥೆಯ ಚೇರಮನ್ ಬಸವರಾಜ ಕಡಕಭಾವಿ ಅಭಿನಂದಿಸಿದ್ದಾರೆ.