RNI NO. KARKAN/2006/27779|Friday, November 22, 2024
You are here: Home » breaking news » ಘಟಪ್ರಭಾ:ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ : ಡಾ.ಪುಟ್ಟಸ್ವಾಮಿ

ಘಟಪ್ರಭಾ:ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ : ಡಾ.ಪುಟ್ಟಸ್ವಾಮಿ 

ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ : ಡಾ.ಪುಟ್ಟಸ್ವಾಮಿ

ಘಟಪ್ರಭಾ ಡಿ 19 : ಇಂದಿನ ಯಾಂತ್ರಿಕ ಜೀವನದಲ್ಲಿ ಯೋಗದಿಂದ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯವೆಂದು ಮಂಡ್ಯದ ಯೋಗ ಗುರು ಡಾ.ಪುಟ್ಟಸ್ವಾಮಿ ಹೇಳಿದರು.
ಅವರು ಮಂಗಳಾರ ಸಂಜೆ ಸ್ಥಳೀಯ ಎಸ್.ಡಿ.ಟಿ ಕಾಲೇಜ ಸಭಾಂಗಣದಲ್ಲಿ ವಿವೇಕಾನಂದ ಯೋಗ ಟ್ರಸ್ಟ್ ಮಂಡ್ಯ (ರಿ) ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಘಟಪ್ರಭಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 10 ದಿನಗಳ ಉಚಿತ ಯೋಗ ಶಿಬಿರದ ಉದ್ಘಾಟಣಾ ಸಮಾರಂಭದಲ್ಲಿ ಮಾತನಾಡುತ್ತ, ನಮ್ಮ ವಿಪರೀತ ಆಹಾರ ಪದ್ದತಿಯಿಂದ ನಾವು ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ನಮ್ಮ ಸುತ್ತ ಮುತ್ತ ಅನೇಕ ಮಾರಕ ರೋಗಗಳನ್ನು ಗುಣಪಡಿಸುವ ವನಸ್ಪತಿ ಸಸ್ಯಗಳಿದ್ದು, ಅವುಗಳ ಉಪಯೋಗ ಮಾಡಿಕೊಂಡು ನಾವು ಆರೋಗ್ಯವಂತರಾಗಿರಬಹುದು. ನಿರಂತರ ಯೋಗದಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಜೊತೆಗೆ ಅನೇಕ ರೋಗಗಳನ್ನು ನಿವಾರಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸ್ಥಳೀಯ ಖ್ಯಾತ ವೈದ್ಯ ಡಾ.ವಿಲಾಸ ನಾಯಿಕವಾಡಿ, ಜಗತ್ತು ವೇಗದಿಂದ ಬೆಳೆಯುತ್ತಿದ್ದಂತೆ ಜನರಿಗೆ ಬೇರೇ ರೀತಿಯ ರೋಗಳು ಕಾಣಿಸುತ್ತಿವೆ. ಆ ರೋಗಳಿಗೆ ಅಲೋಪತಿಕ ಔಷಧಿಗಳನ್ನು ಕಂಡ ಹಿಡಿಯುವ ಮೊದಲು ಆಯುರ್ವೇದದಲ್ಲಿ ಔಷಧಿಗಳನ್ನು ಕಂಡು ಹಿಡಿಯಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದರಲ್ಲಿ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಮಾರಕ ಡೆಂಗ್ಯೂ ಜ್ವರಕ್ಕೆ ಆಯುರ್ವೇದಿಕ ಔಷಧಿಯನ್ನು ಡಾ.ಪುಟ್ಟಸ್ವಾಮಿ ಅವರೇ ಕಂಡು ಹಿಡಿದಿದ್ದಾರೆ. ಅಂತಹ ನಾಟಿವೈದ್ಯರು ನಮ್ಮೊಂದಿಗೆ ಇದ್ದಾರೆ ಅವರ ಸದುಪಯೋಗ ನಾವು ಪಡೆದುಕೊಳ್ಳಬೇಕು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ ಧುಪದಾಳ ಸಿದ್ಧಾರೂಡ ಮಠದ ಶ್ರೀ ಭೀಮಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ಡಾ.ಪುಟ್ಟಸ್ವಾಮಿ ಅವರು ಉತ್ತಮ ಯೋಗ ಪಟು ಜೊತೆಗೆ ಒಬ್ಬ ಉತ್ತಮ ನಾಟಿವೈದ್ಯರಾಗಿದ್ದು, ಅವರು 10 ದಿನಗಳ ನಮ್ಮ ಮಠದಲ್ಲಿ ರೋಗಿಗಳ ಉಚಿತ ತಪಾಸನೆಯನ್ನು ನಡೆಸಲಿದ್ದಾರೆ. ಜನರು ಅವರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದಭದಲ್ಲಿ ಹಿರಿಯರಾದ ಸುರೇಶ ಪಾಟೀಲ, ಕೆ.ಡಿ.ವಾಲಿಕಾರ, ಎಸ್.ಎಚ್.ಗಿರಡ್ಡಿ, ಶಂಕರ ಕುರಣಗಿ, ಡಾ.ತೇರನಿ, ಡಾ.ವಿಜಯಕುಮಾರ ಪಾಟೀಲ, ಪಿ.ಎ.ನಾಯಿಕ, ಈಶ್ವರ ಗೌಗಲಾ, ಚಿರಾಕಲಿಶಾ ಮಕಾನದಾರ, ಬೀಮಪ್ಪಾ ಖೇಮಾಳೆ, ಪತ್ರಕರ್ತರರಾದ ದಿಲಾವರ ಬಾಳೇಕುಂದ್ರಿ, ಸಲೀಮ ಕಬ್ಬೂರ, ರಮೇಶ ಜಿರಲಿ, ಸುಭಾಸ ಗಾಯಕವಾಡ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ.ಎಸ್.ರಜಪೂತ ನಿರುಪಿಸಿ, ವಂದಿಸಿದರು.

Related posts: