ಘಟಪ್ರಭಾ:ಶನಿವಾರ ಕರೆ ನೀಡಿದ ಘಟಪ್ರಭಾ ಬಂದ ಯಶಸ್ವಿ
ಶನಿವಾರ ಕರೆ ನೀಡಿದ ಘಟಪ್ರಭಾ ಬಂದ ಯಶಸ್ವಿ
ಘಟಪ್ರಭ.ಡಿ 29 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರಿಗೆ ವೇತನ ಹಾಗೂ ಸೇವಾ ಭದ್ರತೆ ನೀಡಬೇಕೆಂದು ಆಗ್ರಹಿಸಿ ಪೌರ ಕಾರ್ಮಿಕರು ಹಾಗೂ ಪಟ್ಟಣದ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ ಘಟಪ್ರಭಾ ಬಂದ ಯಶಸ್ವಿಯಾಯಿತು.
ಕಾರ್ಮಿಕರಿಗೆ ಸುಮಾರು 14 ತಿಂಗಳ ವೇತನ ನೀಡುವಂತೆ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಮುಂದೆ ನಡೆಸುತ್ತಿರುವ ಧರಣಿ 8 ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಧೋರಣೆಯನ್ನು ಖಂಡಿಸಿ ಪಟ್ಟಣ ಪಂಚಾಯತಿ ಪೌರಕಾರ್ಮಿಕರು ವಿವಿಧ ಸಂಘಟನೆಗಳು ಕರೆ ನೀಡಿದ ಬಂದ್‍ಗೆ ಬೆಂಬಲ ನೀಡಿ ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸರ್ವ ಸದಸ್ಯರು, ಸಮತಾ ಸೈನಿಕದಳÀ, ಕರವೇ ಸ್ವಾಭಿಮಾನಿ ಬಣ, ಕನ್ನಡ ಸೇನೆ, ಕರ್ನಾಟಕ ಯುವ ಸೇನೆ ಇವುಗಳ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಪಟ್ಟಣದ ವಿಠ್ಠಲ ದೇವಸ್ಥಾನದಿಂದ ಹೊರಟ ಮೆರವಣಿಯು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರಮುಖ ಬೀದಿಗಳಿಲ್ಲಿ ಸಂಚರಿಸಿ ಮೃತ್ಯುಂಜಯ ವೃತ್ತಕ್ಕೆ ಬಂದು ತಲುಪಿತು. ಎಲ್ಲ ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟು ಬಂದ ಮಾಡಿ ಬಂದಗೆ ಸಹಕಾರ ನೀಡಿದರು.
ಅರಭಾವಿಯ ಕಂದಾಯ ನಿರೀಕ್ಷಕ ಆರ್.ಐ.ನೇಸರಗಿ ಅವರು ಮುಖಾಂತರ ತಹಶೀಲದ್ದಾರಿಗೆ ಮನವಿ ಸಲ್ಲಿಸಿ, ಪಟ್ಟಣದ ಹಿರಿಯರಾದ ಡಿ.ಎಮ್ ದಳವಾಯಿ ಮಾತನಾಡಿ, ಹಿಂದಿನ ಪೌರಾಡಳಿತ ಸಚಿವರು ಕಾರ್ಮಿಕರ ವೇತನ ಬಗ್ಗೆ ಪರಿಶೀಲಿಸುವಂತೆ ಆದೇಶ ಹೊರಡಿಸಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ಕಾರ್ಮಿಕರಿಗೆ ಇನ್ನೂ ವೇತನ ಸಂದಾಯವಾಗಿಲ್ಲ. ಪೌರ ಕಾರ್ಮಿಕರು, ವಾಟರಮನ್, ಇಲೇಕ್ಟ್ರಿಷಿಯನ್, ಎಸ್.ಡಿ.ಎ ಮತ್ತು ಕರವಸೂಲಿಗಾರರಿಗೆ ವೇತನ ಪಾವತಿಸಲು ಆದೇಶ ಇಲ್ಲದೇ ಇರುವುದರಿಂದ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಗಳು ಪರಿಶೀಲಿಸಿ ಕಾರ್ಮಿಕರಿಗೆ ಕೂಡಲೇ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ಸುಭಾಸ ಹುಕ್ಕೇರಿ ಮಾತನಾಡಿ ಕಾರ್ಮಿಕರ ಪರಿಸ್ಥಿಯನ್ನು ನೋಡಿ ಪಟ್ಟಣ ಜನರು ಬಂದಗೆ ಬೆಂಬಲ ನೀಡಿದ್ದಾರೆ. ಧರಣಿಯಿಂದ ಪಟ್ಟಣದಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. 8 ದಿನಗಳಿಂದ ನೀರು ಪೂರೈಕೆ ಆಗಿಲ್ಲ, ಬೀದಿ ದೀಪ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕಾರ್ಮಿಕರಗೆ ಅತೀ ಶೀಘ್ರ ಬಾಕಿ ವೇತನ ಪಾವತಿಸಬೇಕು ಎಂದು ಹೇಳಿದರು.
ಪ್ರತಿಭಟಣೆಯಲ್ಲಿ ಎಸ್.ಐ.ಬೆನವಾಡಿ, ಎಂ.ಜಿ.ಮುಚಳಂಬಿ, ಜಿ.ಎಸ್.ರಜಪೂತ, ಪ.ಪಂ ಸದಸ್ಯರಾದ ಮಲ್ಲು ಕೋಳಿ. ಸಲೀಮ ಕಬ್ಬೂರ, ಪ್ರವೀಣ ಮಟಗಾರ, ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ನಾಗರಾಜ ಚಚಡಿ, ಹಿರಿಯರಾದ ಸುರೇಶ ಪೂಜಾರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶಿವಪುತ್ರ ಕೂಗನೂರ, ಶೇಖರ ಕುಲಗೊಡ, ಲಕ್ಷ್ಮಣ ಮೇತ್ರಿ, ಸಮತಾ ಸೈನಿಕದಳದ ಅರ್ಜುನ ಗಂಡವ್ವಗೋಳ, ಶಂಕರ ಸಣ್ಣಕ್ಕಿ ಪರಸರಾಮ ಗೋಕಾಕ, ಕರ್ನಾಟಕ ಯುವ ಸೇನೆಯ ಕೆಂಪಣ್ಣ ಚೌಕಶಿ, ವೀರಣ್ಣ ಸಂಗಮನ್ನವರ, ಬರಮಣ್ಣಾ ಗಾಡಿವ್ವಡರು. ಕನ್ನಡ ಸೇನೆಯ ಅಪ್ಪಾಸಾಬ ಮುಲ್ಲಾ, ಕೆಂಪಯ್ಯಾ ಪುರಾಣಿಕ, ಕರವೇ ಸ್ವಾಭಿಮಾನಿ ಬಣದ ರಮೇಶ ಜಿರಲಿ, ಸಂತೋಷ ಕಂಡ್ರಿ, ಬಸವರಾಜ ಹುಬ್ಬಳ್ಳಿ, ಶಿವಾನಂದಯ್ಯಾ ಕರ್ಪೂರಮಠ ಸೇರಿದಂತೆ ಪ.ಪಂ ನೌಕರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಗ್ರಾಮಸ್ಥರು ಇದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಯುವ ಸೇನೆಯ ಕಾರ್ಯಕರ್ತರು ಸಂಗ್ರಹಿಸಿದ ಧೇಣಿಗೆ ಹಣವನ್ನು ಧರಣಿ ನಿರತ ಪೌರ ಕಾರ್ಮಿಕರಿಗೆ ನೀಡಿಲಾಯಿತು.