ಗೋಕಾಕ:ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ನಾಗೇಶ್ವರ ಸ್ವಾಮಿಜಿ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ : ಶ್ರೀ ನಾಗೇಶ್ವರ ಸ್ವಾಮಿಜಿ
ಗೋಕಾಕ ಡಿ 24 : ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಉಪ್ಪಾರಹಟ್ಟಿಯ ಶ್ರೀ ಸಿದ್ಧಾರೂಢಮಠದ ಪೂಜ್ಯ ವಿದ್ವಾನ್ ಶ್ರೀ ನಾಗೇಶ್ವರ ಸ್ವಾಮಿಜಿ ಹೇಳಿದರು.
ಅವರು ರವಿವಾರದಂದು ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ,ಬಿ.ಸಿ.ಟ್ರಸ್ಟ್ ಗೋಕಾಕ, ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಉಪ್ಪಾರಹಟ್ಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಷ್ಯ ಇಂದಿನ ಒತ್ತಡದ ಜೀವನದಲ್ಲಿ ಧಾರ್ಮಿಕ, ಸತ್ಸಂಗದಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಇಂತಹ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದೆ. ಧರ್ಮಾಧಿಕಾರಿ ಡಾ| ವಿರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಭಾಗದ ಜನತೆಯ ಉದ್ಧಾರಕ್ಕಾಗಿ ಮತ್ತು ಅವರ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡು ಸುಂದರ ಜೀವನ ಸಾಗಿಸಲು ಹಲವಾರು ಯೋಜನೆಗಳನ್ನು ರೂಪಿಸಿದ್ದು ಜನತೆ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಸತ್ಯ ನಾರಾಯಣ ಪೂಜಾ ಕಾರ್ಯಕ್ರಮದಿಂದ ಜೀವನದಲ್ಲಿನ ಎಲ್ಲ ಕಷ್ಟಗಳನ್ನು ದೂರಮಾಡಬಲ್ಲ ಶಕ್ತಿ ಇದೆ ಎಂದರು.
ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಸುರೇಶ ಮೊಯ್ಲಿ, ಯೋಜನಾಧಿಕಾರಿ ಸುರೇಂದ್ರ, ತಾ.ಪಂ ಸದಸ್ಯೆ ರಂಗವ್ವ ಗೊದಿಗೊಪ್ಪ, ಪರಸಪ್ಪ ಚೂನನ್ನವರ, ಯಲ್ಲಪ್ಪ ನಂದಿ, ಆರ್.ಎಂ.ಅಗಳಣ್ಣವರ, ಗುರುಲಿಂಗ ಬಾಗೋಜಿ ಸೇರಿದಂತೆ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಇದ್ದರು.
ಯೋಜನೆಯ ಮೇಲ್ವಿಚಾರಕಿ ವಂದನಾ ಟಿ. ಅವರು ಸ್ವಾಗತಿಸಿ, ನಿರೂಪಿಸಿದರು.