RNI NO. KARKAN/2006/27779|Saturday, January 11, 2025
You are here: Home » breaking news » ಮೂಡಲಗಿ:ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೋಳಿಸಲು ಆಗ್ರಹಿಸಿ ಮೂಡಲಗಿಯಲ್ಲಿ ಬೃಹತ್ ಪ್ರತಿಭಟನೆ

ಮೂಡಲಗಿ:ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೋಳಿಸಲು ಆಗ್ರಹಿಸಿ ಮೂಡಲಗಿಯಲ್ಲಿ ಬೃಹತ್ ಪ್ರತಿಭಟನೆ 

ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೋಳಿಸಲು ಆಗ್ರಹಿಸಿ ಮೂಡಲಗಿಯಲ್ಲಿ ಬೃಹತ್ ಪ್ರತಿಭಟನೆ

ಮೂಡಲಗಿ ಡಿ 18 : ಶೈಕ್ಷಣಿಕವಾಗಿ ಕಾರ್ಯಗಳನ್ನು ಮಾಡಲು ಇಲಾಖೆಯ ಹಾಗೂ ಇಲಾಖೇತರ ಕಾರ್ಯಗಳು ಶಿಕ್ಷಕರ ಮೇಲೆ ಹೊರೆಯಾಗುತ್ತಿವೆ. ಸಕಾಲದಲ್ಲಿ ಮಕ್ಕಳಿಗೆ ಬೋಧನಾ ಕಾರ್ಯಚಟುವಟಿಕೆಗಳನ್ನು ಮಾಡಲು ಆಗುತ್ತಿಲ್ಲ ಅಷ್ಟೇ ಅಲ್ಲದೇ ಶಿಕ್ಷಕರಿಗೆ ವೈಯಕ್ತಿಕವಾಗಿ ಕಿರಿಕಿರಿಯಾಗುತ್ತಿದೆ ಎಂದು ಮೂಡಲಗಿ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಬಿ.ಆರ್ ತರಕಾರ ಹೇಳಿದರು.
ಅವರು ನಗರದ ತಹಶಿಲ್ದಾರ ಕಛೇರಿಯಲ್ಲಿ ಮಂಗಳವಾರದಂದು ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೋಳಿಸುವ ಕುರಿತು ಮನವಿ ಅರ್ಪಿಸುವ ಸಂದರ್ಭದಲ್ಲಿ ಮಾತನಾಡಿದರು. ಶಿಕ್ಷಣ ಇಲಾಖೆಯ ಆಯುಕ್ತರುಗಳ ಹೊರಡಿಸಿರುವ ಆದೇಶದಲ್ಲಿ ಬಿ.ಎಲ್.ಒ ಕಾರ್ಯದಿಂದ ಶಿಕ್ಷಕರನ್ನು ಬಳಸಕೊಡದೆಂದು ಆದೇಶವಿದ್ದರು ಇನ್ನುವರೆಗೂ ಯಾವುದೇ ಉತ್ತರ ಬಂದಿರುವದಿಲ್ಲ. ಶಿಕ್ಷಕರಿಗೆ ಬೋಧನೆ ಮಾಡಲು ಬಿಟ್ಟಾಗ ಮಾತ್ರ ಸರಕಾರಿ ಶಾಲೆಗಳ ಉಳಿಯುವಂತಾಗುವದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಠ ಪ್ರವಚನಗಳು ನಡೆಯದಿದ್ದರೆ ನಮ್ಮ ಸರಕಾರಿ ಶಾಲೆಗಳು ಶೈಕ್ಷಣಿಕವಾಗಿ ಹಿಂದೂಳಿಯುತ್ತವೆ. ಆದ್ದರಿಂದ ಸಂಬಂಧ ಪಟ್ಟ ಮೇಲಾಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡದಿದ್ದರೆ ಜಿಲ್ಲೆ ಮತ್ತು ರಾಜ್ಯಾದ್ಯಂತ ಶಿಕ್ಷಕ ಸಮೂಹದಿಂದ ಪ್ರತಿಭಟನೆ ಹಾಗೂ ಹೋರಾಟದ ಹಾದಿ ಅನಿವಾರ್ಯ ಎಂದು ನುಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಎಸ್ ಎಮ್ ಲೋಕನ್ನವರ ಮಾತನಾಡಿ, ಮಕ್ಕಳ ಕಲಿಕೆಗೆ ಮಾರಕವಾಗುವ ಯಾವುದೇ ಕೆಲಸಗಳನ್ನು ಶಿಕ್ಷಕರಿಗೆ ನೀಡಬೇಡಿ, ಗುಣಾತ್ಮಕ ಕಲಿಕೆ ಸಿಗಬೇಕಾದರೆ ಶಿಕ್ಷಕ ವರ್ಗ ಕೊಣೆಯಲ್ಲಿ ಮಗುವಿಗೆ ಕಲಿಕಾ ವಾತಾವರಣ ನಿರ್ಮಾಣ ಮಾಡುವದು ಅವಶ್ಯಕವಾಗಿದೆ. ಅನಗತ್ಯ ಕಾರ್ಯಗಳಿದ್ದ ಸರಕಾರಿ ಶಾಲೆಗಳು ಅವನತಿಯತ್ತ ಸಾಗುತ್ತವೆ. ಕೂಡಲೆ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸಂಘಟನೆಯ ಆರ್.ಎಮ್ ಮಹಾಲಿಂಗಪೂರ, ಎ.ಪಿ ಪರಸಣ್ಣವರ ಮಾತನಾಡಿ, ಇಗಾಗಲೇ ಇಲಾಖೆಯಲ್ಲಿಯ ಎಸ್.ಟಿ.ಎಸ್, ಬಿಸಿಯೂಟ, ಎಸ್.ಡಿ.ಎಮ್.ಸಿ, ಶಿಷ್ಯ ವೇತನ ಮತ್ತು ಏನು ಗೊತ್ತಿರದ ಅಂತರಜಾಲದ ಮಾಹಿತಿ ಒದಗಿಸುವಲ್ಲಿಯೇ ಶಿಕ್ಷಕ ಸಮೂಹ ಹೈರಾಣಾಗಿದೆ. ಈಗ ಬಿ.ಎಲ್.ಒ ಕಾರ್ಯ ಮಾಡುವದರಿಂದ ತರಗತಿಗಳನ್ನು ನಡೆಸುವದೆ ದುಸ್ಥರವಾಗಿದೆ. ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗುವಂತಾಗಿದೆ. ನಲಿ ಕಲಿ ತರಗತಿ ಶಿಕ್ಷಕರು ಬಿ.ಎಲ್.ಒ ಕಾರ್ಯದಲ್ಲಿದ್ದು ಆ ತರಗತಿಗಳ ನಿರ್ವಹನೆ ಮಾಡಲು ಆಗುತ್ತಿಲ್ಲ. ಅನ್ಯಕಾರ್ಯಗಳನ್ನು ನಿರ್ವಹಿಸುತ್ತ ನಡೆದರೆ ನಮ್ಮ ವೃತ್ತಿ ಪಾವಿತ್ರ್ಯತೆ ಕಾಪಾಡಿಕೋಳ್ಳುವದು ಹೇಗೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸಿಲ್ದಾರ ಮುರಳಿಧರ ತಳ್ಳಿಕೇರಿ ಮಾತನಾಡಿ, ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ತಿಳಿಸಲಾಗುವದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಎಮ್ ಬಡಕಲ, ಡಾ ಎಮ್.ಜೆ ಜಿಡ್ಡಿಮನಿ, ಎಸ್.ಎಲ್ ಪಾಟೀಲ, ಎಸ್ ಎಮ್ ದಬಾಡಿ, ವಾಯ್.ಡಿ ಝಲ್ಲಿ, ಎಸ್.ಎಮ್ ಮಂಗಿ,ಶಂಕರ ಗುಡಗುಡಿ, ಲಮಾಣಿ, ಎಸ್.ಆರ್ ಬೆಳಗಲಿ, ಕೆ.ಎಲ್.ಮೀಶಿ, ಎಸ್.ಎ ಕುರಣಗಿ, ಎಸ್.ಎ ದಡ್ಡಿಮನಿ, ಎಮ್.ಬಿ ನಾಯಕರ, ಎಸ್.ಎಸ್ ಪಾಟೀಲ, ಬಸಯ್ಯ ಹಿರೇಮಠ ಮತ್ತಿತರರು ಹಾಜರಿದ್ದರು.

Related posts: