RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ

ಗೋಕಾಕ:ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ 

ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ

ಗೋಕಾಕ ಡಿ 10: ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ರವಿವಾರದಂದು ಸಾಯಂಕಾಲ ನಗರದ ಲಕ್ಕಡ ಗಲ್ಲಿಯ ಅಹ್ಮದಶಾಹ ಶಾದಿ ಮಹಲ್‍ನಲ್ಲಿ ನಡೆದ ಈದ್‍ಮಿಲಾದ ಮತ್ತು ಮದರಸಾ ಮಕ್ಕಳ ವಾರ್ಷಿಕ ಸ್ನೇಹ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನ ಎಲ್ಲ ಜೀವರಾಶಿಗಳು ಶಾಂತಿ ಮತ್ತು ಸುಖವನ್ನು ಬಯಸಿದ ಹಾಗೆ ಮಾನವೀಯ ಮೌಲ್ಯಗಳನ್ನು ಹೊಂದಿರುವ ನಾವುಗಳು ಸಹ ಶಾಂತಿ ಮತ್ತು ಸುಖವನ್ನು ಬಯಸಬೇಕು ಸೌರ್ಹದಯುತವಾಗಿ ಬಾಳಿ ಬದುಕಿರುವ ಪ್ರವಾದಿ ದಾರ್ಶನಿಕರ ಸಮಾನತೆಯ ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಪ್ರತಿಯೊಬ್ಬ ಮುಸ್ಲಿಂ ಕಲ್ಮಾ, ನಮಾಜ, ರೋಜಾ, ಜಕಾತ, ಹಜ ಎಂಬ ಐದು ಫರ್ಜಗಳನ್ನು ಕಡ್ಡಾಯವಾಗಿ ಪಾಲಿಸಿ ಎಲ್ಲ ಧರ್ಮಿಯರನ್ನು ಪ್ರೀತಿಯಿಂದ ಕಾಣಬೇಕು ಆ ದಿಶೆಯಲ್ಲಿ ಗೋಕಾಕನಲ್ಲಿ ನಾವು ಸೌಹಾರ್ದತೆಯಿಂದ ಬದುಕೊಣ ಎಂದು ಶ್ರೀಗಳು ಹೇಳಿದರು.
ಬೆಂಗಳೂರಿನ ಮೌಲಾನಾ ಮುಜ್ಮಮಿಲ್ ಮಾತನಾಡಿ ರಾಜಕೀಯ ನ್ಯಾಯಾಂಗ ವ್ಯವಸ್ಥೆಗಳು ದಾರ್ಶನಿಕ ಮನೋಭಾವ ಉಳ್ಳ ವ್ಯಕ್ತಿಗಳ ಕೈಯಲ್ಲಿ ಬಂದಾಗ ಮಾತ್ರ ಈ ಜಗತ್ತಿನಲ್ಲಿ ಜನ ಶಾಂತಿಯಿಂದ ಬದುಕಲು ಸಾಧ್ಯ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸ್ವಾರ್ಥಕ್ಕಾಗಿ ಸಮುದಾಯ ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸದಲ್ಲಿ ತೋಡಗಿರುವದರಿಂದ ಇಂದು ನಮ್ಮ ಮಧ್ಯೆ ಸೌಹಾರ್ದತೆ ಮಾಯವಾಗಿದೆ ಇದನ್ನು ಮೆಟ್ಟಿನಿಂತು ನಾವಿಂದು ಭವ್ಯ ಭಾರತದ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಬೆಳಗಾವಿಯ ಮೌಲಾನಾ ಸಾಜೀದ, ಮೌಲಾನಾ ಬಶೀರುಲ್ಲ ಹಕ್ಕ ಕಾಶ್ಮೀ, ಹಾಜಿ ಜಮಶೇದ ಆಲಮಿ, ಶೇಖ ಫತೇವುಲ್ಲಾ ಕೋತವಾಲ, ಕುತುಬುದ್ದೀನ ಗೋಕಾಕ, ಇಲಾಹಿ ಖೈರದಿ, ಹುಸೇನ ಫನಿಬಂಧ, ಮಲ್ಲಿಕ ಪೈಲವಾನ, ಯುಸುಬ ಅಂಕಲಗಿ, ಜುಬೇರ ತ್ರಾಸಗಾರ, ಸೈಯದ ಪಾಶ್ಚಾಪೂರ ಇಮ್ತಿಯಾಜ ತ್ರಾಸಗಾರ, ಮಹಮ್ಮದಹುಸೇನ್ ತ್ರಾಸಗಾರ, ಸಯ್ಯದ ನಾಯಿಕವಾಡಿ, ಮಸ್ತಾನಸಾಬ ಜಮಾದಾರ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಮದರಸಾದ ಪ್ರಸ್ತುತ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕ ಫಾರುಕ ಖೈರದಿ ನಿರೂಪಿಸಿ ವಂದಿಸಿದರು.

Related posts: