ಚಿಕ್ಕೋಡಿ:ಬೈಕ್ ಲಾರಿ ಡಿಕ್ಕಿ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವು
ಬೈಕ್ ಲಾರಿ ಡಿಕ್ಕಿ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವು
ಚಿಕ್ಕೋಡಿ ಡಿ 28 : ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಚಿಕ್ಕೋಡಿ ಮತಕ್ಷೇತ್ರದ ಮಾಜಿ ಶಾಸಕ ದತ್ತು ಹಕ್ಯಾಗೋಳ ಸಾವಿಗೀಡಾಗಿದ್ದಾರೆ.
ಬೈಕ್ನಲ್ಲಿ ಶಾಸಕ ದತ್ತು ಹಕ್ಯಾಗೋಳ (70) ತೆರಳುತ್ತಿದ್ದಾಗ ಲಾರಿ ರಭಸದಿಂದ ಬಂದು ಗುದ್ದಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಕಣಗಲಾ ಗ್ರಾಮದ ಬಳಿ ಘಟನೆ ನಡೆದಿದೆ.
ಮೃತ ಶಾಸಕ 2004ರಲ್ಲಿ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದರು.
ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.