RNI NO. KARKAN/2006/27779|Friday, December 13, 2024
You are here: Home » breaking news » ಅಥಣಿ :ಪಕ್ಷದ ವಿರುದ್ಧ ಅಪ ಪ್ರಚಾರ ಮಾಡುವವರಿಗೆ ಕೆಪಿಸಿಸಿ ಯಿಂದ ಮೂಗುದಾರ ಹಾಕಿ : ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ರಮೇಶ ಮನವಿ

ಅಥಣಿ :ಪಕ್ಷದ ವಿರುದ್ಧ ಅಪ ಪ್ರಚಾರ ಮಾಡುವವರಿಗೆ ಕೆಪಿಸಿಸಿ ಯಿಂದ ಮೂಗುದಾರ ಹಾಕಿ : ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ರಮೇಶ ಮನವಿ 

ಪಕ್ಷದ ವಿರುದ್ಧ ಅಪ ಪ್ರಚಾರ ಮಾಡುವವರಿಗೆ ಕೆಪಿಸಿಸಿ ಯಿಂದ ಮೂಗುದಾರ ಹಾಕಿ : ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ರಮೇಶ ಮನವಿ

ಅಥಣಿ ಜೂ 30 : ಪಕ್ಷದ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡುವವರ ವಿರುದ್ಧ ಎಐಸಿಸಿ ಮತ್ತು ಕೆಪಿಸಿಸಿ ಮೂಗುದಾರ ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು
ಅವರು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಥಣಿಯಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲಾ ಕಾಂಗ್ರೇಸ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು

ಕಳೆದ ಒಂದು ವರ್ಷದಿಂದ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೋತ್ತಿ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ ಪರಿಣಾಮ ಇಂದು ಅಥಣಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಸಾಧ್ಯವಾಗಿದೆ
ಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಿಂದ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಕಾರ್ಯಕರ್ತರು ಯಾವುದೆ ಗೊಂದಲಗಳಿಗೆ ಕಿವಿ ಕೋಡದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

 

ಅಥಣಿಯಿಂದ ಸಿ‌.ಎಂ.ಸಿದ್ದರಾಮಯ್ಯ ಸ್ವರ್ಧೆ :

ಬರುವ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರ ದಿಂದ ಸಿ.ಎಂ.ಸಿದ್ದರಾಮಯ್ಯ ಮತ್ತು ರಾಯಭಾಗ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಸ್ವರ್ಧಿಸುವಂತೆ ಮನವಿ ಮಾಡಿದರು

ಸತೀಶ ಜೋತೆ ಯಾವುದೆ ಭಿನ್ನಾಭಿಪ್ರಾಯ ವಿಲ್ಲಾ :

ಸತೀಶ ಮತ್ತು ನನ್ನ ಜೋತೆ ಯಾವುದೆ ಭಿನ್ನಾಭಿಪ್ರಾಯ ವಿಲ್ಲಾ ಕಾಂಗ್ರೆಸ್ ಪಕ್ಷ ಸತೀಶ ಅವರನ್ನು ಎಐಸಿಸಿ ಕಾರ್ಯದರ್ಶಿ ಮತ್ತು ನನಗೆ ಸಂಪುಟ ದರ್ಜೆಯ ಸಚಿವ ಮಾಡಿದೆ ಇಬ್ಬರು ಸಹೋದರರು ಒಂದು ಗುಡಿ ಬರುವ ಚುನಾವಣೆಯಲ್ಲಿ ಕನಿಷ್ಠ ಪಕ್ಷ 12 ರಿಂದ 15 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗೆಲಿಸುತ್ತೇವೆಂದು ಭರವಸೆ ನೀಡಿದರು

Related posts: