ಘಟಪ್ರಭಾ:ಸಮತಾ ಸೈನಿಕದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಶಾಖೆ ಉದ್ಘಾಟನೆ
ಸಮತಾ ಸೈನಿಕದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಶಾಖೆ ಉದ್ಘಾಟನೆ
ಘಟಪ್ರಭಾ ನ 27 : ಸಮೀಪದ ಸುಣಧೋಳಿ ಗ್ರಾಮದಲ್ಲಿ ಸಮತಾ ಸೈನಿಕದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಇದರ ಶಾಖೆಯನ್ನು ಸೋಮವಾರ ಉದ್ಘಾಟಿಸಲಾಯಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಯು.ಸಣ್ಣಕ್ಕಿ ಹಾಗೂ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸುಲೆಮಾನ ಜಮಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಸಣ್ಣಕ್ಕಿ, ಗೋಕಾಕ ತಾಲೂಕಾ ಅಧ್ಯಕ್ಷ ಅರ್ಜುನ ಗಂಡವ್ವಗೋಳ, ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಮಂಜುಳಾ ಅಸೂದೆ, ರಿಯಾಜ ಸಂಗೋಳ್ಳಿ, ದಿಲಶಾದ ತಹಶೀಲ್ದಾರ, ಫರೀದಾ ನದಾಫ ಸೇರಿದಂತೆ ಅನೇಕರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮೂಡಲಗಿ ತಾಲೂಕಾ ಉಪಾಧ್ಯಕ್ಷರಾಗಿ ಮಹಾದೇವ ಮೇತ್ರಿ ಹಾಗೂ ಮೂಡಲಗಿ ಘಟಕ ಅಧ್ಯಕ್ಷರಾಗಿ ಶಿವಾನಂದ ಮೇತ್ರಿ ಅವರನ್ನು ಆಯ್ಕೆ ಮಾಡಲಾಯಿತು.