ಮೂಡಲಗಿ:ಶಾರೀರಿಕವಾಗಿ ಸದೃಢರಾಗಲು ವ್ಯಾಯಾಮ ಅವಶ್ಯಕವಾಗಿದೆ : ಸಂತೋಷ ಸೋನವಾಲಕರ
ಶಾರೀರಿಕವಾಗಿ ಸದೃಢರಾಗಲು ವ್ಯಾಯಾಮ ಅವಶ್ಯಕವಾಗಿದೆ : ಸಂತೋಷ ಸೋನವಾಲಕರ
ಮೂಡಲಗಿ ಜ 1 : ಶಾರೀರಿಕವಾಗಿ ಸದೃಢರಾಗಲು ಹಿತಮಿತವಾದ ಆಹಾರ ಜೊತೆಯಲ್ಲಿ ಸದೃಢ ಕಾಯ ಹೊಂದಬೇಕಾದರೆ ವ್ಯಾಯಾಮವು ಅವಶ್ಯಕವಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಹಲವಾರು ದೇಹಕ್ಕೆ ಚೈತನ್ಯ ನೀಡುವ ಸಾಮಗ್ರಿಗಳಿದ್ದು ಇವುಗಳ ಉಪಯೋಗ ಪಡೆದುಕೊಂಡು ಆರೋಗ್ಯವಂತ ದೇಹವನ್ನು ಕಾಪಾಡಿಕೋಳ್ಳಬೇಕೆಂದು ಪುರಸಭೆ ಮಾಜಿ ಉಪಾಧ್ಯಕ್ಷ ಪುರಸಭೆ ಸದಸ್ಯ ಸಂತೋಷ ಸೋನವಾಲಕರ ನುಡಿದರು.
ಅವರು ಮಂಗಳವಾರ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ನೂತನ ವರ್ಷಾಚರಣೆ ಜೊತೆಯಲ್ಲಿ ನವಿನ ತಂತ್ರಜ್ಞಾನದ ಫೋರ್ಸ್ ಜಿಮ್ ಉದ್ಘಾಟಸಿ ಯುವಕರನ್ನುದ್ದೇಶಿಸಿ ಮಾತನಾಡಿದರು. ಇಂದಿನ ಒತ್ತಡದ ಜೀವನದಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ವ್ಯಾಯಾಮದ ಕೊರತೆಯಿಂದಾಗಿ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಪ್ರಮುಖವಾಗಿ ಮಧುಮೇಹ, ರಕ್ತದೊತ್ತಡ, ಅಸ್ತಮಾ, ನರದೌರ್ಬಲ್ಯ, ಕೊಬ್ಬಿಂನಾಂಶ ಹೆಚ್ಚಳದಿಂದ ಅನೇಕ ಮಾನಸಿಕ ಒತ್ತಡದಿಂದಾಗಿ ನಮ್ಮ ಸುರಕ್ಷಿತ ದೇಹ ಖಾಯಿಲೆಗಳ ಗೂಡಾಗಿ ರೂಪಗೋಳ್ಳುತ್ತದೆ. ದಿನನಿತ್ಯ ಅಗತ್ಯ ಆಹಾರ ಸೇವನೆ ನಿಯಮಿತ ವ್ಯಾಯಾಮ ಹಾಗೂ ಮಾನಸಿಕ ಒತ್ತಡಗಳಿಂದ ಹೊರಬರಲು ಅಗತ್ಯವಾಗಿ ದ್ಯಾನಗಳನ್ನು ಮಾಡುವ ಮೂಲಕ ಸದೃಢ ಕಾಯ ಹೊಂದಲು ಸಾದ್ಯ ಎಂದು ಹೇಳಿದರು.
ಅಂಜುಮನ್ ಇಸ್ಮಾಂ ಕಮಿಟಿಯ ಅಧ್ಯಕ್ಷ ಅಜೀಜ ಡಾಂಗೆ, ಉತ್ತರ ಕರ್ನಾಟಕ ಜಾನಪದ ಜಾಣ ಹಾಗೂ ಸ್ಯಾಂಡಲ್ವುಡ್ ಗಾಯಕ ಶಬ್ಬಿರ್ ಡಾಂಗೆ ಮಾತನಾಡಿ, ನಗರಗಳಲ್ಲಿ ಅತೀ ಒತ್ತಡದ ಜೀವನದಲ್ಲಿ ದೇಹದ ಬಗ್ಗೆ ನಿಷ್ಕಾಳಜಿ ಹೊಂದಿ ಅನೇಕ ರೋಗಗಳಿಗೆ ತುತ್ತಾಗುತ್ತಿರು ಜನತೆಗೆ ಇಂತಹ ವ್ಯಾಯಾಮ ಶಾಲೆಗಳ ಅವಶ್ಯಕತೆ ತುಂಬಾ ಇರುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪುರಸಭೆ ಸದಸ್ಯರುಗಳಾದ ಜಯಾನಂದ ಪಾಟೀಲ, ಶಿವಾನಂದ ಚಂಡಕಿ, ಹನಮಂತ ಗುಡ್ಲಮನಿ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ್ ಬಳಿಗಾರ, ಆರ್.ಡಿ.ಎಸ್ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ, ವೈದ್ಯರಾದ ಸುಭಾಸ ದಂಡಗಿ, ಕರುನಾಡು ಸೈನಿಕ ತರಭೇತಿ ಕೇಂದ್ರದ ಶಂಕರ ತುಕ್ಕನ್ನವರ, ಅನ್ವರ ನದಾಫ್, ಬಿ.ಆರ್.ಪಿ ಕೆ.ಎಲ್.ಮೀಶಿ, ಎಸ್ಸಿ ಎಸ್ಟಿ ನೌಕರ ಘಟಕದ ಅಧ್ಯಕ್ಷ ಎ.ಪಿ ಪರಸನ್ನವರ, ಇಸ್ಮಾಯಿಲ್ ಇನಾಮದಾರ, ಯಲ್ಲಾಲಿಂಗ ವಾಳದ, ಅಸ್ಗರಅಲಿ ಇನಾಮದಾರ, ಮಕತುಮ್ ಪೈಲವಾನ, ರಿಯಾಜ ಇನಾಮದಾರ, ಚಂದ್ರು ದರೂರ, ರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ಕಾಟೇಶ್ ಬಾಡಿಲೈನ್, ತರಭೇತುದಾರ ಆರೀಪ್ ಇನಾಮದಾರ, ನಫಿಸ್ ಖೈರದಿ ಹಾಗೂ ತರಭೇತಿಯ ಯುವ ಸಮುದಾಯ ಹಾಜರಿದ್ದರು.