ಮೂಡಲಗಿ:ಡಿ. 6 ರಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನ ಆಚರಣೆ
ಡಿ. 6 ರಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನ ಆಚರಣೆ
ಮೂಡಲಗಿ ಡಿ 4: ಬುದ್ಧ ಬಸವ ಅಂಬೇಡ್ಕರಾದಿಯಾಗಿ ಸಾಮಾಜಿಕ ಪೀಡುಗಾಗಿರುವ ಮೌಡ್ಯಾಚರಣೆಗಳನ್ನು ವಿರೋದಿಸುತ್ತ ಸಮಾಜ ಪರಿವರ್ತನೆಯ ನಿಟ್ಟಿನಲ್ಲಿ ಜಾಗೃತ ಕಾರ್ಯಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಮಾನವ ಬಮಧುತ್ವ ವೇದಿಕೆಯ ವತಿಯಿಂದ ಡಿ. 6 ರಂದು ಮುಂಜಾನೆ 10-30 ಕ್ಕೆ ಬೆಳಗಾವಿಯ ಬುದ್ಧ, ಬಸವ, ಅಂಬೇಡ್ಕರ ಶಾಂತಿಧಾಮ ಸದಾಶಿವನಗರದಲ್ಲಿ ಮಾಜಿ ಸಚಿವ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನವನ್ನು ಹಮ್ಮಿಕೊಂಡಿರುವದಾಗಿ ಮಾನವ ಬಂಧುತ್ವ ವೇದಿಕೆಯ ಮೂಡಲಗಿ ಸಂಚಾಲಕ ಯಲ್ಲಾಲಿಂಗ ವಾಳದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಪಟ್ಟಣದಲ್ಲಿ ಜರುಗಿದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಸ್ವಾಭಿಮಾನ ಸಮಾಜ ನಿರ್ಮಾಣಕ್ಕೆ ಒಂದಾಗಿ ಡಾ. ಬಿ.ಆರ್ ಅಂಬೇಡ್ಕರರವರ ಮಹಾಪರಿನಿರ್ವಾಣ ದಿನವನ್ನು ಮೌಡ್ಯ ವಿರೋಧಿ ದಿನದಲ್ಲಿ ತಾಲೂಕಿನಿಂದ ಹಿಂದೂಳಿದ ಹಾಗೂ ದಿನ ದಲಿತರು ಪಾಲ್ಗೊಳ್ಳಲು ವಿನಂತಿಸಿದರು.
ರಮೇಶ ಸಣ್ಣಕ್ಕಿ, ವಿಲ್ಸನ್ ಖಾನಟ್ಟಿ ಮಾತನಾಡಿ, ಬಂಧುತ್ವ ವೇದಿಕೆಯೊ ದಿನ ದಲಿತರ, ಶೋಷಿತರ ಹಾಗೂ ಸಾಮಾಜಿಕವಾಗಿ ತುಳಿತಕ್ಕಿಡಾದವರಿಗೆ ನೇರವಿನ ಹಾಗೂ ಸಾಮಾಜಿಕ ಪರಿಕಲ್ಪನೆಯನ್ನು ಮೂಡಿಸುವ ಕಾರ್ಯಮಾಡಲು ಸಹಾಯಕವಾಗಿದೆ. ರಾಜ್ಯ 34 ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ವೇದಿಕೆಯ ಸದಸ್ಯರು ಭಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮೂಡಲಗಿ ತಾಲೂಕಿನಿಂದ ಭಾಗವಹಿಸಬೇಕೆಂದರು.
ಶ್ರೀಕಾಂತ ಭಜಂತ್ರಿ ಮಾತನಾಡಿ, ಸಾಮಾಜಿಕ ಹಿತಚಿಂತಕ ಹಾಗೂ ಮುತ್ಸದ್ಧಿ ರಾಜಕಾರಣಿ ಸತೀಶ ಜಾರಕಿಹೊಳಿಯವರಿಗೆ ಬರುವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಎಸ್.ಎಸ್ ಮುಖಂಡರಾದ ಶಾಬು ಸಣ್ಣಕ್ಕಿ, ಪ್ರಭಾಕರ ಬಂಗೆನ್ನವರ, ವಿಲಾಸ ಸಣ್ಣಕ್ಕಿ, ಭೀಮಪ್ಪ ಬನಾನೆ, ಮಂಜುನಾಥ ಮಾಳಪ್ಪಗೋಳ, ಅರುಣ ನುಚ್ಚುಂಡಿ, ರಮೇಶ ಮೇತ್ರಿ, ಸುನೀಲ ಖಾನಟ್ಟಿ, ದೆವೇಂದ್ರ ಯಳ್ಳೂರ, ಸುರೇಶ ಸಣ್ಣಕ್ಕಿ, ಬಸವರಾಜ ಭರನಟ್ಟಿ, ಸಿದ್ದಪ್ಪ ಹಾದಿಮನಿ ಮತ್ತಿತರರು ಉಪಸ್ಥಿತರಿದ್ದರು.