ಘಟಪ್ರಭಾ:ಪಿ.ಎಸ್.ಐ ರಮೇಶ ಪಾಟೀಲ ಅವರಿಗೆ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸನ್ಮಾನ
ಪಿ.ಎಸ್.ಐ ರಮೇಶ ಪಾಟೀಲ ಅವರಿಗೆ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸನ್ಮಾನ
ಘಟಪ್ರಭಾ ಡಿ 4 : ಸ್ಥಳೀಯ ಪೋಲಿಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಪಿ.ಎಸ್.ಐ ರಮೇಶ ಪಾಟೀಲ ಅವರನ್ನು ಬೆಳಗಾವಿ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಈ ಯುವ ಪಡೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಎಸ್.ಐ ರಮೇಶ ಪಾಟೀಲ ಅವರು, ಸಮಾಜದಲ್ಲಿ ಅಪರಾಧಗಳನ್ನು ತಡೆಯುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂಥಹ ಸಂಸ್ಥೆಯವರು ಸ್ಥಳೀಯರ ಸಮಸ್ಯೆಗಳಿಗೆ ಸ್ಪಂಧಿಸುವುದೊಂದಿಗೆ ಜನರಲ್ಲಿ ಕಾನೂನು ಅರಿವು ಮೂಡಿಸಬೇಕು. ಶಾಂತಿ ಸಹಬಾಳ್ವೆಯಿಂದ ಬದುಕಲು ಜನರಿಗೆ ತಿಳುವಳಿಕೆ ನೀಡಬೇಕು ಎಂದರÀಲ್ಲದೇ ಸಾರ್ವಜನಿಕರ ರಕ್ಷಣೆಗೆ ಪೋಲೀಸ್ ಇಲಾಖೆ ಹಗಲಿರುಳೂ ಕಾರ್ಯ ಮಾಡುತ್ತಿದೆ. ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷರಾದ ಅಜೀತ ಪಾಟೀಲ, ವೇದಿಕೆಯ ಪತ್ರಿಕಾ ಕಾರ್ಯದರ್ಶಿ ಶಿವಾನಂದ ಚಂದರಗಿ, ಬಸವರಾಜ ಕೊಡತಿ, ಶ್ರೀಧರ ಸಲಬಣ್ಣವರ್, ಶಿವಾನಂದ ಕೋಳಿ ಸೇರಿದಂತೆ ಅನೇಕರು ಇದ್ದರು.